ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕದಲ್ಲಿ ಮೂರೇ ದಿನಕ್ಕೆ 50 ಕೋಟಿ ಕ್ಲಬ್ ಸೇರಿದ ‘ರಾಮಾಯಣ’; ಕನ್ನಡ ಡಬ್ಬಿಂಗ್ ಇತಿಹಾಸದಲ್ಲೇ ಹೊಸ ದಾಖಲೆ!

Ramayana Box Office Collection: ʻರಾಮಾಯಣʼ ಸಿನಿಮಾವು ಕಲೆಕ್ಷನ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದಲ್ಲಿ ಕೇವಲ ಮೂರೇ ದಿನಗಳಲ್ಲಿ ಬರೋಬ್ಬರಿ 50 ಕೋಟಿಗೂ ಅಧಿಕ ಗಳಿಕೆ ಕಂಡಿರುವ ಈ ಚಿತ್ರ, ಕನ್ನಡ ಡಬ್ಬಿಂಗ್ ಆವೃತ್ತಿಯಿಂದಲೇ 25 ಕೋಟಿ ಬಾಚಿಕೊಂಡು ದಾಖಲೆ ಸೃಷ್ಟಿಸಿದೆ.

ಮೂರೇ ದಿನಕ್ಕೆ 50 ಕೋಟಿ ಕಲೆಕ್ಷನ್; ಕರ್ನಾಟಕದಲ್ಲಿ ʻರಾಮಾಯಣʼ ಹೊಸ ದಾಖಲೆ!

-

Avinash GR
Avinash GR Nov 8, 2026 8:10 PM

ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಓಟ ಮುಂದುವರಿಸಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಕರ್ನಾಟಕದಲ್ಲಿ ಭರ್ಜರಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಚಂದನವನದಲ್ಲಿ ಹೊಸ ಇತಿಹಾಸ ಬರೆದಿದೆ. ಎಲ್ಲಾ ಭಾಷೆಯ ಆವೃತ್ತಿಗಳಿಂದ ಚಿತ್ರಕ್ಕೆ ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ.

ಯಶ್‌ ಹವಾ ಸಾಬೀತಾಯ್ತು!

ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಈ ಐತಿಹಾಸಿಕ ಗಳಿಕೆಯಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿಯ ಪಾತ್ರ ಅತ್ಯಂತ ದೊಡ್ಡದಾಗಿದೆ. ಮೊದಲ ಮೂರು ದಿನಗಳಲ್ಲಿ ಕೇವಲ ಕನ್ನಡ ಅವತರಣಿಕೆಯಿಂದಲೇ ಬರೋಬ್ಬರಿ 25 ಕೋಟಿ ಗಳಿಕೆಯಾಗಿದೆ. ಕರ್ನಾಟಕದ ಗಲ್ಲಾಪೆಟ್ಟಿಗೆಯ ಇತಿಹಾಸದಲ್ಲೇ ಅನ್ಯಭಾಷೆಯಿಂದ ಕನ್ನಡಕ್ಕೆ ಡಬ್ ಆದ ಸಿನಿಮಾವೊಂದು ಇಷ್ಟು ಕಡಿಮೆ ಅವಧಿಯಲ್ಲಿ 25 ಕೋಟಿ ಬಾಚಿಕೊಂಡಿರುವುದು ಇದೇ ಮೊದಲು. ಈ ಅಭೂತಪೂರ್ವ ಯಶಸ್ಸಿಗೆ ಚಿತ್ರತಂಡದ ಭಾಗವಾಗಿರುವ ಹಾಗೂ ಪ್ರಮುಖ ಪಾತ್ರಧಾರಿ ರಾಕಿಂಗ್ ಸ್ಟಾರ್ ಯಶ್ ಅವರ ಜನಪ್ರಿಯತೆ ಮತ್ತು ಕರುನಾಡಿನಲ್ಲಿ ಅವರಿಗಿರುವ ಅಪಾರ ಅಭಿಮಾನಿ ಬಳಗವೇ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಭಾರತದಲ್ಲಿ 3 ದಿನಕ್ಕೆ 218 ಕೋಟಿ ಗಳಿಕೆ

ಕೇವಲ ಕರ್ನಾಟಕವಷ್ಟೇ ಅಲ್ಲದೆ, ದೇಶಾದ್ಯಂತ ಹಾಗೂ ಜಾಗತಿಕ ಮಟ್ಟದಲ್ಲೂ ‘ರಾಮಾಯಣ’ ಸಿನಿಮಾ ಕಲೆಕ್ಷನ್ ಸುನಾಮಿ ಎಬ್ಬಿಸಿದೆ. ಭಾರತದಲ್ಲಿ ಮೊದಲ ದಿನ 64.85 ಕೋಟಿ ಗಳಿಸುವ ಮೂಲಕ ಶುಭಾರಂಭ ಕಂಡಿದ್ದ ಸಿನಿಮಾ, ಎರಡನೇ ದಿನ (ಶುಕ್ರವಾರ) 48.05 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ, 3ನೇ ದಿನವಾದ ಶನಿವಾರದಂದು ಗಣನೀಯ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ ದೇಶಾದ್ಯಂತ ಬರೋಬ್ಬರಿ 69.80 ಕೋಟಿ ನಿವ್ವಳ ಗಳಿಕೆ ದಾಖಲಿಸಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಕಲೆಕ್ಷನ್ ಮೂರು ದಿನಗಳಿಗೆ 218.25 ಕೋಟಿ ತಲುಪಿದೆ.

Ramayana Movie: ರಾವಣನ ಸಿಂಹಾಸನಕ್ಕೆ 1 ಕೋಟಿ, ಶೂರ್ಪನಖಿಯ ರಥಕ್ಕೆ ಎಷ್ಟು ಬೆಲೆ ಗೊತ್ತಾ? ಭವ್ಯ ಸೆಟ್‌ ಸಂಪೂರ್ಣ ಮಾಹಿತಿ ಇಲ್ಲಿದೆ

ಶೀಘ್ರದಲ್ಲೇ 500 ಕೋಟಿ ಕ್ಲಬ್‌ ಸೇರೋದು ನಿಶ್ಚಿತ

ಮೂರನೇ ದಿನದ ಗಳಿಕೆಯಲ್ಲಿ ಹಿಂದಿ ಆವೃತ್ತಿಯು 19,927 ಶೋಗಳಿಂದ 53 ಕೋಟಿ ಗಳಿಸಿದ್ದರೆ, ಕನ್ನಡ ಆವೃತ್ತಿಯು ಕೇವಲ 907 ಶೋಗಳಿಂದ 6.30 ಕೋಟಿ ಬಾಚಿಕೊಂಡಿದೆ. ತೆಲುಗು ಆವೃತ್ತಿಯು 1,586 ಶೋಗಳಿಂದ 6.00 ಕೋಟಿ ಹಾಗೂ ಮಲಯಾಳಂ ಅವತರಣಿಕೆಯು 593 ಶೋಗಳಿಂದ 2 ಕೋಟಿ ಕಲೆಕ್ಷನ್ ಮಾಡಿವೆ. ಇನ್ನು ವಿದೇಶಗಳಲ್ಲೂ ಚಿತ್ರಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, 3ನೇ ದಿನದಂದು 60 ಕೋಟಿ ಗಳಿಕೆಯಾಗಿದೆ. ಇದರೊಂದಿಗೆ ವಿದೇಶಿ ಮಾರುಕಟ್ಟೆಯಿಂದ ಬಂದ ಒಟ್ಟು ಮೊತ್ತ 157.25 ಕೋಟಿಗೆ ಮುಟ್ಟಿದ್ದು, ವಿಶ್ವಾದ್ಯಂತ ಈ ಚಿತ್ರದ ಒಟ್ಟಾರೆ ಗ್ರಾಸ್ ಕಲೆಕ್ಷನ್ ಬರೋಬ್ಬರಿ 375.50 ಕೋಟಿ ಗಡಿ ದಾಟಿದೆ.