ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic movie: ನಾಳೆಯೇ ʻಟಾಕ್ಸಿಕ್‌ʼ ಸಿನಿಮಾದಿಂದ ಬರಲಿದೆ ಬಿಗ್‌ ಅಪ್‌ಡೇಟ್‌!

Toxic movie: ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜೀವ್ ರವಿ ಅವರ ಛಾಯಾಗ್ರಹಣ ಹಾಗೂ ಉಜ್ವಲ್ ಕುಲಕರ್ಣಿ ಅವರ ಸಂಕಲನವಿದೆ. ರವಿ ಬಸ್ರೂರ್ ಒಂದು ಹಾಡನ್ನು ರಚಿಸುತ್ತಿದ್ದಾರೆ ಮತ್ತು ಹಿನ್ನೆಲೆ ಸಂಗೀತವನ್ನು ನಿರ್ವಹಿಸುತ್ತಿದ್ದಾರೆ. ವಿಶಾಲ್ ಮಿಶ್ರಾ ಹಲವಾರು ಹಾಡುಗಳನ್ನು ರಚಿಸುತ್ತಿದ್ದಾರೆ .ತನಿಷ್ಕ್ ಬಾಗ್ಚಿ ಒಂದು ಹಾಡನ್ನು ನೀಡುತ್ತಿದ್ದಾರೆ.

ನಾಳೆಯೇ ʻಟಾಕ್ಸಿಕ್‌ʼ ಸಿನಿಮಾದಿಂದ ಬರಲಿದೆ ಬಿಗ್‌ ಅಪ್‌ಡೇಟ್‌!

ಯಶ್‌ ಟಾಕ್ಸಿಕ್‌ ಸಿನಿಮಾ -

Yashaswi Devadiga
Yashaswi Devadiga Jun 20, 2026 8:52 PM

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ (Toxic Movie) ಗ್ರೋನ್-ಅಪ್ಸ್' ಚಿತ್ರ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಸಿನಿಮಾದ ಬಗ್ಗೆ ಅಪ್​​ಡೇಟ್ ಒಂದನ್ನು ನೀಡಲು ಮುಂದಾಗಿದೆ.

ನಾಳೆಯೇ ಟಾಕ್ಸಿಕ್‌ ಬಿಗ್‌ ಅಪ್‌ಡೇಟ್‌

‘ಟಾಕ್ಸಿಕ್’ ಸಿನಿಮಾದ ಅಪ್​​ಡೇಟ್ ಒಂದು ನಾಳೆ ಹೊರಬೀಳಲಿದೆ. ‘ನಾಳೆ ಏನಾದ್ರೂ ಪ್ಲ್ಯಾನ್ಸ್ ಇವೆಯೇ?’ ಎಂದಷ್ಟೆ ಕೇಳಲಾಗಿದೆ. ‘ಟಾಕ್ಸಿಕ್’ ಸಿನಿಮಾದ ಅಧಿಕೃತ ಟ್ವಿಟ್ಟರ್ ಪೇಜಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Actor Darshan: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ದರ್ಶನ್!

ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜೀವ್ ರವಿ ಅವರ ಛಾಯಾಗ್ರಹಣ ಹಾಗೂ ಉಜ್ವಲ್ ಕುಲಕರ್ಣಿ ಅವರ ಸಂಕಲನವಿದೆ. ರವಿ ಬಸ್ರೂರ್ ಒಂದು ಹಾಡನ್ನು ರಚಿಸುತ್ತಿದ್ದಾರೆ ಮತ್ತು ಹಿನ್ನೆಲೆ ಸಂಗೀತವನ್ನು ನಿರ್ವಹಿಸುತ್ತಿದ್ದಾರೆ. ವಿಶಾಲ್ ಮಿಶ್ರಾ ಹಲವಾರು ಹಾಡುಗಳನ್ನು ರಚಿಸುತ್ತಿದ್ದಾರೆ .ತನಿಷ್ಕ್ ಬಾಗ್ಚಿ ಒಂದು ಹಾಡನ್ನು ನೀಡುತ್ತಿದ್ದಾರೆ.

ಸಿನಿಮಾದ ಬಿಡುಗಡೆ ದಿನಾಂಕ ನಾಳೆ ಘೋಷಣೆಯಾಗುವ ಸಾಧ್ಯತೆಯೂ ಇದೆ. ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು. ಆ ಸಮಯದಲ್ಲಿ ಇರಾನ್-ಇಸ್ರೇಲ್ ಮತ್ತು ಅಮೆರಿಕ ಸಂಘರ್ಷದಲ್ಲಿ ತೊಡಗಿಕೊಂಡಿದ್ದ ಕಾರಣಕ್ಕಾಗಿ ಸಿನಿಮಾದ ಬಿಡುಗಡೆಯನ್ನು ಜುಲೈ ತಿಂಗಳೀಗೆ ಮುಂದೂಡಲಾಯ್ತು.



ಜೂನ್ 4 ರಂದು ಸಿನಿಮಾ ಬಿಡುಗಡೆ ಆಗಿಲಿದೆ ಎಂದು ಘೋಷಿಸಲಾಗಿತ್ತು. ಇದೀಗ ನಾಳೆ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ.

ಗೀತು ಮೋಹನ್ ದಾಸ್ ನಿರ್ದೇಶನದ ಸಿನಿಮಾವು ಡಿಸ್ಟ್ರಿಬ್ಯೂಟರ್ ಗಳ ಬಹು ದೊಡ್ಡ ಜಾಲವನ್ನು ಸಹ ಹೊಂದಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ತೆಲುಗು ರಾಜ್ಯಗಳಲ್ಲಿ ವಿತರಣೆಯನ್ನು ನಿರ್ವಹಿಸುತ್ತಿದ್ದರೆ, ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

ಥಿಂಕ್ ಸ್ಟುಡಿಯೋಸ್, ಎಸ್ ಪಿಕ್ಚರ್ಸ್, ಟ್ರೈಡೆಂಟ್ ಆರ್ಟ್ಸ್ ಮತ್ತು ಫೈವ್ ಸ್ಟಾರ್ ಸೆಂಥಿಲ್ ಜಂಟಿಯಾಗಿ ತಮಿಳುನಾಡಿನ ಹಕ್ಕುಗಳನ್ನು ಪಡೆದುಕೊಂಡಿವೆ. ಇ4 ಎಂಟರ್‌ಟೈನ್‌ಮೆಂಟ್ ಕೇರಳದಲ್ಲಿ ವಿತರಣೆಯನ್ನು ನಿರ್ವಹಿಸುತ್ತಿದೆ ಮತ್ತು ಫಾರ್ಸ್ ಫಿಲ್ಮ್ ಸಾಗರೋತ್ತರ ಬಿಡುಗಡೆಯನ್ನು ನೋಡಿಕೊಳ್ಳುತ್ತಿದೆ.

ಅಂತರರಾಷ್ಟ್ರೀಯ ವಿತರಣೆಗಾಗಿ ಜಾಗತಿಕ ಸ್ಟುಡಿಯೋಗಳೊಂದಿಗೆ ಪ್ರತ್ಯೇಕ ವ್ಯವಸ್ಥೆಗಳ ಕುರಿತು ಚರ್ಚಿಸಲಾಗುತ್ತಿದೆ. ಪ್ರಮುಖ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: Samantha Ruth Prabhu: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ?

ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಜೊತೆಗೆ ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಚಿತ್ರ ಗುರಿಯಾಗಿರಿಸಿಕೊಂಡಿದೆ.