ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Virosh Wedding: ಬರುವ ಸೊಸೆ ಹೀಗಿರಬೇಕು! ವಿಜಯ್ ದೇವರಕೊಂಡ ಪೋಷಕರ ಕಂಡೀಷನ್ ಏನಿತ್ತು?

Rashmika Vijay: 'ವಿರೋಷ್' ವಿವಾಹ (Virosh Marriage) ಅಧಿಕೃತವಾಗಿ ಅನೌನ್ಸ್‌ ಆಗಿದ್ದಾಗಿನಿಂದ ಅಭಿಮಾನಿಗಳು ಹಳೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಹುಡುಕಿ ವೈರಲ್‌ ಮಾಡುತ್ತಿದ್ದಾರೆ. ವಿವಾಹಕ್ಕೂಮೊದಲು ಈ ಜೋಡಿ ಹಲವು ವರ್ಷಗಳ ಮೊದಲು ಪರಸ್ಪರ ಪರಿಚಿತರಾಗಿದ್ದಾರೆ. ವಿಜಯ್ ಅವರ ಪೋಷಕರಾದ ಗೋವರ್ಧನ್ ರಾವ್ ಮತ್ತು ಮಾಧವಿ ತಮ್ಮ ಕನಸಿನ ಸೊಸೆ ಬಗ್ಗೆಈ ಹಿಂದೆ ಮಾತನಾಡಿರುವ ವಿಡಿಯೋವನ್ನು ಫ್ಯಾನ್ಸ್‌ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಇಂದು ( ಫೆಬ್ರವರಿ 23 ) ಉದಯಪುರಕ್ಕೆ ಬಂದಿಳಿದಿದ್ಧಾರೆ. ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ವರದಿಯ ಪ್ರಕಾರ ರಾಜಸ್ಥಾನದ (Rajasthana) ಉದಯಪುರದಲ್ಲಿನ ಐಶಾರಾಮಿ ರೆಸಾರ್ಟ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವೈಭವದ ಮದುವೆಗೆ ಸಾಕ್ಷಿಯಾಗಲಿದೆ. 'ವಿರೋಷ್' ವಿವಾಹ (Virosh Marriage) ಅಧಿಕೃತವಾಗಿ ಅನೌನ್ಸ್‌ ಆಗಿದ್ದಾಗಿನಿಂದ ಅಭಿಮಾನಿಗಳು ಹಳೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಹುಡುಕಿ ವೈರಲ್‌ ಮಾಡುತ್ತಿದ್ದಾರೆ.

ಕನಸಿನ ಸೊಸೆ ಹೇಗಿರಬೇಕು?

ವಿವಾಹಕ್ಕೂಮೊದಲು ಈ ಜೋಡಿ ಹಲವು ವರ್ಷಗಳ ಮೊದಲು ಪರಸ್ಪರ ಪರಿಚಿತರಾಗಿದ್ದಾರೆ. ಈಗ, ವಿಜಯ್ ಅವರ ಪೋಷಕರಾದ ಗೋವರ್ಧನ್ ರಾವ್ ಮತ್ತು ಮಾಧವಿ ತಮ್ಮ ಕನಸಿನ ಸೊಸೆ ಬಗ್ಗೆಈ ಹಿಂದೆ ಮಾತನಾಡಿರಿವ ವಿಡಿಯೋವನ್ನು ಫ್ಯಾನ್ಸ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Annayya Kannada Serial: ಪರಶು ಮುಖವಾಡ ಬಯಲಾಗುತ್ತಾ? ರತ್ನಾಗೆ ಮಂಗಳ ಸೂತ್ರದ ಭಾಗ್ಯ ‌ಸಿಗುತ್ತಾ?

2018 ರಲ್ಲಿ ನಡೆದ ಗೀತ ಗೋವಿಂದಂ ಸಕ್ಸೆಸ್‌ ಇವೆಂಟ್‌ನಲ್ಲಿ , ನಿರೂಪಕಿ ಸುಮಾ ವಿಜಯ್ ಅವರ ಪೋಷಕರೊಂದಿಗೆ ಮಾತನಾಡುವಾಗ ಅವರ ಮದುವೆಯ ಬಗ್ಗೆ ಪ್ರಸ್ತಾಪಿಸಿದರು . ಆ ಸಮಯದಲ್ಲಿ ಈ ಸಿನಿಮಾದಲ್ಲಿ ರಶ್ಮಿಕಾ ಅವರೊಂದಿಗೆ ಅದರಲ್ಲಿ ಕೆಲಸ ಮಾಡಿದ್ದರು. ಆಗ ವಿಜಯ್‌ ಅವರ ತಾಯಿ ಮುಂದೆ ಬರುವ ಸೊಸೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ನೀಡಿ, ʻನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುವ ಸೊಸೆ ನನಗೆ ಬೇಕು. ಅವನನ್ನು ಬೇಷರತ್ತಾಗಿ ಪ್ರೀತಿಸಬೇಕು, ಅಷ್ಟೇ. ಅವನು ಉದ್ಯಮದಲ್ಲಿದ್ದಾನೆ, ಆದ್ದರಿಂದ ಅವಳು ಅವನನ್ನು ಅರ್ಥಮಾಡಿಕೊಳ್ಳಬೇಕು.ಮಿತಿ ಇಲ್ಲದ ಪ್ರೀತಿ ಇರಬೇಕು. ಇದಕ್ಕಿಂತ ಬೇರೇನು ಇಲ್ಲ. ಇಬ್ಬರು ಚೆನ್ನಾಗಿರಬೇಕುʼ ಎಂದು ಕಂಡೀಷನ್ ಹಾಕಿದ್ದರು.

ಯಾವುದೇ ಆಕ್ಷೇಪಣೆಗಳು ಅಥವಾ ನಿರೀಕ್ಷೆಗಳಿಲ್ಲ

ವಿಜಯ್‌ ಅವರ ತಂದೆ ಗೋವರ್ಧನ್ ಕೂಡ ಪತ್ನಿಯ ಮಾತಿಗೆ ಸಮ್ಮತಿಸಿದರು ಮತ್ತು "ವಿಜಯ್‌ ಯಾರನ್ನು ಬೇಕಾದರೂ ಮದುವೆಯಾಗಲಿ. ನನಗೆ ಯಾವುದೇ ಆಕ್ಷೇಪಣೆಗಳು ಅಥವಾ ನಿರೀಕ್ಷೆಗಳಿಲ್ಲ. ನನಗೆ ಜಾತಿ ಅಥವಾ ಧರ್ಮದ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ. ಅವರು ಭಾರತೀಯರನ್ನು, ವಿಶೇಷವಾಗಿ ದಕ್ಷಿಣ ಭಾರತೀಯರನ್ನು ಮದುವೆಯಾದರೆ ನನಗೆ ಸಂತೋಷವಾಗುತ್ತದೆ" ಎಂದು ಹೇಳಿದ್ದರು.

'ದಿ ಗರ್ಲ್‌ಫ್ರೆಂಡ್' ಚಿತ್ರದ ಪ್ರಚಾರದ ಸಂದರ್ಭದಲ್ಲಿ , ರಶ್ಮಿಕಾ ಪರೋಕ್ಷವಾಗಿ ವಿಜಯ್ ಬಗ್ಗೆ ಗುಣಗಾನ ಕೂಡ ಮಾಡಿದ್ದರು. ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ರಶ್ಮಿಕಾ ಮತ್ತು ವಿಜಯ್ ಆತ್ಮೀಯ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದಾದ ನಂತರ, ಫೆಬ್ರವರಿ 26 ರಂದು ಉದಯಪುರದಲ್ಲಿ ರಶ್ಮಿಕಾ ಮತ್ತು ವಿಜಯ್ ವಿವಾಹವಾಗಲಿದ್ದಾರೆ ಎಂದು ವರದಿಯಾಗಿತ್ತು.



ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆ ನಡೆಯುವ ಸ್ಥಳದಲ್ಲಿ 117 ವಿಲ್ಲಾಗಳಿದ್ದು ಎಲ್ಲವನ್ನೂ ಇವರ ಮದುವೆಗೆ ಕಾಯ್ದಿರಿಸಲಾಗಿದೆ. ಇನ್ನೂ ಈ ರೆಸಾರ್ಟ್‌ನಲ್ಲಿ ಹೆಲಿಪ್ಯಾಡ್ ಕೂಡ ಇದ್ದು ಸುತ್ತ ಮುತ್ತ ಬೆಟ್ಟ ಮತ್ತು ಸರೋವರಗಳಿವೆ.

ಇದನ್ನೂ ಓದಿ: Actor Darshan: ಬರ್ತ್‌ಡೇ ಮುಗಿದ ಬೆನ್ನಲ್ಲೇ ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಗೆ ಕೆಲವೇ ಕೆಲ ಅತ್ಯಾಪ್ತರನ್ನು ಕರೆಯಲಾಗಿದ್ದು, ಚಿತ್ರರಂಗದ ಸ್ಟಾರ್ ಗಳು ಗೈರಾಗುವ ಸಾಧ್ಯತೆ ಇದೆ. ಫೆಬ್ರವರಿ 26ರಂದು ಆತ್ಮೀಯರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿರುವ ಈ ಜೋಡಿ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದೆ.

Yashaswi Devadiga

View all posts by this author