ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Tabaahi Song: ʻಟಾಕ್ಸಿಕ್‌ʼ ಸಿನಿಮಾದ ಮೊದಲ ಸಾಂಗ್‌ ರಿಲೀಸ್‌; ʻತಬಾಹಿʼ ಹಾಡಿನಲ್ಲಿ ಬಯಲಾಯ್ತು ನಟ ಯಶ್ ಚಾಣಕ್ಷತನ!

Toxic First Song Tabaahi: ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಬಹುನಿರೀಕ್ಷಿತ 'ತಬಾಹಿ' ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ವಿಶಾಲ್ ಮಿಶ್ರಾ ಸಂಗೀತ ನೀಡಿ ಹಾಡಿರುವ ಈ ಹಾಡಿಗೆ ಕನ್ನಡದಲ್ಲಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಚಿತ್ರದ ಕಥೆಯ ಯಾವುದೇ ಸುಳಿವು ಬಿಟ್ಟುಕೊಡಬಾರದು ಎಂಬ ಕಾರಣಕ್ಕೆ ಯಶ್ ಕೇವಲ ಒಂದು ಪೋಸ್ಟರ್ ಬಳಸಿ ಹಾಡನ್ನು ರಿಲೀಸ್ ಮಾಡುವ ಮೂಲಕ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ.

ʻರಾಕಿಂಗ್‌ ಸ್ಟಾರ್ʼ ಯಶ್‌ ಅವರ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್‌ನ ಮೊದಲ ಹಾಡು ರಿಲೀಸ್‌ ಆಗಿದೆ. ಈ ಹಾಡಿನಲ್ಲಿ ಯಶ್‌ ಮತ್ತು ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ʻತಬಾಹಿʼ ಎಂಬ ಈ ಹಾಡನ್ನು ಐದು ಭಾಷೆಗಳಲ್ಲಿ ಬಿಡುಗಡೆ ಆಗಿದ್ದು, ತಬಾಹಿ ಎಂಬ ಹಿಂದಿ ಪದ ಎಲ್ಲಾ ವರ್ಷನ್‌ಗಳಲ್ಲೂ ಇದೆ. ವಿಶಾಲ್‌ ಮಿಶ್ರಾ ಈ ಹಾಡನ್ನು ಕಂಪೋಸ್‌ ಮಾಡಿ, ಹಾಡಿದ್ದಾರೆ. ಅಂದಹಾಗೆ, ಈ ಹಾಡಿನಲ್ಲಿ ಯಶ್‌ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿದ್ದಾರೆ. ಅದೇನು?

ಬಯಲಾಯ್ತು ಯಶ್ ಚಾಣಕ್ಷತನ!

ಸಾಮಾನ್ಯವಾಗಿ ಒಂದು ಹೊಸ ಹಾಡನ್ನು ರಿಲೀಸ್‌ ಮಾಡಿದಾಗ, ಅದು ವಿಡಿಯೋ ಸಾಂಗ್‌ ಆಗಿರುತ್ತದೆ, ಇಲ್ಲವೇ ಲಿರಿಕಲ್‌ ವಿಡಿಯೋ ಆಗಿರುತ್ತದೆ. ಬಹುತೇಕರು ಲಿರಿಕಲ್‌ ವಿಡಿಯೋ ಸಾಂಗ್‌ಗೆ ಮನ್ನಣೆ ನೀಡುತ್ತಾರೆ. ಆದರೆ ತಬಾಹಿ ಹಾಡಿನಲ್ಲಿ ಯಶ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ಇದು ಬರೀ ಹಾಡಷ್ಟೇ! ಲಿರಿಕಲ್‌ ವಿಡಿಯೋ ಅಥವಾ ವಿಡಿಯೋ ಸಾಂಗ್‌ ಆಗಲಿ ಅಲ್ಲ.‌ ಈಗಾಗಲೇ ರಿಲೀಸ್‌ ಮಾಡಿರುವ ತಬಾಹಿ ಹಾಡಿನ ಪೋಸ್ಟರ್‌ ಅನ್ನೇ ಬಳಸಿ, ಈ ಸಾಂಗ್‌ ಅನ್ನು ರಿಲೀಸ್‌ ಮಾಡಲಾಗಿದೆ.

Yash Meets Shivanna: ರಾಕಿಭಾಯ್‌ ಮೀಟ್ಸ್‌ ಶಿವಣ್ಣ; ಶಿವ ರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌

ಅಷ್ಟಕ್ಕೂ ಯಶ್‌ ಯಾಕೆ ಹೀಗ ಮಾಡಿದ್ರು? ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಟಾಕ್ಸಿಕ್‌ ಭಾರಿ ನಿರೀಕ್ಷೆ ಇರುವ ಸಿನಿಮಾ. ಒಂದು ಸಣ್ಣ ಕಂಟೆಂಟ್‌ ಕೂಡ ಚಿತ್ರದ ಕಥೆ ಬಗೆಗಿನ ಹಿಂಟ್‌ ನೀಡುವ ಸಾಧ್ಯತೆ ಇರುತ್ತದೆ. ಇಂಥ ದುಬಾರಿ ಸಿನಿಮಾಗಳ ವಿಡಿಯೋ ಸಾಂಗ್‌ಗಳನ್ನು ಸಾಮಾನ್ಯವಾಗಿ ರಿಲೀಸ್‌ ಮಾಡೋದಿಲ್ಲ. ಇನ್ನು, ಲಿರಿಕಲ್‌ ವಿಡಿಯೋ ಮಾಡಬೇಕೆಂದರೆ, ಅದರಲ್ಲೂ ಸಿನಿಮಾದ ಪೋಸ್ಟರ್‌ ಹಾಗೂ ಸಣ್ಣ ಸಣ್ಣ ವಿಡಿಯೋ ಬಿಟ್‌ಗಳನ್ನು ಬಳಕೆ ಮಾಡಬೇಕಾಗುತ್ತದೆ. ತಬಾಹಿ ಹಾಡಿಗೆ ಆ ರೀತಿ ಮಾಡಿದರೆ, ಕೆಲವೊಂದು ಇಂಟರೆಸ್ಟಿಂಗ್‌ ವಿಚಾರಗಳು ಬಯಲಾಗಬಹುದು ಎಂಬ ಕಾರಣಕ್ಕೆ ಒಂದೇ ಪೋಸ್ಟರ್‌ ಹಾಕಿ, ಹಾಡು ಮುಗಿಸಿದ್ದಾರೆ ಯಶ್.‌ ಅಂದಹಾಗೆ, ತಬಾಹಿ ಎಂದರೆ ಹಿಂದಿಯಲ್ಲಿ ವಿನಾಶ ಎಂಬ ಅರ್ಥ ಇದೆ.

Toxic Movie: ಯಶ್‌ ಹೊತ್ತು ಸಾಗುತ್ತಿರುವ ಈ ಚೆಲುವೆ ಯಾರು? ಸೋಶಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದ ಹೊಸ ರೊಮ್ಯಾಂಟಿಕ್ ಪೋಸ್ಟರ್

ಕಿಯಾರಾಗೆ ಅಂಧಳ ಪಾತ್ರ!

ಹೌದು, ಸದ್ಯದ ಮಾಹಿತಿ ಪ್ರಕಾರ, ಕಿಯಾರಾ ಅಡ್ವಾಣಿ ಅವರು ಈ ಚಿತ್ರದಲ್ಲಿ ಅಂಧಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾಗಿ, ಈ ಹಾಡಿನಲ್ಲಿ ಇನ್ನೂ ಹೆಚ್ಚಿನ ಪೋಸ್ಟರ್‌ ಅಥವಾ ಹಾಡಿನ ತುಣುಕುಗಳನ್ನು ಹಂಚಿಕೊಂಡಿದ್ದರೆ, ಆ ರಹಸ್ಯ ಈಸೀಯಾಗಿ ಗೊತ್ತಾಗುತ್ತಿತ್ತು. ಆ ಕಾರಣಕ್ಕೂ ಯಶ್‌ ಈ ರೀತಿ ಮಾಡಿರುವ ಸಾಧ್ಯತೆಗಳು ಜಾಸ್ತಿ ಇವೆ.

ತಬಾಹಿ ಹಾಡನ್ನು ಬರೆದವರು ಯಾರು?

ತಬಾಹಿ ಹಾಡನ್ನು ವಿಶಾಲ್‌ ಮಿಶ್ರಾ ಕಂಪೋಸ್‌ ಮಾಡಿ, ಹಾಡಿದ್ದಾರೆ. ಇದರ ಕನ್ನಡ ವರ್ಷನ್‌ ಸಾಹಿತ್ಯವನ್ನು ಯೋಗರಾಜ್‌ ಭಟ್‌ ಬರೆದಿದ್ಧಾರೆ. ತಮಿಳು ವರ್ಷನ್‌ಗೆ ನಯನತಾರಾ ಪತಿ ವಿಘ್ನೇಶ್‌ ಶಿವನ್‌, ಮಲಯಾಳಂ ವರ್ಷನ್‌ಗೆ ರಫೀಕ್‌ ಆಹ್ಮದ್‌, ಹಿಂದಿ ವರ್ಷನ್‌ ಅನ್ನು ರಾಜಶೇಖರ್‌ ಮತ್ತು ತೆಲುಗು ವರ್ಷನ್‌ಗೆ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ. ಐದೂ ಭಾಷೆಯಲ್ಲೂ ವಿಶಾಲ್ ಮಿಶ್ರಾ ಅವರೇ ಹಾಡಿದ್ದಾರೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾವು ಮಾ.19ರಂದು ತೆರೆಕಾಣಲಿದೆ.