ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ಪಾರಾಗ್ತಾರಾ ದರ್ಶನ್‌?

Vijayalakshmi Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್, ಕ್ಷಮಾದಾನ ಕೋರಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಪ್ರದೂಷ್ ಕುರಿತು ವರದಿ ಸಲ್ಲಿಸುವಂತೆ ಪ್ರೊಬೆಷನ್‌ ಅಧಿಕಾರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾನೂನು ಹೋರಾಟ ಮುಂದುವರಿದಿರುವ ನಡುವೆಯೇ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿಯ ಸಂಕಷ್ಟ ನಿವಾರಣೆಗಾಗಿ ದೈವದ ಮೊರೆ ಹೋಗಿದ್ದಾರೆ.

Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ ದರ್ಶನ್‌!

ವಿಜಯಲಕ್ಷ್ಮೀ ದರ್ಶನ್‌ -

Yashaswi Devadiga
Yashaswi Devadiga Aug 22, 2026 8:06 PM

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ (Renukaswamy case) 14ನೇ ಆರೋಪಿ ಪ್ರದೂಷ್, ಕ್ಷಮಾದಾನ ಕೋರಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಪ್ರದೂಷ್ (Pradhoosh) ಕುರಿತು ವರದಿ ಸಲ್ಲಿಸುವಂತೆ ಪ್ರೊಬೆಷನ್‌ ಅಧಿಕಾರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕಾನೂನು ಹೋರಾಟ ಮುಂದುವರಿದಿರುವ ನಡುವೆಯೇ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿಯ ಸಂಕಷ್ಟ ನಿವಾರಣೆಗಾಗಿ ದೈವದ (Daiva) ಮೊರೆ ಹೋಗಿದ್ದಾರೆ.

ದರ್ಶನ್ ಸಂಕಷ್ಟದಿಂದ ಪಾರಾಗಬೇಕು, ಕಾನೂನು ಸಮಸ್ಯೆಗಳು ದೂರವಾಗಬೇಕು ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಬೇಕು ಎಂದು ದೈವದ ಮೊರೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಮಂಗಳೂರಿನ ಶ್ರೀ ಕ್ಷೇತ್ರ ಮಂದಾರಬೈಲು ಶ್ರೀ ರಕ್ತೇಶ್ವರಿ, ಶ್ರೀ ಮಂತ್ರದೇವತೆ, ಗುಳಿಗ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮಂಗಳೂರಿನ ಶ್ರೀ ಕ್ಷೇತ್ರ ಮಂದಾರ ಬೈಲು ಲೆಕ್ಕೆಸಿರಿ (ರಕ್ತೇಶ್ವರಿ) ದೈವ ಸನ್ನಿಧಿಗೂ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿ ವಿಶೇಷ ಪೂಜೆ, ಹರಕೆ ಹಾಗೂ ಸೇವೆಗಳನ್ನು ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ವಿಡಿಯೋಗಳು ವೈರಲ್‌ ಆಗಿವೆ.

ಕೇಸ್‌ ವಿಚಾರ ಏನು?
ಪ್ರದೂಷ್‌ ಅರ್ಜಿ ಕುರಿತು ಆ.18ರಂದು ವಿಚಾರಣೆ ಪೂಣರ್ಗೊಳಿಸಿದ್ದ ಗುರುವಾರ (ಆ.20ರಂದು) ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಆದರೆ ಗುರುವಾರ ಆದೇಶ ಪ್ರಕಟಿಸಲಿಲ್ಲ. ಬದಲಾಗಿ ಪ್ರದೂಷ್‌ ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾಯಾಲಯ, ಪ್ರದೂಷ್‌ ಅರ್ಜಿಯ ಸ್ವರೂಪ ಮತ್ತು ಅಪರಾಧ ಗಂಭೀರತೆಯಿಂದ ಕೂಡಿದೆ.

ಇದರಿಂದ ಈ ಅರ್ಜಿ ಪರಿಗಣಿಸುವ ಮುನ್ನ ಪ್ರದೂಷ್‌ ಕುರಿತು ಪ್ರೊಬೇಷನ್‌ ಅಧಿಕಾರಿಯಿಂದ ವರದಿ ಪಡೆಯವುದು ಸೂಕ್ತವೆನಿಸುತ್ತಿದೆ. ಹಾಗಾಗಿ, ಪ್ರದೂಷ್‌ ಕುರಿತು ಪ್ರೊಬೆಷನ್‌ ಅಧಿಕಾರಿಯು ಆ.24ರಂದು ಬೆಳಗ್ಗೆ 11 ಗಂಟೆಗೆ ವರದಿ ಸಲ್ಲಿಸಬೇಕು. ಆ ವರದಿ ಬಂದನ ನಂತರ ಪ್ರದೂಷ್‌ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.

. ಪ್ರದೋಷ್‌ನನ್ನು ಅಧಿಕೃತವಾಗಿ 'ಅಪ್ರೂವರ್' ಆಗಿ ಪರಿಗಣಿಸುವ ಕುರಿತು ಅಂದು ನ್ಯಾಯಾಲಯ ಅಂತಿಮ ಆದೇಶ ಪ್ರಕಟಿಸುವ ನಿರೀಕ್ಷೆಯಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾದರೆ, ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಈ ಪ್ರಕರಣದಲ್ಲಿ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ.