ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊಸಬರ ‘ನಡೆಯುವ ದೋಣಿ’ ಚಿತ್ರಕ್ಕೆ ಯೋಗರಾಜ್ ಭಟ್ ಸಾಥ್; ಸ್ಯಾಂಡಲ್‌ವುಡ್ ತಾರೆಯರಿಂದಲೂ ಭರ್ಜರಿ ಬೆಂಬಲ

ಚಂದ್ರಶೇಖರ್ ರಾಯ ಅವರ ನಿರ್ಮಾಣದ, ಉಮೇಶ್ ಬಡಿಗೇರ್ ಅವರ ನಿರ್ದೇಶನದ ‘ನಡೆಯುವ ದೋಣಿ’ ಸಿನಿಮಾಗೆ ನಿರ್ದೇಶಕ ಯೋಗರಾಜ್‌ ಭಟ್‌ ಅವರು ಸಾಥ್‌ ನೀಡಿದ್ದಾರೆ. ಈ ಸಿನಿಮಾದಲ್ಲಿ ರಘು ಬಸರಿಮರದ ನಾಯಕನಾಗಿ, ಸನ್ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಗಮನಸೆಳೆದ ಹೊಸಬರ ‘ನಡೆಯುವ ದೋಣಿ’ ಸಿನಿಮಾ

-

Avinash GR
Avinash GR Nov 24, 2026 1:14 PM

ಹೊಸ ವರ್ಷದ ಸಂಭ್ರಮದ ನಡುವೆ 2027ರ ಜನವರಿಯಲ್ಲಿ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿರುವ ಹೊಸಬರ ‘ನಡೆಯುವ ದೋಣಿ’ ಸಿನಿಮಾಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರು ಹಾಗೂ ಗಣ್ಯರಿಂದ ಅಪಾರ ಬೆಂಬಲ ಮತ್ತು ಪ್ರೋತ್ಸಾಹ ಹರಿದುಬರುತ್ತಿದೆ. ಈಗಾಗಲೇ ಸಿನಿಮಾವನ್ನು ವೀಕ್ಷಿಸಿ ಮನಸಾರೆ ಮೆಚ್ಚಿಕೊಂಡಿರುವ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು, ಈ ಹೊಸಬರ ತಂಡದ ಬೆನ್ನೆಲುಬಾಗಿ ನಿಂತಿದ್ದು, ತಮ್ಮ ಬ್ಯಾನರ್ ಮೂಲಕ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ.

ಹಾಡು ಹೇಳಿದ ಚೈತ್ರಾ ಆಚಾರ್‌

ಚಿತ್ರದ ಹಾಡುಗಳಿಗೆ ಗಣ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಟೈಟಲ್ ಸಾಂಗ್ ವೀಕ್ಷಿಸಿದ ಸಾಹಿತಿ ಜಯಂತ ಕಾಯ್ಕಿಣಿ ಅವರು ಚಿತ್ರತಂಡಕ್ಕೆ ಶುಭ ಹಾರೈಸಿರುವುದಲ್ಲದೆ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಗೀತೆಯನ್ನು ಬಿಡುಗಡೆಗೊಳಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ತುಂಬಿದ್ದಾರೆ. ಮತ್ತೊಂದೆಡೆ, ‘ದಿಯಾ’ ಖ್ಯಾತಿಯ ನಟಿ ಖುಷಿ ರವಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ನಟಿ ಚೈತ್ರಾ ಆಚಾರ್ ಅವರು ಚಿತ್ರಕ್ಕಾಗಿ ಪ್ರೀತಿಯಿಂದ ಹಾಡೊಂದನ್ನು ಹಾಡುವ ಮೂಲಕ ತಂಡಕ್ಕೆ ಸಾಥ್ ನೀಡಿದ್ದಾರೆ.

Udaala Movie: ಯೋಗರಾಜ್‌ ಭಟ್‌ ನಿರ್ಮಾಣದ ʼಉಡಾಳʼ ಚಿತ್ರದ ಟ್ರೇಲರ್‌ ಔಟ್‌

ಖ್ಯಾತ ಬರಹಗಾರ ಜೋಗಿ ಅವರು ಕೂಡ ‘ನಡೆಯುವ ದೋಣಿ’ ಚಿತ್ರದ ಹಾಡನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಅಪರಿಚಿತ ಚಿತ್ರತಂಡಕ್ಕೆ ವಿಡಿಯೋ ಮೂಲಕ ನನ್ನ ಧನ್ಯವಾದಗಳು. ನೈಜತೆಯಿಂದ ಕೂಡಿರುವ ಸುಂದರ ಪ್ರೇಮಗೀತೆಯನ್ನು ನೀಡಿದ್ದೀರಿ; ಸಿನಿಮಾ ಬಿಡುಗಡೆಯಾದ ಮೇಲೆ ಖಂಡಿತವಾಗಿಯೂ ಚಿತ್ರ ವೀಕ್ಷಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಚಿತ್ರದ ತುಣುಕುಗಳನ್ನು ಕಂಡು "ಒಳ್ಳೆಯ ಚಲನಚಿತ್ರದೊಂದಿಗೆ ಸದಾ ನಿಲ್ಲುತ್ತೇನೆ" ಎಂಬ ಅವರ ಮಾತು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇವರೊಂದಿಗೆ 'ಕ ಪಿಕ್ಚರ್ಸ್' ಸಂಸ್ಥೆಯೂ ಸಿನಿಮಾವನ್ನು ವೀಕ್ಷಿಸಿ, ಒಳ್ಳೆಯ ಸಿನಿಮಾದೊಂದಿಗೆ ಸದಾ ನಿಲ್ಲುವುದಾಗಿ ಭರವಸೆ ನೀಡಿರುವುದು ಚಿತ್ರತಂಡಕ್ಕೆ ಮತ್ತಷ್ಟು ಖುಷಿ ತಂದಿದೆ.

ಜನವರಿಯಲ್ಲಿ ಈ ಸಿನಿಮಾ ರಿಲೀಸ್

ಚಂದ್ರಶೇಖರ್ ರಾಯ ಅವರ ನಿರ್ಮಾಣದಲ್ಲಿ, ಉಮೇಶ್ ಬಡಿಗೇರ್ ಅವರ ನಿರ್ದೇಶನದಲ್ಲಿ ‘ನಡೆಯುವ ದೋಣಿ’ ಚಿತ್ರ ಮೂಡಿಬಂದಿದೆ. ರಘು ಬಸರಿಮರದ ನಾಯಕನಾಗಿ ಹಾಗೂ ಸನ್ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಖಿಲ ಆಲಮಟ್ಟಿ ಅವರ ಸಂಗೀತ ಸಂಯೋಜನೆ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಈಗಾಗಲೇ ಕೇಳುಗರಲ್ಲಿ ಭರವಸೆ ಮೂಡಿಸಿದೆ. ಉತ್ತಮ ಕಂಟೆಂಟ್ ಮತ್ತು ಗುಣಮಟ್ಟದ ಸಿನಿಮಾ ಮಾಡಿದರೆ ಚಿತ್ರರಂಗ ಹಾಗೂ ಪ್ರೇಕ್ಷಕರು ಸದಾ ಕೈಹಿಡಿಯುತ್ತಾರೆ ಎಂಬುದಕ್ಕೆ ಈ ಚಿತ್ರ ಉತ್ತಮ ನಿದರ್ಶನವಾಗಿದ್ದು, 2027ರ ಜನವರಿಯಲ್ಲಿ ತೆರೆಕಾಣಲಿರುವ ತಮ್ಮ ಚಿತ್ರಕ್ಕೆ ಕರುನಾಡಿನ ಸಿನಿಪ್ರಿಯರು ಮತ್ತು ಮಾಧ್ಯಮ ಮಿತ್ರರ ಹಾರೈಕೆ ಇರಲಿ ಎಂದು ಚಿತ್ರತಂಡ ಕೋರಿದೆ.