ಯುವನಟಿಯರನ್ನು ಕನ್ನಡ ಸಿನಿರಂಗಕ್ಕೆ (Kannada Film Industry) ಪರಿಚಯಿಸುವ ವಿಭಿನ್ನ ಕಾರ್ಯಕ್ರಮವೇ 'ಮಹಾನಟಿ' (Mahanati Season 2). ಇದೇ ಶನಿವಾರ (ನವೆಂಬರ್ 8) ಹಾಗೂ ಭಾನುವಾರ (ನವೆಂಬರ್ 9) ಫಿನಾಲೆ ನಡೆದಿದೆ. ಅಂತೂ ವಿನ್ನರ್ ಅನೌನ್ಸ್ ಆಗಿದೆ. ಇದೀಗ ಮಹಾನಟಿ ಸೀಸನ್-2ರ ವಿಜೇತರಾಗಿ ಮಂಗಳೂರಿನ ವಂಶಿ (Vamshi Winner) ಹೊರಹೊಮ್ಮಿದ್ದಾರೆ. ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದರು.
ಮಂಗಳೂರಿನ ವಂಶಿ ರತ್ನಾಕರ್ ವಿಜಯಶಾಲಿ
ಮಹಾನಟಿ ಸೀಸನ್- ಮಂಗಳೂರಿನ ವಂಶಿ ರತ್ನಾಕರ್ ವಿಜಯಶಾಲಿಯಾಗಿದ್ದಾರೆ. ವೈಟ್‌ಗೋಲ್ಡ್ ವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಸಿಕ್ಕಿದೆ. ಮಹಾನಟಿ ಸೀಸನ್-2ರ ಮೊದಲ Runner Up ಬೆಳಗಾವಿಯ ವರ್ಷಾ ಡಿಗ್ರಜೆ ಆಗಿದ್ದಾರೆ. ಅವರಿಗೆ ಜಾರ್ ಆ್ಯಪ್ ವತಿಯಿಂದ 10 ಲಕ್ಷ ರೂ.ಗಳ ನಗದು ಬಹುಮಾನ ಸಿಕ್ಕಿದೆ. ಮಹಾನಟಿ ಸೀಸನ್-2ರ ಎರಡನೇ ರನ್ನರ್ ಅಪ್ ಮೈಸೂರಿನ ಶ್ರೀಯ ಅಗಮ್ಯ ಅವರಿಗೆ ಸಿಕ್ಕಿದೆ.
ಇದನ್ನೂ ಓದಿ: Bigg Boss Kannada: ಗಿಲ್ಲಿಗೆ ಹೊಡೆದ ರಿಷಾ ಔಟ್ ಆಗೋದು ಫಿಕ್ಸ್? ಮನೆಮಂದಿ ನಿರ್ಧಾರ ಏನು?
ಶೋನ ಮುಖ್ಯ ಉದ್ದೇಶ
ಕಿರುತೆರೆಯಿಂದ ಸಿಲ್ವರ್ ಸ್ಕ್ರೀನ್‌ಗೆ ಪ್ರತಿಭಾನ್ವಿತ ನಟಿಯರಿಗೆ ಅವಕಾಶ ಕೊಡಿಸುವುದು ಮಹಾನಟಿ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೇ ಬೇರೆ ಬೇರೆ ರೌಂಡ್ಸ್‌ಗಳ ಮೂಲಕ ಈ ನಟಿಯರಿಗೆ ಸಿಲ್ವರ್ ಸ್ಕ್ರೀನ್‌ನಲ್ಲಿ ಹೇಗೆ ಕಾಣಿಸಬೇಕು, ಹೇಗೆ ನಟಿಸಬೇಕು ಎನ್ನುವುದಲ್ಲದೆ ಬೆಳ್ಳಿತೆರೆಯ ಇನ್ನಷ್ಟು ವಿಷಯಗಳ ಬಗ್ಗೆ ಟ್ರೈನ್ ಮಾಡಲಾಗಿದ್ದು ಇದು ಈ ನಟಿಯರಿಗೆ ಮುಂದಿನ ದಿನಗಳಲ್ಲಿ ಸಹಾಯ ಆಗಲಿದೆ.
ಮಹಾನಟಿ ಸೀಸನ್ 1 ಅತ್ಯಂತ ಯಶಸ್ವಿ ಆಗಿದ್ದು ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಸಿನೆಮಾ ಹಾಗೂ ಕಿರುತೆರೆಯಲ್ಲಿ ಅವಕಾಶಗಳು ಲಭಿಸಿವೆ.
ಶಾರ್ಟ್ ಮೂವಿಗಳಲ್ಲಿ ನಟನೆ
ಮಹಾನಟಿ ಬಿ.ಸರೋಜಾ ದೇವಿ ಅವರ ಸ್ಮರಣಾರ್ಥ ಈ ಕಿರೀಟವನ್ನು ನೀಡಲಾಗುತ್ತಿದ್ದು, ಸರೋಜಮ್ಮನವರು ನಾಡು ಕಂಡ ಅದ್ವಿತೀಯ ಕಲಾವಿದೆ ಎಂದು ಸುಧಾರಾಣಿ ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಡಮಾಲ್ ಡುಮಲ್ ಡಕ್ಕಾ, ಈ ಇಬ್ಬರು ಹೊರ ಹೋಗೋದು ಪಕ್ಕಾ?
ಅಂತಿಮ ಸ್ಪರ್ಧಿಗಳಾಗಿರುವವರು ಇದಾಗಲೇ ನಿರ್ದೇಶಕರುಗಳಾದ ಹರಿ ಸಂತೋಷ್, ಪನ್ನಗ ಭರಣ, ಕವಿರಾಜ್, ಶ್ರೀನಿಧಿ ಬೆಂಗಳೂರು ಹಾಗೂ ಉಮೇಶ್ ಕೆ. ಕೃಪ ನಿರ್ದೇಶಿಸಿರುವ ಶಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ. ಈ ಶಾರ್ಟ್ ಮೂವಿಗಳ ಸ್ಕ್ರೀನಿಂಗ್ ಇದೇ 3ರಂದು ಆಗಿದೆ.