ʻ20ನೇ ವಯಸ್ಸಿನಲ್ಲಿ ನಾಯಕಿಯಾಗುವುದು ಸುಲಭ, ಆದರೆ 20 ವರ್ಷಗಳ ಕಾಲ ನಾಯಕಿಯಾಗಿಯೇ ಉಳಿಯುವುದು ಸಾಧನೆʼ; ಎಲ್ಲರೆದುರೇ ತ್ರಿಷಾರನ್ನು ಕೊಂಡಾಡಿದ್ದ ವಿಜಯ್!
Vijay Trisha Relationship: ನಟ ವಿಜಯ್ ಮತ್ತು ತ್ರಿಷಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಲಿಯೋ ಆಡಿಯೋ ಲಾಂಚ್‌ನಲ್ಲಿ ವಿಜಯ್ ಹೇಳಿದ್ದ ಮಾತುಗಳು ಪುನಃ ವೈರಲ್ ಆಗುತ್ತಿವೆ. ವಿಜಯ್ ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಸಿರುವ ಈ ಸಂದರ್ಭದಲ್ಲಿ ಈ ಹೇಳಿಕೆಗಳು ಮತ್ತೆ ಮತ್ತೆ ಚರ್ಚೆಗೆ ಬರುತ್ತಿವೆ.
-
ಸೋಶಿಯಲ್ ಮೀಡಿಯಾದಲ್ಲಿ ಈಗ ಎರಡೇ ಹೆಸರು ಬಹಳ ಸದ್ದು ಮಾಡುತ್ತಿವೆ. ಅದು ದಳಪತಿ ವಿಜಯ್ ಮತ್ತು ತ್ರಿಷಾ. ಹೌದು, ಇವರಿಬ್ಬರ ನಡುವೆ ಏನೋ ಸಂಥಿಂಗ್.. ಸಂಥಿಂಗ್.. ಇದೆ ಎನ್ನುವಾಗಲೇ, ಅತ್ತ ವಿಜಯ್ ಪತ್ನಿ ಸಂಗೀತಾ, "ನನ್ನ ಪತಿಗೆ ನಟಿಯೊಬ್ಬಳ ಜೊತೆ ಅಕ್ರಮ ಸಂಬಂಧ ಇದೆ" ಎಂದು ಆರೋಪಿಸಿ, ವಿಚ್ಛೇದನ ಕೋರಿರುವಾಗಲೇ, ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಜಯ್ ಮತ್ತು ತ್ರಿಷಾ ಹೀಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ತಮಿಳುನಾಡು ಚುನಾವಣೆಯಲ್ಲಿ ವಿಜಯ್‌ಗೆ ಇದು ನೆಗೆಟಿವ್ ಆಗಲಿದೆಯಾ ಎಂಬ ಮಾತುಗಳು ಕೇಳಿಬಂದಿವೆ. ಜೊತೆಗೆ ಈ ಜೋಡಿಯ ಕೆಲ ಹಳೆಯ ವಿಡಿಯೋಗಳು, ಹೇಳಿಕೆಗಳು ವೈರಲ್ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಲಿಯೋ ಆಡಿಯೋ ಲಾಂಚ್‌ನಲ್ಲಿ ವಿಜಯ್ ಹೇಳಿದ್ದ ಮಾತುಗಳನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಲಿಯೋ ಆಡಿಯೋ ಲಾಂಚ್‌ನಲ್ಲಿ ವಿಜಯ್ ಹೇಳಿದ್ದೇನು?
2008ರ ಕುರುವಿ ನಂತರ 2023ರ ಲಿಯೋ ಚಿತ್ರಕ್ಕಾಗಿ ವಿಜಯ್ ಮತ್ತು ತ್ರಿಷಾ ಒಂದಾಗಿದ್ದರು. ಈ ಚಿತ್ರದ ಆಡಿಯೋ ಲಾಂಚ್‌ನಲ್ಲಿ ಮಾತನಾಡಿದ್ದ ವಿಜಯ್, "20ನೇ ವಯಸ್ಸಿನಲ್ಲಿ ಒಂದು ಹೆಣ್ಣು ನಾಯಕಿಯಾಗುವುದು ದೊಡ್ಡ ವಿಷಯವಲ್ಲ, ಆದರೆ 20 ವರ್ಷಗಳಿಂದಲೂ ಆ ಹೆಣ್ಣು ನಾಯಕಿ ಪಟ್ಟವನ್ನು ಉಳಿಸಿಕೊಂಡು ಬುರುವುದು ಇದೆಯಲ್ಲ, ಅದು ದೊಡ್ಡ ಸಾಧನೆ. ನಾನು ಯಾರ ಬಗ್ಗೆ ಮಾತನಾಡಿದ್ದೇನೆ ಎಂಬುದು ನಿಮಗೆಲ್ಲಾ ಗೊತ್ತಾಗಿರಬೇಕು. ನಾನು ಮಾತನಾಡುತ್ತಿರುವುದು ನಮ್ಮ ಇಳವರಸಿ ಕುಂದವೈ (ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿನ ತ್ರಿಷಾ ಪಾತ್ರದ ಹೆಸರು) ಬಗ್ಗೆ. ಶುಭಾಶಯಗಳು ತ್ರಿಷಾ ನಿಮಗೆ" ಎಂದು ವಿಜಯ್ ಹೇಳಿದ್ದರು.
Thalapathy Vijay: ಪತ್ನಿ ವಿಚ್ಛೇದನ ಅರ್ಜಿ ಮಧ್ಯೆ ದಳಪತಿ ವಿಜಯ್ ಹಾಗೂ ತ್ರಿಷಾ ಒಂದೇ ಕಾರಿನಲ್ಲಿ ಸುತ್ತಾಟ!
ಇನ್ನು, ಇದೇ ವೇದಿಕೆಯಲ್ಲಿ ಮಾತನಾಡಿದ್ದ ತ್ರಿಷಾ, "ಒಬ್ಬ ಸ್ಕೂಲ್ ಫ್ರೆಂಡ್ ಜೊತೆ ಹಲವು ವರ್ಷಗಳ ಬಳಿಕ ಹ್ಯಾಂಗ್‌ಔಟ್ ಮಾಡಿದರೆ ಹೇಗಿರುತ್ತದೋ, ಅದೇ ವಿಜಯ್. ಅಷ್ಟು ಆದಮೇಲೂ ಅದೇ ಕಂಫರ್ಟ್.. ಅದೇ ಗೌರವ.. ನನ್ನ ಜೊತೆ ಅದ್ಭುತ ಸಹನಟನಾಗಿದ್ದಕ್ಕೆ, ನನಗೆ ಆತ್ಮೀಯ ಸ್ನೇಹಿತನಾಗಿದ್ದಕ್ಕೆ ಧನ್ಯವಾದಗಳು ವಿಜಯ್. ನನ್ನ 20 ವರ್ಷಗಳ ಕರಿಯರ್‌ನಲ್ಲಿ ವಿಜಯ್ ಜೊತೆಗೆ ಜಾಸ್ತಿ ಜರ್ನಿ ಇದೆ" ಎಂದು ತ್ರಿಷಾ ಹೇಳಿದ್ದರು.