ಜೀ ಕನ್ನಡ ವಾಹಿನಿಯ (Zee Kannada) ಹೆಮ್ಮೆಯ ಶೋ ‘ಮಹಾನಟಿ’ (mahanati). ನಟಿಯಾಗಬೇಕು ಎಂಬ ಕನಸು ಹೊತ್ತ ಅದೆಷ್ಟೋ ಯುವ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸಿತ್ತು. ಮಹಾನಟಿ ಸೀಸನ್ 2ರ ಸ್ಪರ್ಧಿಯಾಗಿದ್ದ ವರ್ಷಾ ಡಿಗ್ರಜೆ (varsha digraje) ಬಗ್ಗೆ ವೀಕ್ಷಕರಿಗೆ ಗೊತ್ತೇ ಇದೆ. ಉತ್ತರ ಕರ್ನಾಟಕದ ಪಕ್ಕಾ ಜವಾರಿ ಹುಡುಗಿ ರನ್ನರ್ ಅಪ್ (Runner Up) ಆಗಿ ಹೊರ ಹೊಮ್ಮಿದರು. ಇದೀಗ ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಉತ್ತರ ಕರ್ನಾಟಕ ಪಾತ್ರದಲ್ಲೇ ಮಾಡುತ್ತಿದ್ದೇನೆ
ವರ್ಷಾ ಡಿಗ್ರಜೆ ಮಾತನಾಡಿ, ಮಹಾನಟಿ ಆದಮೇಲೆ ನಾನು ಕೂಡ ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದೆ. ನಾನು ಈಗ ದರ್ಶನ್ ಸಿನಿಮಾದಲ್ಲಿ ಒಂದು ಪಾತ್ರ ಮಾಡುತ್ತಿದ್ದೇನೆ. ಇನ್ನು ತಂಡದ ಜೊತೆ ನಟನೆ ಕಲಿಯುತ್ತಿದ್ದೇನೆ. ಇದು ಖುಷಿಯ ಸಂಗತಿ. ಇಲ್ಲಿ ಉತ್ತರ ಕರ್ನಾಟಕ ಪಾತ್ರದಲ್ಲೇ ಮಾಡುತ್ತಿದ್ದೇನೆ. ಪೃಥ್ವಿ ಅಂಬಾರ್ ಅವರ ದಿಯಾ ಸಿನಿಮಾ ನೋಡಿದ್ದೆ. ಈಗ ಅವರ ಸಿನಿಮಾದಲ್ಲಿ ನಟನೆ ಮಾಡುತ್ತಿರೋದು ಖುಷಿ ಇದೆ. ಇದು ಕಾಮಿಡಿ ಜಾನರ್ ಅಲ್ಲಿ ಬರ್ತಿದೆ ಎಂದರು.
ಇದನ್ನೂ ಓದಿ: Jungle Boogie: ಬರ್ತಿದೆ 'ಜಂಗಲ್ ಬೂಗಿ' ರಿಯಾಲಿಟಿ ಶೋ: ಭಾಗವಹಿಸಲು ಆಸಕ್ತಿ ಇದೆಯಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಕಾಂಟೆಕ್ಟ್ ತುಂಬಾ ಮುಖ್ಯ
ಮಹಾನಟಿಯಲ್ಲಿ 10 ಲಕ್ಷ ಹಣ ಬಂತು. ಆದರೆ ಇನ್ವೆಸ್ಟ್ ಮಾಡೋ ಅಷ್ಟು ನನಗೆ ತಾಕತ್ತು ದೇವರು ಕೊಟ್ಟಿಲ್ಲ. ನಾನು ನನ್ನ ಜಾಬ್‌ಗೂ ರಿಸೈನ್ ಮಾಡಿದ್ದೆ. ಇದೀಗ ಸಿನಿ ರಂಗವನ್ನು ಚೂಸ್ ಮಾಡಿದ್ದೀನಿ. ರಿಸ್ಕ್ ತೆಗೆದುಕೊಂಡಿದ್ದೀನಿ. ಮೊದಲಿಂದಲೂ ನಟನೆ ಮಾಡಬೇಕು ಅಂತ ಆಸೆ ಇತ್ತು. ಇಂಡಸ್ಟ್ರೀಯಲ್ಲಿ ಕಾಂಟೆಕ್ಟ್ ತುಂಬಾ ಮುಖ್ಯ.
ನಾನು ಹಣದ ವಿಚಾರದಲ್ಲಿಯೂ ನೋಡಿಕೊಂಡು ಮಾಡಬೇಕು. ನನ್ನ ಫ್ಯಾಮಿಲಿಯನ್ನು ನಾನೇ ನೋಡಿಕೊಳ್ಳಬೇಕು. ಇದರ ಜೊತೆಗೆ ನಾನು ನಿರೂಪಣೆಯನ್ನೂ ಮಾಡುತ್ತೇನೆ. ಇನ್ನು ಕೆಲವು ಕಡೆ ಗೆಸ್ಟ್ ಆಗಿಯೂ ಹೋಗ್ತಾ ಇದ್ದೀನಿ. ಕಂದಮ್ಮ ಅಂತ ಆಲ್ಬಂ ಸಾಂಗ್ ಕೂಡ ಮಾಡುತ್ತಿದ್ದೇನೆ. ಸೀರಿಯಲ್ ಹೋಗುವ ಯೋಚನೆಯೂ ಇದೆ ಎಂದರು. ರಮೇಶ್ ಸರ್ ಕೂಡ ಪ್ರಾಜೆಕ್ಟ್ ಇದ್ದರೆ ಹೇಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Lakshmi Nivasa Serial: ಚಿನ್ನು ಮರಿಯ ಹೊಸ ಹೆಜ್ಜೆ! ಸೈಕೋ ಜಯಂತ್‌ಗೆ ಇದೆ ಮಾರಿಹಬ್ಬ
ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಜೊತೆಗೆ ಖ್ಯಾತ ಹಾಸ್ಯ ನಟ ತಬಲ ನಾಣಿ ಮತ್ತು ನಟಿ ನಿಶಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಮ್ಯಾಟ್ರಿಜ್ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ.