ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್‌ʼ ಸ್ಪರ್ಧಿಗಳಿಗೆ ʻರೆಡ್‌ ಕಾರ್ಡ್‌ʼ ಕೊಟ್ರೆ ಏನಾಗುತ್ತೆ ಗೊತ್ತಾ? ಇದನ್ನ ನಿರೂಪಕರು ಕೊಡುವುದು ಏಕೆ?

Bigg Boss Red Card Rules: ತಮಿಳು ಬಿಗ್ ಬಾಸ್ ಸೀಸನ್ 9ರಲ್ಲಿ ವಿಜೆ ಪಾರ್ವತಿ ಮತ್ತು ಕಮ್ರುದ್ದೀನ್ ಅಮಾನವೀಯವಾಗಿ ನಡೆದುಕೊಂಡಿದ್ದಕ್ಕಾಗಿ ನಿರೂಪಕ ವಿಜಯ್ ಸೇತುಪತಿ ರೆಡ್ ಕಾರ್ಡ್ ನೀಡಿ ಹೊರಹಾಕಿದ್ದಾರೆ. ಈ ರೆಡ್ ಕಾರ್ಡ್ ಎನ್ನುವುದು ಸ್ಪರ್ಧಿಯೊಬ್ಬರ ಸಂಭಾವನೆಯನ್ನು ಕಸಿದುಕೊಳ್ಳುವುದಲ್ಲದೆ, ಅವರನ್ನು ಶೋನಿಂದ ಕಪ್ಪುಪಟ್ಟಿಗೆ (Blacklist) ಸೇರಿಸುತ್ತದೆ.

ಸದ್ಯ ಭಾರತದ ಪ್ರಮುಖ ಭಾಷೆಗಳಲ್ಲಿ ಬಿಗ್‌ ಬಾಸ್‌ ಶೋ ಟೆಲಿಕಾಸ್ಟ್‌ ಆಗುತ್ತಿದೆ. ಕನ್ನಡ ಬಿಗ್‌ ಬಾಸ್‌ ಅಂತೂ ಟಾಪ್‌ ಅಲ್ಲಿ ಓಡ್ತಿದೆ. ಈ ನಡುವೆ ತಮಿಳು ಬಿಗ್‌ ಬಾಸ್‌ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ನಿರೂಪಕ ವಿಜಯ್‌ ಸೇತುಪತಿ ಅವರು ಇಬ್ಬರು ಸ್ಪರ್ಧಿಗಳಿಗೆ ರೆಡ್‌ ಕಾರ್ಡ್‌ ನೀಡಿರುವುದು. ಅಷ್ಟಕ್ಕೂ ಏನಿದು ರೆಡ್‌ ಕಾರ್ಡ್?‌ ಇದರಿಂದಾಗುವ ಪರಿಣಾಮಗಳೇನು? ಮುಂದೆ ಓದಿ.

ಇಬ್ಬರಿಗೆ ಸಿಕ್ತು ರೆಡ್‌ ಕಾರ್ಡ್‌

ಹೌದು, ತಮಿಳು ಬಿಗ್‌ ಬಾಸ್‌ ಸೀಸನ್‌ 9ರಲ್ಲಿ ವಿಜೆ ಪಾರ್ವತಿ ಮತ್ತು ಕಮ್ರುದ್ದೀನ್‌ ಎಂಬಿಬ್ಬರು ಸ್ಪರ್ಧಿಗಳಿಗೆ ವಿಜಯ್‌ ಸೇತುಪತಿ ರೆಡ್‌ ಕಾರ್ಡ್‌ ನೀಡಿದ್ದಾರೆ. ಅಷ್ಟಕ್ಕೂ ಅವರಿಗೆ ಈ ಕಾರ್ಡ್‌ ನೀಡಿದ್ದೇಕೆ ಎಂದರೆ, ಇವರಿಬ್ಬರು ಮೊದಲಿನಿಂದಲೂ ಅಸಭ್ಯವಾಗಿ ವರ್ತಿಸುತ್ತಿದ್ದರು. ಇಬ್ಬರ ಆಟದ ವೈಖರಿ ಎಲ್ಲೇ ಮೀರಿತ್ತು. ಇದು ವೀಕ್ಷಕರಿಗೂ ಕಿರಿಕಿರಿ ಉಂಟು ಮಾಡಿತ್ತು. ಆದರೆ ಈಚೆಗೆ ಟಿಕೆಟ್‌ ಟು ಫಿನಾಲೆ ಟಾಸ್ಕ್‌ನಲ್ಲಿ ಪಾರು ಮತ್ತು ಕಮ್ರುದ್ದೀನ್‌ ನಡೆದುಕೊಂಡ ರೀತಿ ಮಾತ್ರ ಹೇಯವಾಗಿತ್ತು. ಹಾಗಾಗಿಯೇ ರೆಡ್‌ ಕಾರ್ಡ್‌ ಕೊಟ್ಟು ಅವರನ್ನು ಹೊರಗೆ ಹಾಕಲಾಗಿದೆ. 90 ದಿನಗಳ ಮನೆಯೊಳಗೆ ಇದ್ದ ಅವರನ್ನೀಗ ಎಲಿಮಿನೇಟ್‌ ಮಾಡಲಾಗಿದೆ.

Bigg Boss Kannada 12: ಬಿಗ್‌ ಬಾಸ್‌ ಶೋಗೆ ಬಿಗ್‌ ಸಂಕಷ್ಟ, ಪ್ರತಿಭಟನೆ, ಪೊಲೀಸ್‌ ಅನುಮತಿಯೂ ಇಲ್ಲ

ಕ್ರೂರ ವ್ಯಕ್ತಿತ್ವ ಪ್ರದರ್ಶನ ಮಾಡಿದ ಸ್ಪರ್ಧಿಗಳು

ಟಿಕೆಟ್‌ ಟು ಫಿನಾಲೆಗಾಗಿ ನಡೆದ ಕಾರ್ ಟಾಸ್ಕ್‌ ವೇಳೆ ವಿಜೆ ಪಾರ್ವತಿ ಮತ್ತು ಕಮ್ರುದ್ದೀನ್ ಸೇರಿಕೊಂಡು ಮತ್ತೋರ್ವ ಸ್ಪರ್ಧಿ ಸಾಂಡ್ರಾ ಅವರನ್ನು ಕಾರಿನಿಂದ ಹೊರದಬ್ಬಿದರು. ತುಂಬಾ ಕ್ರೂರವಾಗಿ ಸಾಂಡ್ರಾ ಜೊತೆಗೆ ಅವರು ನಡೆದುಕೊಂಡರು. ಪರಿಣಾಮವಾಗಿ ಸಾಂಡ್ರಾ ಕಾರಿನಿಂದ ಹೊರಬಿದ್ದರು. ಆಗ ಅವರ ತಲೆಗೆ ಬಲವಾಗಿ ಹೊಡೆತ ಬಿದ್ದಿದೆ. ಆದರೂ ಅವರಿಬ್ಬರು ಅದರ ಬಗ್ಗೆ ಕ್ಯಾರೇ ಎನ್ನಲಿಲ್ಲ. ಇತರೆ ಸದಸ್ಯರು ಸಾಂಡ್ರಾಗೆ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತು. ಇದನ್ನೆಲ್ಲಾ ಗಮನಿಸಿದ ನಿರೂಪಕ ವಿಜಯ್‌ ಸೇತುಪತಿ ಅವರು ಪಾರು ಮತ್ತು ಕಮ್ರುದ್ದೀನ್‌ಗೆ ರೆಡ್‌ ಕಾರ್ಡ್‌ ನೀಡಿದರು.

Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್‌ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್‌

ರೆಡ್‌ ಕಾರ್ಡ್‌ ಕೊಟ್ಟರೆ ಆಗುವ ಎಫೆಕ್ಟ್‌ ಏನು?

ಈ ರೆಡ್‌ ಕಾರ್ಡ್‌ ಪಡೆಯುವ ಸ್ಪರ್ಧಿ ತಕ್ಷಣವೇ ಮನೆಯಿಂದ ಎಲಿಮಿನೇಟ್‌ ಆಗುತ್ತಾರೆ. ಸಾಮಾನ್ಯವಾಗಿ ಬಿಗ್‌ ಬಾಸ್‌ ಶೋಗೆ ಬರುವ ಪ್ರತಿಯೊಬ್ಬ ಸ್ಪರ್ಧಿಗೆ ವಾರಕ್ಕಿಷ್ಟು ಎಂದು ಸಂಭಾವನೆ ಫಿಕ್ಸ್‌ ಆಗಿರುತ್ತದೆ. ಅದನ್ನು ಎಲಿಮಿನೇಟ್‌ ಆದಾಗ ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಆದರೆ ರೆಡ್‌ ಕಾರ್ಡ್‌ ಪಡೆದಿರುವ ಪಾರು ಮತ್ತು ಕಮ್ರುದ್ದೀನ್‌ಗೆ ಆ ಸಂಭಾವನೆ ಕೂಡ ಸಿಗೋದಿಲ್ಲ. ಅಲ್ಲದೆ, ಅವರನ್ನು ಎಂದಿಗೂ ಈ ಶೋಗೆ ವಾಪಸ್‌ ಕರೆಸಿಕೊಳ್ಳುವುದಿಲ್ಲ.