ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chhaava: ಸಾಂಬಾರ್‌ಗೂ, ಸಂಭಾಜಿಗೂ ಇರುವ ಸಂಬಂಧ ಏನು? ಛಾವಾ ಸಿನಿಮಾದಲ್ಲಿ ರಿವೀಲ್ ಆಯ್ತು ಈ ನಂಟು

ಬಹುನಿರೀಕ್ಷಿ ಛಾವಾ ಸಿನಿಮಾ ರಿಲೀಸ್‌ ಆಗಿದ್ದು, ಶಿವಾಜಿ ಬಳಿಕ ಅವರ ಹಿರಿಯ ಮಗ ಮರಾಠ ಸಾಮ್ರಾಜ್ಯಕ್ಕಾಗಿ ಏನೆಲ್ಲ ಮಾಡಿದ್ದಾನೆ ಎಂಬುದನ್ನು ಈ ಸಿನೆಮಾ ಮೂಲಕ ತೋರಿಸಲಾಗಿದೆ. ಹೀಗಿರುವಾಗ ಸಾಂಬಾರ್‌ ಪದ ಮತ್ತು ಸಂಭಾಜಿಗೂ ಏನೋ ನಂಟಿದೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೂಲ ಕತೆಯಲ್ಲಿ ಶಿವಾಜಿ ಮಗನ ಹೆಸರು ಸಂಭಾಜಿ ಆಗಿದ್ದು ಇದರಿಂದಲೇ ಸಾಂಬಾರ್ ಎನ್ನುವ ಪದ ಬಳಕೆ ಬಂದಿದೆ ಎನ್ನಲಾಗಿದೆ

ಸಾಂಬಾರ್‌ಗೂ, ಸಂಭಾಜಿಗೂ ಇರುವ ನಂಟೇನು? ಭಾರೀ ವೈರಲಾಗ್ತಿದೆ ಈ ಸಂಗತಿ

Profile Pushpa Kumari Feb 15, 2025 6:00 AM

ನವದೆಹಲಿ: ಬಾಲಿವುಡ್ ನಲ್ಲಿ ಬಹುನಿರೀಕ್ಷೆ ಹುಟ್ಟಿಸಿದ್ದ ಛಾವಾ (Chhaava) ಸಿನಿಮಾ ರಿಲೀಸ್ ಆಗಿದ್ದು ಚತ್ರಪತಿ ಸಂಭಾಜಿ ಧೈರ್ಯ, ಪರಾಕ್ರಮಗಳನ್ನು ಪ್ರೇಕ್ಷಕರು ಹೊಗಳಿ ಕೊಂಡಾಡುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಕ್ಕಿ ಕೌಶಲ್ ನಟನೆಗೆ ಅಭಿಮಾನಿಗಳು ಬಹು ಪರಾಕ್ ಅನ್ನುತ್ತಿದ್ದಾರೆ. ಮರಾಠ ಸಾಮ್ರಾಜ್ಯದ ಕಥೆ ಹೊಂದಿರುವ ಛಾವಾ ಸಿನಿಮಾ ಹಾಗೂ ದಕ್ಷಿಣ ಭಾರತ ಮೋಸ್ಟ್‌ ಫೆವರಿಟ್‌ ಖಾದ್ಯ ಸಾಂಬಾರ್‌ಗೂ ಸಂಬಂಧ ಇದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ‌‌. ಸಾಂಬಾರ್ ಎಂಬ ಪದು ಸಂಭಾಜಿ ಎಂಬ ಹೆಸರಿನಿಂದಲೇ ಹುಟ್ಟಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಚರ್ಚೆ ಆಗುತ್ತಿರುವ ಹಿಂದಿನ ಕಾರಣ ಏನು ಇನ್ನಿತರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ‌.

ಶಿವಾಜಿ ಬಳಿಕ ಅವರ ಹಿರಿಯ ಮಗ ಮರಾಠ ಸಾಮ್ರಾಜ್ಯಕ್ಕಾಗಿ ಏನೆಲ್ಲ ಮಾಡಿದ್ದಾನೆ ಎಂಬುದನ್ನು ಈ ಸಿನೆಮಾ ಮೂಲಕ ತೋರಿಸಲಾಗಿದ್ದು ಸಿನಿ ಪ್ರಿಯರ ಮನಗೆದ್ದಿದೆ ಎನ್ನಬಹುದು. ಮೂಲ ಕತೆಯಲ್ಲಿ ಶಿವಾಜಿ ಮಗನ ಹೆಸರು ಸಂಭಾಜಿ ಆಗಿರಲಿದ್ದು ಇದರಿಂದಲೇ ಸಾಂಬಾರ್ ಎನ್ನುವ ಪದ ಬಳಕೆ ಮಾಡಲಾಗಿರುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.

ಇತಿಹಾಸದ ದಂತ ಕತೆಗಳ ಎಳೆ ಇಟ್ಟುಕೊಂಡು ಛಾವಾ ಸಿನೆಮಾದಲ್ಲಿ ಸಾಕಷ್ಟು ವಿಚಾರಗಳು ಡಿಕೋಡಿಂಗ್ ಆಗಿರುವಂತೆ ಕಂಡುಬಂದಿದೆ. ಅದರಲ್ಲಿ ಸಾಂಬಾರ್ ವಿಚಾರ ಕೂಡ ಇದೀಗ ವೈರಲ್ ಆಗುತ್ತಿದೆ‌. ಬಹಳ ಪ್ರಾಚೀನ ಕಾಲದಿಂದಲೂ ಭಾರತೀಯರು ಸಾಂಬಾರ ಪದಾರ್ಥಗಳ ವಹಿವಾಟಿನಲ್ಲಿ ಸಾಕಷ್ಟು ಹೆಸರು ಗಳಿಸಿದ್ದು ನಮಗೆಲ್ಲ ತಿಳಿದೆ ಇದೆ. ಈ ಸಿನಿಮಾದಲ್ಲಿ ಈ ಎಳೆಯನ್ನು ಕೂಡ ಹೈಲೈಟ್ ಮಾಡಲಾಗಿದೆ. ಸಾಂಬಾರ್ ಬಟ್ಟಲು ಹೇಗೆ ಬಂದಿದೆ ಎಂಬ ಬಗ್ಗೆ ನಿರ್ದೇಶಕರು ಕೆಲವೊಂದಿಷ್ಟು ಮರಾಠ ಸಾಮ್ರಾಜ್ಯದ ಸನ್ನಿವೇಷವನ್ನು ತಿಳಿಸಿದ್ದು ಇದರಲ್ಲಿ ಎಷ್ಟರ ಮಟ್ಟಿಗೆ ಸತ್ಯ ಸತ್ಯತೆ ಇದೆ ಎಂಬುದು ಪರಮರ್ಶಿಸಬೇಕಿದೆ.

ಇದನ್ನು ಓದಿ: Chikkaballapur News: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ವಾತ್ಸಲ್ಯ” ಮನೆ ಹಸ್ತಾಂತರ

ಛತ್ರಪತಿ ಶಿವಾಜಿ ಮಹಾರಾಜರ ಮಲತಾಯಿ ಮಗ ವ್ಯಾಂಕೋಜಿ ಅವರ ಮಗ ಶಾಹುಜಿ ಮಹಾರಾಜರು ಬರವಣಿಗೆ , ಕಲೆ ಮತ್ತು ಅಡುಗೆ ಯಲ್ಲಿಯೂ ಪ್ರಸಿದ್ಧಿ ಪಡೆದಿದ್ದು ಆ ವಿಚಾರ ಸಿನೆಮಾದಲ್ಲಿ ತಿಳಿಸಲಾಗಿದೆ. ಛತ್ರಪತಿ ಸಂಭಾಜಿ ಮಹಾರಾಜರು ತಾಂಜಾ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಶಾಹುಜಿ ಅರಮನೆಯಲ್ಲಿ ಭಕ್ಷ್ಯಗಳನ್ನು ಸಿದ್ಧ ಮಾಡುವಾಗ ಅಂದಿನ ಖಾದ್ಯಕ್ಕೆ ಬಳಸಲು ಕೋಕಂ ಇರಲಿಲ್ಲ. ಹಾಗಾಗಿ ಅಂದಿನ ಊಟದ ಅಡುಗೆಗೆ ಕೋಕಂ ಬದಲು ಹುಣಸೆ ಹಣ್ಣಿನ ರಸ ಬಳಸಿ ಖಾದ್ಯ ತಯಾರು ಮಾಡುತ್ತಾರೆ ಅದು ಎಂದಿನ ಖಾದ್ಯಕ್ಕಿಂತ ಬಹಳ ರುಚಿ ಯಾಗಿದ್ದು ಇದನ್ನು ಸಂಭಾಜಿ ಕೂಡ ಮನಸಾರೆ ಕೊಂಡಾಡಿದ್ದರು. ಅದರ ಬಳಿಕ ಅಲ್ಲಿ ಈ ಖಾದ್ಯಕ್ಕೆ ಸಂಭಾಜಿ ಆಹಾರ ಖಾದ್ಯವೆಂದೇ ಪ್ರಸಿದ್ದಿಯಾಗಿ ಕಾಲ ಕ್ರಮೇಣ ಅದೇ ಸಾಂಬಾರ್ ಆಗಿ ಮಾರ್ಪಾಡಾಗಿದೆ ಎಂದು ಹೇಳಲಾಗಿದೆ‌‌.