ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vivek Oberoi : ಆಸ್ಕರ್‌ ರೇಸ್‌ನಲ್ಲಿ ಕಾಂತಾರ; ಅಭಿನಂದಿಸಿ ಹೊಗಳಿದ ವಿವೇಕ್ ಒಬೆರಾಯ್

Kantara: 98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಪರಿಗಣನೆಗೆ ಅರ್ಹವಾಗಿರುವ 317 ಚಲನಚಿತ್ರಗಳ ಪಟ್ಟಿಯನ್ನು ಅಕಾಡೆಮಿ ಪ್ರಕಟಿಸಿದೆ. ಇದರಲ್ಲಿ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಅರ್ಹತೆ ಪಡೆದ 201 ಚಲನಚಿತ್ರಗಳು ಸೇರಿವೆ. ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ನಾಲ್ಕು ಭಾರತೀಯ ಚಲನಚಿತ್ರಗಳೆಂದರೆ ರಿಷಬ್ ಶೆಟ್ಟಿ ಅವರ ಕಾಂತಾರ: ಅಧ್ಯಾಯ 1, ಅನುಪಮ್ ಖೇರ್ ಅವರ ತನ್ವಿ ದಿ ಗ್ರೇಟ್, ಎಂ. ಶಶಿಕುಮಾರ್ ಅವರ ಪ್ರವಾಸಿ ಕುಟುಂಬ ಮತ್ತು ಅನಿಮೇಟೆಡ್ ಮಹಾಕಾವ್ಯ ಮಹಾವತಾರ ನರಸಿಂಹ.

ವಿವೇಕ್ ಒಬೆರಾಯ್

98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ (Oscar 2026) ಪರಿಗಣನೆಗೆ ಅರ್ಹವಾಗಿರುವ 317 ಚಲನಚಿತ್ರಗಳ ಪಟ್ಟಿಯನ್ನು ಅಕಾಡೆಮಿ ಪ್ರಕಟಿಸಿದೆ. ಇದರಲ್ಲಿ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಅರ್ಹತೆ ಪಡೆದ 201 ಚಲನಚಿತ್ರಗಳು (Cinema) ಸೇರಿವೆ. ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ನಾಲ್ಕು ಭಾರತೀಯ ಚಲನಚಿತ್ರಗಳೆಂದರೆ ರಿಷಬ್ ಶೆಟ್ಟಿ ಅವರ ಕಾಂತಾರ: ಅಧ್ಯಾಯ 1, ಅನುಪಮ್ ಖೇರ್ ಅವರ ತನ್ವಿ ದಿ ಗ್ರೇಟ್, ಎಂ. ಶಶಿಕುಮಾರ್ ಅವರ ಪ್ರವಾಸಿ ಕುಟುಂಬ ಮತ್ತು ಅನಿಮೇಟೆಡ್ ಮಹಾಕಾವ್ಯ ಮಹಾವತಾರ ನರಸಿಂಹ.

ರಿಷಬ್‌ (Rishab Shetty) ಅವರು ಕಾಂತಾರ ಸಿನಿಮಾ ನಂತರ ಇಡೀ ದೇಶದ ಮಟ್ಟದಲ್ಲೇ ಮನೆ ಮಾತಾಗಿದ್ದರು. ಕಾಂತಾರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಹ ದಕ್ಕಿತ್ತು. ಸದ್ಯ ಅದರ ಮುಂದಿನ ಭಾಗವಾದ ‘ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1’ (Kantara Chapter 1) ವಿದೇಶದ ಮಟ್ಟದಲ್ಲಿ ಸ್ಪರ್ಧಿಸುತ್ತಿರುವುದು ಎಲ್ಲರಲ್ಲೂ ಕುತೂಹಲವನ್ನು ಕೆರಳಿಸಿದೆ.

ವಿವೇಕ್ ಒಬೆರಾಯ್ ಹೊಗಳಿಕೆ

ಈ ಮಹತ್ವದ ಸಂದರ್ಭದಲ್ಲಿ ಕಾಂತಾರ ಅಧ್ಯಾಯ 1 ರ ತಂಡವನ್ನು ವಿವೇಕ್ ಒಬೆರಾಯ್ ಅಭಿನಂದಿಸಿದ್ದಾರೆ. ನಟ ತಮ್ಮ ಎಕ್ಸ್ ಖಾತೆಯನ್ನು ತೆಗೆದುಕೊಂಡು ಹೀಗೆ ಬರೆದಿದ್ದಾರೆ, "ಒಂದು ಕಾಲದಲ್ಲಿ ತುಳುನಾಡಿನ ಪ್ರಾಚೀನ ಶಕ್ತಿಗಳಿಂದ ರಕ್ಷಿಸಲ್ಪಟ್ಟ ಪವಿತ್ರ ಆಚರಣೆಯು ಈಗ ಜಾಗತಿಕ ಬೆಂಕಿಯಾಗಿ ಭುಗಿಲೆದ್ದಿದೆ. ಭೂತ ಕೋಲ ಗಡಿಗಳನ್ನು ಮೀರಿ, ಮೌನವನ್ನು ಮುರಿದು ವಿಶ್ವಾದ್ಯಂತ ವಿದ್ಯಮಾನವಾಗಿದೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿಗೆ ಸಿಕ್ಕೇ ಬಿಡ್ತು ಬಂಪರ್ ಆಫರ್!

"98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಅರ್ಹತೆ ಪಡೆದ ನನ್ನ ಸಹೋದರ ರಿಷಬ್‌ ಶೆಟ್ಟಿ ಅವರಿಗೆ ಅಭಿನಂದನೆಗಳು! ಇದು ಕೇವಲ ನಾಮನಿರ್ದೇಶನವಲ್ಲ; ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರತಿಧ್ವನಿಸುವ ನಮ್ಮ ಪೂರ್ವಜರ ಘರ್ಜನೆಯಾಗಿದೆ. ಮಿಡಿಯುವ ಹೃದಯವನ್ನು ಜಾಗತಿಕ ಮಟ್ಟದಲ್ಲಿ ಬೆಳಕಿಗೆ ತಂದಿದ್ದೀರಿ. ನಮ್ಮ ನೆಲದ ಮಣ್ಣು ಈಗ ಸಿನಿಮಾ ಇತಿಹಾಸದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ ಎಂದು ಬರೆದುಕೊಂಡಿದ್ದಾರೆ.



ಕಾಂತಾರ ಅಧ್ಯಾಯ 1

2025 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಭಾರತೀಯ ಚಿತ್ರ 'ಕಾಂತಾರ ಅಧ್ಯಾಯ 1' ಆಗಿದ್ದು, 'ಛಾವಾ' ಚಿತ್ರದ ₹ 807 ಕೋಟಿ ಗಳಿಕೆಯನ್ನು ಹಿಂದಿಕ್ಕಿದೆ. ಬಿಡುಗಡೆಯಾದ ಮೊದಲ 25 ದಿನಗಳಲ್ಲಿ ವಿಶ್ವದಾದ್ಯಂತ ₹ 814 ಕೋಟಿ ಗಳಿಕೆ ಮಾಡಿದೆ .

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈ ಸಿನಿಮಾ ಒಟಿಟಿಯಲ್ಲೂ ಪ್ರಸಾರ ಕಂಡಿದೆ. ಹೀಗಿರುವಾಗಲೇ ಸಿನಿಮಾ ಆಸ್ಕರ್​ ರೇಸ್​​ನಲ್ಲಿ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್‌ 1! ಕಾಂತಾರ, ಕೆಜಿಎಫ್‌ ದಾಖಲೆ ಉಡೀಸ್

ಭಾರತದ ಕೆಲ ಡಾಕ್ಯುಮೆಂಟರಿ, ಶಾರ್ಟ್‌ ಫಿಲ್ಮ್‌ಗಳಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಫೀಚರ್ ಸಿನಿಮಾಗಳ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಫಿಲ್ಮ್ ಮೇಕರ್ಸ್ ಪ್ರಯತ್ನಿಸುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಬಹುದು. ಇತ್ತೀಚೆಗೆ ಭಾರತದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡ್ತಿವೆ.

Yashaswi Devadiga

View all posts by this author