Nee Iralu Jotheyalli: ರಜಿನಿ ಫ್ಯಾನ್ಸ್ಗೆ ಗುಡ್ ನ್ಯೂಸ್: ಹೊಸ ಸೀರಿಯಲ್ ಆ. 11 ರಿಂದ ಪ್ರಾರಂಭ
ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ ಬರುತ್ತಿದೆ. ಇದರ ಪ್ರೊಮೋ ಕೂಡ ಸಖತ್ ಸೌಂಡ್ ಮಾಡುತ್ತಿದೆ. ಈ ಹೊಸ ಧಾರಾವಾಹಿಯ ಹೆಸರು "ನೀ ಇರಲು ಜೊತೆಯಲ್ಲಿ". ಈ ಧಾರಾವಾಹಿಯ ಮತ್ತೊಂದು ಮೈನ್ ಹೈಲೈಟ್ ಎಂದರೆ ಇದರಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಅಮೃತವರ್ಷಿಣಿ ಸೀರಿಯಲ್‌ನ ನಟಿ ರಜಿನಿ ಕಾಣಿಸಿಕೊಂಡಿದ್ದಾರೆ.

Nee Iralu Jotheyalli

ಕನ್ನಡದ ಪ್ರಸಿದ್ಧ ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಶೇಷ ಅಭಿಮಾನಿ ಬಳಗವಿದೆ. ಇತರೆ ಚಾನೆಲ್ಗಳಿಗೆ ಹೋಲಿಸಿದರೆ ಇದರಲ್ಲಿ ಪ್ರಸಾರ ಆಗುವ ಸೀರಿಯಲ್ಗಳ ಸಂಖ್ಯೆ ಕಡಿಮೆ.. ಆದರೆ, ಟೆಲಿಕಾಸ್ಟ್ ಕಾಣುವ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿದ್ದಾರೆ. ಆಸೆ, ನಿನ್ನ ಜೊತೆ ನನ್ನ ಕಥೆ, ರೇಣುಕಾ ಯಲ್ಲಮ್ಮ, ಇತ್ತೀಚೆಗಷ್ಟೆ ಶುರುವಾದ ಶಾರದೆ ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿವೆ.
ಇದೀಗ ಈ ಸಾಲಿಗೆ ಮತ್ತೊಂದು ಧಾರಾವಾಹಿ ಸೇರುವ ಎಲ್ಲ ಲಕ್ಷಣ ಕಾಣುತ್ತಿದೆ. ಹೌದು, ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ ಬರುತ್ತಿದೆ. ಇದರ ಪ್ರೊಮೋ ಕೂಡ ಸಖತ್ ಸೌಂಡ್ ಮಾಡುತ್ತಿದೆ. ಈ ಹೊಸ ಧಾರಾವಾಹಿಯ ಹೆಸರು "ನೀ ಇರಲು ಜೊತೆಯಲ್ಲಿ". ಈ ಧಾರಾವಾಹಿಯ ಮತ್ತೊಂದು ಮೈನ್ ಹೈಲೈಟ್ ಎಂದರೆ ಇದರಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಅಮೃತವರ್ಷಿಣಿ ಸೀರಿಯಲ್‌ನ ನಟಿ ರಜಿನಿ ಕಾಣಿಸಿಕೊಂಡಿದ್ದಾರೆ. ಇವರು ಊರ್ಮಿಳಾ ದಿವಾನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಈ ಧಾರಾವಾಹಿ ಮೂಲಕ ಬಹಳ ದಿನಗಳ ಬಳಿಕ ಸ್ಟಾರ್ ಸುವರ್ಣ ವಾಹಿನಿಯ ಸೀರಿಯಲ್ನಲ್ಲಿ ರಜಿನಿ ಅಭಿನಯಿಸಿದ್ದಾರೆ. ರಜಿನಿ ಈ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ರಜಿನಿ ಈ ಹಿಂದೆ ಸ್ಟಾರ್ ಸುವರ್ಣದ ಬ್ಲಾಕ್‌ಬಸ್ಟರ್ ಧಾರಾವಾಹಿ ಅಮೃತವರ್ಷಿಣಿಯಲ್ಲಿ ಅಮೃತ ಪಾತ್ರದ ಮೂಲಕ ಎಲ್ಲರ ಮನಗೆದ್ದಿದ್ದರು. ಆ ಪಾತ್ರದ ಮುಗ್ಧತೆ, ಕಷ್ಟ ಮತ್ತು ಸವಾಲುಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿವೆ. ಆದರೆ, ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ರಜಿನಿ ಸಂಪೂರ್ಣ ತದ್ವಿರುದ್ಧವಾದ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಹುನಿರೀಕ್ಷಿತ ಧಾರಾವಾಹಿ ಇದೇ ಆಗಸ್ಟ್ 11 ರಿಂದ ರಾತ್ರಿ 7 ಗಂಟೆಗೆ ಪ್ರಸಾರ ಕಾಣಲಿದೆ. ರಜಿನಿ ಜೊತೆ ಟ ಪವನ್ ರವೀಂದ್ರ ಹಾಗೂ ನಟಿ ಸಲೋಮಿ ಡೀಸೋಜಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಧರಣಿ ಜಿ.ರಮೇಶ್ ಈ ಸೀರಿಯಲ್ ಡೈರೆಕ್ಷನ್ ಮಾಡಿದ್ದಾರೆ. ಇವರ ಹೊಸ ನಿರ್ಮಾಣ ಸಂಸ್ಥೆ ಮೂಲಕವೇ ಈ ಸೀರಿಯಲ್ ಬರ್ತಿದೆ.
Anushree Marriage: ಮಹಾನಟಿ ವೇದಿಕೆ ಮೇಲೆ ಭಾವಿ ಗಂಡನಿಗೆ ಪ್ರಪೋಸ್ ಮಾಡಿದ ಅನುಶ್ರೀ?