ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada: ಗಿಲ್ಲಿಗೆ ಹೊಡೆದ ರಿಷಾ ಔಟ್‌ ಆಗೋದು ಫಿಕ್ಸ್‌? ಮನೆಮಂದಿ ನಿರ್ಧಾರ ಏನು?

ಬಾತ್​ರೂಮ್ ವಿಚಾರಕ್ಕೆ ಗಿಲ್ಲಿ (Gilli) ನಟ ಮತ್ತು ರಿಷಾ ನಡುವೆ ಜಗಳ ಆಗಿತ್ತು. ಜಗಳದ ಭರದಲ್ಲಿ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದರು. ನಿನ್ನೆಯ ಸಂಚಿಕೆಯಲ್ಲಿ ಕಿಚ್ಚ (Sudeep) ಅವರು ಈ ವೇದಿಕೆ ಮೇಲೆ ಕೆಲವು ನಿರ್ಧಾರ ನಾವು ತೆಗೆದುಕೊಳ್ಳುತ್ತೇವೆ. ಮನೆ ಒಳಗಡೆ ಅದು ದೊಡ್ಡ ವಿಚಾರ ಆಗಲೇ ಇಲ್ಲ. ಹೊರಗಡೆ ಆಗಿದೆ ಎಂದು ಹೇಳಿದ್ದರು. ಇದೀಗ ಈ ಬಗ್ಗೆ ಪ್ರೋಮೋ ಔಟ್‌ ಆಗಿದೆ. ರಿಷಾ ಮನೆಯಿಂದ (Eliminate) ಹೊರಗೆ ಹೋಗ್ತಾರಾ? ಎಂಬುದು ವೀಕ್ಷಕರಲ್ಲಿ ಇರೋ ಕುತೂಹಲ.

ಗಿಲ್ಲಿಗೆ ಹೊಡೆದ ರಿಷಾ ಔಟ್‌ ಆಗೋದು ಫಿಕ್ಸ್‌? ಮನೆಮಂದಿ ನಿರ್ಧಾರ ಏನು?

Risha Gilli Bigg Boss Kannada -

Yashaswi Devadiga
Yashaswi Devadiga Nov 9, 2025 8:57 AM

ಸೂಪರ್ ಸಂಡೇ ವಿತ್ ಬಾದ್‌ಷಾ (Bigg Boss Kannada 12) ಸುದೀಪ ಶನಿವಾರದ ಸಂಚಿಕೆಯಲ್ಲಿ ವೀಕ್ಷಕರು ಕಾದಿದ್ದು, ರಿಷಾ (Risha) ಹೊಡೆದ ವಿಚಾರಕ್ಕೆ. ಅದರ ಬಗ್ಗೆ ಸುದೀಪ್‌ ಅವರು ಭಾನುವಾರದ ಸಂಚಿಕೆಯಲ್ಲಿ ತಿಳಿಸುವುದಾಗಿ ಹೇಳಿದ್ದರು. ಇದೀಗ ಈ ಬಗ್ಗೆ ಪ್ರೋಮೋ ಔಟ್‌ ಆಗಿದೆ. ರಿಷಾ ಮನೆಯಿಂದ (Eliminate) ಹೊರಗೆ ಹೋಗ್ತಾರಾ? ಎಂಬುದು ಸ್ಪರ್ಧಿಗಳು ವೋಟ್‌ ಮಾಡಿದ ಆಧಾರದ ಮೇಲೆ ನಿಂತಿದೆ. ಹಾಗಾದ್ರೆ ಸುದೀಪ್‌ ಕೊಟ್ಟ ಟ್ವಿಸ್ಟ್‌ ಏನು?

ದೇವರು ಕೊಟ್ಟ ಕೈಗಳನ್ನ ಈ ರೀತಿ ಬಳಸಿ!

ಸುದೀಪ್‌ ಮಾತನಾಡಿ, ʻಒಬ್ಬರ ಮೇಲೆ ಕೈ ಎತ್ತಿದ್ರೆ ಬಿಗ್‌ ಬಾಸ್‌ ಮನೆಯಲ್ಲಿ ಅದು ಒಪ್ಪಿಗೆ ಇಲ್ಲ. ದೇವರು ಕೊಟ್ಟ ಕೈಗಳನ್ನ ಒಳ್ಳೆಯದಕ್ಕೆ ಅಥವಾ ಗೆಲ್ಲೋದಕ್ಕೆ ಬಳಿಸಿಕೊಳ್ಳಬೇಕು. ಒಬ್ಬ ಹುಡುಗ ಇದೇ ಥರ ಹುಡುಗಿ ಹೊಡೆದಿದ್ರೆ, ಏನೇನಾಗಿರೋದು. ಇನ್ನು ಮುಂದೆ ಬಿಗ್‌ ಬಾಸ್‌ ಮನೆಯಲ್ಲಿ ಇದೆಲ್ಲ ನಡೆ ಕೂಡದು.

ಇದನ್ನೂ ಓದಿ: Bigg Boss Kananada 12: ಎರಡು ವಾರ ಬಿಗ್​​ಬಾಸ್ ಸ್ಮೋಕಿಂಗ್ ರೂಂ ಬಂದ್ ಮಾಡಿಸಿದ ಕಿಚ್ಚ ಸುದೀಪ್! ಕಾರಣ ಇದು

ಅದಕ್ಕೆ ಶಂಕುಸ್ಥಾಪನೆ ಈಗ. ಈಗ ಸ್ಪರ್ಧಿಗಳ ಮುಂದೆ ಹಳದಿ ಮತ್ತು ಕೆಂಪು ಕಾರ್ಡ್‌ ಇದೆ. ಹಳದಿ ಕೊಟ್ಟು ವಾರ್ನ್‌ ಕೊಡುತ್ತೀರೋ ಅಥವಾ, ರೆಡ್‌ ಕಾರ್ಡ್‌ ಕೊಟ್ಟು ಮನೆಯಿಂದ ಹೊರಗೆ ಹಾಕುತ್ತೀರೋ ಅನ್ನೋ ನಿರ್ಧಾರ ಸ್ಪರ್ಧಿಗಳದ್ದು ಎಂದರು ಕಿಚ್ಚ. ಹೀಗಾಗಿ ಇಂದು ರಿಷಾ ಅವರು ಮನೆಯಿಂದ ಔಟ್‌ ಆಗ್ತಾರೋ ಅಥವಾ ಬಚಾವ್‌ ಆಗ್ತೋರೋ ಎನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ವಿಟಿ ಪ್ಲೇ ಮಾಡಿಸಿದ ಕಿಚ್ಚ

ಶನಿವಾರ ಹೆಚ್ಚಾಗಿ ಸುದೀಪ್‌ ಅವರು ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಂಡರೆ, ಭಾನುವಾರ ಸ್ವಲ್ಪ ತಮಾಷೆಯಾಗಿ ನಿರೂಪಣೆ ಮಾಡ್ತಾರೆ. ಆದರೆ ಈ ವಾರ ಭಾನುವಾರವೂ ಸ್ಪರ್ಧಿಗಳಿಗೆ ಪಾಠ ಮಾಡ್ತಿದ್ದಾರೆ ಕಚ್ಚ. ಗಿಲ್ಲಿ ನಟ ಮತ್ತು ರಿಷಾ ನಡುವಿನ ಜಗಳದ ಟಾಪಿಕ್​​ ಚರ್ಚಿಸಲು ಅವರು ನಿರ್ಧರಿಸಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಕಿಚ್ಚ ಅವರು ಈ ವೇದಿಕೆ ಮೇಲೆ ಕೆಲವು ನಿರ್ಧಾರ ನಾವು ತೆಗೆದುಕೊಳ್ಳುತ್ತೇವೆ. ಮನೆ ಒಳಗಡೆ ಅದು ದೊಡ್ಡ ವಿಚಾರ ಆಗಲೇ ಇಲ್ಲ. ಹೊರಗಡೆ ಆಗಿದೆ ಎಂದು ಹೇಳಿದ್ದರು.

ಬಾತ್​ರೂಮ್ ವಿಚಾರಕ್ಕೆ ಗಿಲ್ಲಿ ನಟ ಮತ್ತು ರಿಷಾ ನಡುವೆ ಜಗಳ ಆಗಿತ್ತು. ಜಗಳದ ಭರದಲ್ಲಿ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದರು.

ಏನಾಗಿತ್ತು ಜಗಳ?

ಮೊದಲಿಗೆ ಬಕೆಟ್‌ ವಿಚಾರಕ್ಕೆ ಗಿಲ್ಲಿ, ರಿಷಾ ಅವರ ಬಳಿ ಕೇಳಿದ್ದರು. ಬಕೆಟ್‌ವನ್ನು ಕೊಡದೇ ಇರದ ಕಾರಣ ಗಿಲ್ಲಿ ಅವರು ಬಾತ್‌ ರೂಮ್‌ ಏರಿಯಾದಲ್ಲಿ ರಿಷಾ ಅವರ ಬಟ್ಟೆಗಳನ್ನು ಹಾಕುತ್ತಾರೆ. ಬಾತ್‌ರೂಮ್‌ನಿಂದ ಬಂದ ರಿಷಾ ರೊಚ್ಚಿಗೆದ್ದು ಕೂಗಿ, ಗಿಲ್ಲಿಗೆ ಹೊಡೆದಿದ್ದರು. ಬಟ್ಟೆ ತಂದು ಬಾತ್‌ ರೂಮ್‌ ಬಳಿ ಇಟ್ಟಿರೋದು ತಮಾಷೆನಾ? ಎಂದು ಗಿಲ್ಲಿ ಅವರನ್ನು ತಳ್ಳಿದ್ದರು.

ಇದನ್ನೂ ಓದಿ: Bigg Boss Kannada 12: ಕಾವ್ಯಾ -ಗಿಲ್ಲಿ ಗೆಳೆತನದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಚಂದ್ರಪ್ರಭಗೆ ಸುದೀಪ್ ಖಡಕ್‌ ಕ್ಲಾಸ್‌

ರಕ್ಷಿತಾ ಅವರು ಎಷ್ಟೇ ತಡೆಯಲು ಪ್ರಯತ್ನಿಸಿದರೂ ರಿಷಾ ಕೋಪ ಮಾತ್ರ ತಣ್ಣಗಾಗಿರಲಿಲ್ಲ.ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದರು. ಸೂಟ್​ಕೇಸ್​ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದರು.