Yash Radhika : ಯಶ್ ರಾಧಿಕಾ ದಾಂಪತ್ಯಕ್ಕೆ 9 ವರ್ಷ; ರಾಕಿಂಗ್ ಸ್ಟಾರ್‌ರನ್ನ ಈ ರೀತಿಯಲ್ಲಿ ನೋಡ್ತಾರಂತೆ ಸಿಂಡ್ರೆಲಾ!
Yash: ಯಶ್ 2004ರಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಉತ್ತರಾಯಣ ಎಂಬ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. 2005ರಲ್ಲಿ ನಂದ ಗೋಕುಲ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. . ಯಶ್ ಮತ್ತು ರಾಧಿಕಾ, 2008ರಲ್ಲಿ ರೊಮ್ಯಾಂಟಿಕ್ ಡ್ರಾಮಾ 'ಮೊಗ್ಗಿನ ಮನಸು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈಗ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ -
ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ರಾಧಿಕಾ ಪಂಡಿತ್ (Radhika Pandit) 9ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಟಾಕ್ಸಿಕ್ ಸಿನಿಮಾ ಸಖತ್ ಸುದ್ದಿಯಲ್ಲಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸವದ (marriage anniversary) ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯಗಳ ಮಳೆ ಹರಿಸಿದ್ದಾರೆ. ಇದೀಗ ರಾಧಿಕಾ ಕ್ಯೂಟ್ (Cute Video) ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ರಾಧಿಕಾ ಕ್ಯೂಟ್ ವಿಡಿಯೋ ಪೋಸ್ಟ್!
ರಾಧಿಕಾ ಅವರು ಯಶ್ ಅವರನ್ನು ಹೊಗಳಿ ಒಂದು ಕ್ಯೂಟ್ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. AI ಫೋಟೋ ಬಳಸಿ, ನನ್ನ ಗಂಡನನ್ನು ನಾನು ಹೇಗೆ ನೋಡುತ್ತೇನೆ? ಅಂತ ವಿವರಿಸಿದ್ದಾರೆ.
ಇದನ್ನೂ ಓದಿ: Yash: ಟಾಕ್ಸಿಕ್ ಸಿನಿಮಾದಲ್ಲಿ ಅಭಿನಯ! ಯಶ್ ಹೊಗಳಿ ಈ ಬಾಲಿವುಡ್ ನಟಿ ಹೇಳಿದ್ದೇನು?
ಯಶ್ ನನ್ನ ಪರ್ಸನಲ್ ಬಾಡಿಗಾರ್ಡ್, ನನ್ನ ಚಾಟ್ ಜಿಪಿಟಿ, ನನ್ನ ಚೆಫ್, ನನ್ನ ಪರ್ಸನಲ್ ಫೋಟೋಗ್ರಾಫರ್, ನನ್ನ ಮೆಂಟರ್, ನನ್ನ ಡಿಜೆ, ನನ್ನ ಪರ್ಸನಲ್ ಡಾಕ್ಟರ್, ನನ್ನ ಕ್ಯಾಲ್‌ಕುಲೇಟರ್, ನನ್ನ ಸ್ಟ್ರೆಸ್ ಬಸ್ಟರ್, ನನ್ನ ಶಾಂತಿ, ಎಲ್ಲದಕ್ಕೂ ನೀವು ನನ್ನ ಉತ್ತರವಾಗಿದ್ದೀರಿ ಎಂದು ಯಶ್ ಬಗ್ಗೆ AI ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಪೋಸ್ಟ್
ಒಟ್ಟಿಗೆ ನಟಿಸುತ್ತಿದ್ದ ಯಶ್ ಮತ್ತು ರಾಧಿಕಾ
ಯಶ್ 2004ರಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಉತ್ತರಾಯಣ ಎಂಬ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. 2005ರಲ್ಲಿ ನಂದ ಗೋಕುಲ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. .
ಕಿರುತೆರೆಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಯಶ್ ಮತ್ತು ರಾಧಿಕಾ, 2008ರಲ್ಲಿ ರೊಮ್ಯಾಂಟಿಕ್ ಡ್ರಾಮಾ 'ಮೊಗ್ಗಿನ ಮನಸು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಯಶ್ ಮತ್ತು ರಾಧಿಕಾ ಪಂಡಿತ್ 7 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಬಳಿಕ ಗೋವಾದ ಕಡಲ ತೀರದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು.
2016 ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದರು. ಈ ಮಾದರಿ ದಂಪತಿಗೆ ಐರಾ ಮತ್ತು ಯಥರ್ವ್ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಇಂದೇ ಟಾಕ್ಸಿಕ್ ಸಿನಿಮಾ ಬಿಗ್ ಅಪ್‌ಡೇಟ್
ರಾಕಿಂಗ್ ಸ್ಟಾರ್ʼ ಯಶ್ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಅವರ ಮುಂದಿನ ಸಿನಿಮಾ ʻಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ʼ ಮೇಲಿದೆ. ಈ ಚಿತ್ರದ ಮೂಲಕ ನಾಲ್ಕು ವರ್ಷಗಳ ನಂತರ ಯಶ್ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಸದ್ಯ ಟಾಕ್ಸಿಕ್ ರಿಲೀಸ್‌ಗೆ 100 ದಿನಗಳು ಬಾಕಿ ಇವೆ. ಈ ಚಿತ್ರವು ಮುಂದಿನ ವರ್ಷ ಮಾರ್ಚ್ 19ರಂದು ತೆರೆಗೆ ಬರಲಿದೆ. ಸದ್ಯ ಈ ಚಿತ್ರದ ಬಗ್ಗೆ ಒಂದಷ್ಟು ಅಪ್ಡೇಟ್ ಅನ್ನು ಚಿತ್ರತಂಡ ಹಂಚಿಕೊಂಡಿದೆ.
ಯಶ್ ಅವರಿಗೆ ಜನವರಿ 8ರಂದು ಹುಟ್ಟುಹಬ್ಬ. ಅದೇ ದಿನ ಟಾಕ್ಸಿಕ್ ಸಿನಿಮಾದ ಕಡೆಯಿಂದ ಒಂದು ಬಿಗ್ ಅಪ್ಡೇಟ್ ಸಿಗಲಿದೆ. ಈ ಹಿಂದೆ ಒಂದು ಟೀಸರ್ ರಿಲೀಸ್ ಆಗಿತ್ತು. ಈ ಬಾರಿ ಅದಕ್ಕಿಂತಲೂ ಭಿನ್ನವಾದದನ್ನೇನೋ ನೀಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಟ್ರೇಲರ್ ಅಥವಾ ಮತ್ತೊಂದು ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡುವ ಸಾಧ್ಯತೆ ಇದೆ.