ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Toxic Movie: ಯಶ್‌ ಹೊತ್ತು ಸಾಗುತ್ತಿರುವ ಈ ಚೆಲುವೆ ಯಾರು? ಸೋಶಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದ ಹೊಸ ರೊಮ್ಯಾಂಟಿಕ್ ಪೋಸ್ಟರ್

Toxic Movie Updates: ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಮೊದಲ ಹಾಡು 'ತಬಾಹಿ' ಬಿಡುಗಡೆಗೆ ಸಜ್ಜಾಗಿದೆ. ಈ ಹಾಡಿನ ಪೋಸ್ಟರ್‌ನಲ್ಲಿ ಯಶ್ ಅವರು ನಟಿಯೊಬ್ಬರನ್ನು ಹೊತ್ತುಕೊಂಡು ಹೋಗುತ್ತಿರುವ ರೊಮ್ಯಾಂಟಿಕ್ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ. ಜೊತೆಗೆ ಆ ನಟಿ ಯಾರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ.

Yash: ʻಟಾಕ್ಸಿಕ್ʼ ಸಿನಿಮಾದ ರೊಮ್ಯಾಂಟಿಕ್ ಪೋಸ್ಟರ್ ವೈರಲ್!

-

Avinash GR
Avinash GR Feb 27, 2026 8:27 PM

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಹುನಿರೀಕ್ಷಿತ ಮೊದಲ ಹಾಡು 'ತಬಾಹಿ' (Tabaahi) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸದ್ಯ ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿರುವ ಹಾಡಿನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿದ್ದು, ಯಶ್ ನಟಿಯೊಬ್ಬರನ್ನು ಹೊತ್ತುಕೊಂಡು ಹೋಗುತ್ತಿರುವಂತೆ ಈ ಪೋಸ್ಟರ್‌ ಡಿಸೈನ್‌ ಮಾಡಲಾಗಿದೆ. ಆದರೆ ಆ ನಟಿಯು ಮುಖವನ್ನು ತೋರಿಸಿಲ್ಲ. ಹಾಗಾದರೆ, ಆ ನಟಿ ಯಾರು? ಕಿಯಾರಾ ಅಡ್ವಾಣಿ! ಹೌದು, ಈ ಪೋಸ್ಟರ್‌ನಲ್ಲಿ ಯಶ್‌ ಮತ್ತು ಕಿಯಾರಾ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳ ನಿದ್ದೆ ಗೆಡಿಸಿದೆ.

ಪೋಸ್ಟರ್‌ನಲ್ಲಿ ಏನಿದೆ?

ಸಮುದ್ರದ ಅಲೆಗಳ ಅಬ್ಬರದ ನಡುವೆ ಯಶ್ ಮತ್ತು ಕಿಯಾರಾ ಅಡ್ವಾಣಿ ಗಾಢವಾದ ಆಲಿಂಗನದಲ್ಲಿರುವ ದೃಶ್ಯ ಈ ಪೋಸ್ಟರ್‌ನಲ್ಲಿದೆ. ಯಶ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರೆ, ಕಿಯಾರಾ ಬಿಳಿ ಉಡುಪಿನಲ್ಲಿ ಅಷ್ಟೇ ತೀವ್ರವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ. ಇದು ಬರೀ ಒಂದು ಹಾಡಿನ ಪೋಸ್ಟರ್‌ ಅಲ್ಲ, ಅದಕ್ಕಿಂತಲೂ ಹೆಚ್ಚಾಗಿ ಚಿತ್ರದಲ್ಲಿ ಒಂದು ಗಾಢ ಪ್ರೇಮಕಥೆ ಇದೆ ಎಂಬ ಸುಳಿವನ್ನು ಈ ಪೋಸ್ಟರ್‌ ನೀಡುತ್ತಿದೆ. ಪ್ರೀತಿ, ಆಸೆ ಮತ್ತು ತೀವ್ರತೆಯುಳ್ಳ ಭಾವನೆಗಳ ಸಂಗಮದಂತೆ ಈ ಪೋಸ್ಟರ್ ಮೂಡಿಬಂದಿದೆ.

Dhurandhar 2 vs Toxic: ‘ಟಾಕ್ಸಿಕ್’ ಚಿತ್ರದ ಬಗ್ಗೆ ಹೀಗೆ ಹೇಳೋದಾ ಆರ್​​ಜಿವಿ? ಗರಂ ಆದ್ರು ಕನ್ನಡಿಗರು

'ತಬಾಹಿ' ಹಾಡಿಗೆ ವಿಶಾಲ್ ಮಿಶ್ರಾ ಮ್ಯೂಸಿಕ್

ಭಾವನಾತ್ಮಕ ಹಾಗೂ ಸೂಪರ್ ಹಿಟ್ ಹಾಡುಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ‌ಬಾಲಿವುಡ್‌ನ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಈ ಹಾಡನ್ನು ಸಂಯೋಜಿಸಿ, ಹಾಡಿದ್ದಾರೆ. ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿಬಂದಿರುವ 'ತಬಾಹಿ' ಹಾಡು ಮಾರ್ಚ್ 2 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಯಶ್‌ ಅಭಿಮಾನಿಗಳು ಟಾಕ್ಸಿಕ್‌ ಸಿನಿಮಾದ ಈ ಮೊದಲ ಹಾಡಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

'ಟಾಕ್ಸಿಕ್ʼ ಸಿನಿಮಾಕ್ಕೆ ರವಿ ಬಸ್ರೂರು ಒಬ್ರೇ ಮ್ಯೂಸಿಕ್‌ ಡೈರೆಕ್ಟರ್‌ ಅಲ್ಲ! ಹಾಡುಗಳ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಮಾಹಿತಿ

ಟಾಕ್ಸಿಕ್‌ ಯಾವಾಗ ಬಿಡುಗಡೆ?

ಟಾಕ್ಸಿಕ್‌ ಸಿನಿಮಾವು ಮಾರ್ಚ್ 19ರಂದು ಜಾಗತಿಕ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಈಗ ಬಿಡುಗಡೆಯಾಗಿರುವ ಈ ಪೋಸ್ಟರ್ ಚಿತ್ರದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಈ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ, ತೆರೆಕಾಣುತ್ತಿದೆ.