Actor Yash: ರಾಧಿಕಾ ಪಂಡಿತ್‌ಗಾಗಿ ಸಿಂಗರ್ ಆದ ಯಶ್; ರಾಕಿಂಗ್ ಸ್ಟಾರ್ ಹಾಡಿಗೆ ಫ್ಯಾನ್ಸ್ ಫಿದಾ
Actor Yash: ಮಾ. 7ರಂದು ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಪ್ತರಿಗಾಗಿ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಯಶ್ ʼಗೀತಾʼ ಚಿತ್ರದ ʼಜೊತೆ ಜೊತೆಯಲ್ಲಿʼ ಹಾಡು ಹಾಡಿದ್ದಾರೆ. ಈ ವಿಡಿಯೊವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದು, ವೈರಲ್ ಆಗಿದೆ.

ಮಕ್ಕಳೊಂದಿಗೆ ಯಶ್ ಮತ್ತು ರಾಧಿಕಾ ಪಂಡಿತ್.

ಬೆಂಗಳೂರು: ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್' (KGF) ಸರಣಿ ಚಿತ್ರಗಳ ಮೂಲಕ ಸಿನಿ ಜಗತ್ತಿನ ಗಮನ ಸೆಳೆದವರು ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ (Actor Yash). ಬಹು ಬೇಡಿಕೆಯ ನಟರಾಗಿರುವ ಅವರ ಕಾಲ್‌ಶೀಟ್‌ಗಾಗಿ ದೇಶದ ವಿವಿಧ ಚಿತ್ರರಂಗದ ನಿರ್ಮಾಪಕರು ಕಾದು ನಿಲ್ಲುವಂತಾಗಿದೆ. ಅದಾಗ್ಯೂ ಎಷ್ಟೇ ಬ್ಯುಸಿ ಇದ್ದರೂ ಯಶ್ ಬಿಡುವು ಮಾಡಿಕೊಂಡು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಆಯ್ರಾ ಹಾಗೂ ಯಥರ್ವ ಅವರೊಂದಿಗೆ ಸುತ್ತಾಡುತ್ತಾರೆ. ಮಾ. 7ರಂದು ರಾಧಿಕಾ ಪಂಡಿತ್ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ ಪಾರ್ಟಿಯಲ್ಲಿ ಯಶ್ ಹಾಡುವ ಮೂಲಕ ಯಶ್ ಮತ್ತೊಮ್ಮೆ ಫ್ಯಾಮಿಲಿ ಮ್ಯಾನ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಪ್ತರಿಗಾಗಿ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಯ ಪ್ರಮುಖ ಆಕರ್ಷಣೆಯಾಗಿದ್ದ ಯಶ್ ʼಗೀತಾʼ ಚಿತ್ರದ ʼಜೊತೆ ಜೊತೆಯಲ್ಲಿʼ ಹಾಡು ಹಾಡಿದ್ದಾರೆ. ʼʼಎವರ್‌ಗ್ರೀನ್ ನಮ್ಮ ನೆಚ್ಚಿನ ಹಾಡು. ಜೊತೆ ಜೊತೆಯಲಿ.ʼʼ ಎಂದು ಕ್ಯಾಪ್ಶನ್ ನೀಡಿ ರಾಧಿಕಾ ಪಂಡಿತ್ ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಈ ವಿಡಿಯೊ ನೋಡಿ ಫಿದಾ ಆಗಿದ್ದಾರೆ. ʼʼರಾಕಿಂಗ್ ಕಪಲ್ʼʼ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ʼʼಆ್ಯಕ್ಟರ್, ಡ್ಯಾನ್ಸರ್ ಈಗ ಸಿಂಗರ್ʼʼ ಎಂದು ಯಶ್ ಅವರನ್ನು ಹಲವರು ಹೊಗಳಿದ್ದಾರೆ. ಜತೆಗೆ ರಾಧಿಕಾ ಪಂಡಿತ್ ಅವರಿಗೆ ಶುಭಾಶಯ ಕೋರಿದ್ದಾರೆ. ಇನ್ನು ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಎಂದೂ ಹಲವರು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Actor Yash: ʼಟಾಕ್ಸಿಕ್ʼ, ʼರಾಮಾಯಣʼದ ಬಳಿಕ ತಮಿಳು ನಿರ್ದೇಶಕನ ಚಿತ್ರದಲ್ಲಿ ಯಶ್? ಯಾರು ಆ ಡೈರಕ್ಟರ್?
ʼರಾಮಾಯಣʼ, ʼಟಾಕ್ಸಿಕ್ʼ ಚಿತ್ರದಲ್ಲಿ ಯಶ್ ಬ್ಯುಸಿ
ಸದ್ಯ ಯಶ್ ಬಹು ನಿರೀಕ್ಷಿತ ʼಟಾಕ್ಸಿಕ್ʼ ಮತ್ತು ʼರಾಮಾಯಣʼ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ʼಟಾಕ್ಸಿಕ್ʼ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತಿದ್ದು, ಬಳಿಕ ವಿವಿಧ ಭಾಷೆಗಳಿಗೆ ಡಬ್ ಆಗಲಿದೆ. ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ನಿತೇಶ್ ತಿವಾರಿ ಅವರ ʼರಾಮಾಯಣʼ ಸಿನಿಮಾ ಮೂಲಕ ಯಶ್ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಯಸ್ ರಾವಣನಾಗಿ ಅಬ್ಬರಿಸಲಿದ್ದಾರೆ.
ಸದ್ಯ ಕೊನೆಯ ಹಂತದಲ್ಲಿರುವ ʼಟಾಕ್ಸಿಕ್ʼ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿ ಯಶ್ ʼರಾಮಾಯಣʼ ಅಖಾಡಕ್ಕೆ ಇಳಿಯಲಿದ್ದಾರೆ. ʼರಾಮಾಯಣʼ 2 ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗ 2026ರ ದೀಪಾವಳಿಯಂದು ಮತ್ತು 2ನೇ ಭಾಗ 2027ರ ದೀಪಾವಳಿಯಂದು ರಿಲೀಸ್ ಆಗಲಿದೆ. ಈ ವರ್ಷಾಂತ್ಯದಲ್ಲಿ ʼಟಾಕ್ಸಿಕ್ʼ ತೆರೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ ಯಶ್ ʼಕೆಜಿಎಫ್ 3ʼ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.