ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಬರಲಿದೆ ‘ಅಮೃತಧಾರೆ ಪಾರ್ಟ್ 2’‌ ! ವೀಕ್ಷಕರಿಗೆ ಖುಷಿಯೋ ಖುಷಿ

Amruthadhaare Serial: ‘ಅಮೃತಧಾರೆ’ ಗೌತಮ್ ದಿವಾನ್ ಮತ್ತು ಭೂಮಿಕಾ ತಮ್ಮ ಒಲವಿನ ಅಮೃತಧಾರೆ ಅಂತ್ಯ ಕಂಡಿದೆ. ಇದರಿಂದ ವೀಕ್ಷಕರೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಜೀ ವಾಹಿನಿಯವರೇ ಮತ್ತೆ ಅಮೃತಧಾರೆ ಹೊಸ ಟಚ್ ನೊಂದಿಗೆ ಬರುವುದಾಗಿ ತಿಳಿಸಿದ್ದಾರೆ. ಅಮೃತಧಾರೆ 2 ಬರಲಿದೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ವೀಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ.

ಅಮೃತಧಾರೆ ಧಾರಾವಾಹಿ

‘ಅಮೃತಧಾರೆ’ (Amruthadhaare Serial) ಗೌತಮ್ ದಿವಾನ್ (Gowtham Diwan) ಮತ್ತು ಭೂಮಿಕಾ ತಮ್ಮ ಒಲವಿನ ಅಮೃತಧಾರೆ ಅಂತ್ಯ ಕಂಡಿದೆ. ಇದರಿಂದ ವೀಕ್ಷಕರೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಜೀ ವಾಹಿನಿಯವರೇ (Zee Kannada) ಮತ್ತೆ ಅಮೃತಧಾರೆ ಹೊಸ ಟಚ್ ನೊಂದಿಗೆ ಬರುವುದಾಗಿ ತಿಳಿಸಿದ್ದಾರೆ. ಅಮೃತಧಾರೆ 2 ಬರಲಿದೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ವೀಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ.

ಜೀ ವಾಹಿನಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದೆ. ಪ್ರತಿ ಮನೆಗಳಲ್ಲಿ, ಮನಗಳಲ್ಲಿ ಒಲವ ಅಮೃತಧಾರೆ ಅಂತ ಶುರುವಾಗೋ ಅಮೃತಧಾರೆ ಧಾರವಾಹಿ ಕನ್ನಡಿಗರ ಹೃದಯಕ್ಕೆ ಸದಾ ಹತ್ತಿರ.. ಒಂಟಿ ಜೀವಗಳಿಬ್ಬರು ಒಂದಾಗೋ ಕಥೆಯಿದು.ವಯಸ್ಸನ್ನೂ ಮೀರಿ ಮದುವೆಯಾದ್ರೂ ಗಂಡ - ಹೆಂಡ್ತಿ ಅಂದ್ರೆ ಹಿಂಗಿರ್ಬೇಕು ಅಂತ ಗೌತಮ್, ಭೂಮಿಕಾ ಜೋಡಿಯನ್ನೇ ಜನ ಉದಾಹರಣೆ ಕೊಡೋ ಮಟ್ಟಕ್ಕೆ ಈ ಪಾತ್ರಗಳು ಬೆಳೆದು ನಿಂತಿವೆ.

ಪ್ರತಿ ಆರಂಭಕ್ಕೂ ಒಂದು ಅಂತ್ಯ ಇರೋ ಹಾಗೆ, ನಿಮ್ಮ zee ಕನ್ನಡ ಹೊತ್ತು ತಂದ ಅಮೃತಧಾರೆ, ಈಗ ಕೋಟ್ಯಂತರ ಜನರ ಪ್ರೀತಿಯಿಂದ ಕೊನೆಯಾಗ್ತಿದೆ. ಈ ಕೊನೆಯು ಕೂಡ ಹೊಸ ಆರಂಭಕ್ಕೆ ಮುನ್ನುಡಿ. ಆ ಆರಂಭವೇ ಅಮೃತಧಾರೆ 2. ಕೋಟ್ಯಂತರ ಅಭಿಮಾನಿಗಳ ಈ ಒಲವ ಅಮೃತಧಾರೆಗೆ ಹೊಸತನದ ಟಚ್ ನೊಂದಿಗೆ ಮತ್ತೆ ಬರ್ತೀವಿ. ಈ ಇಡೀ ಜರ್ನಿಯಲ್ಲಿ ನಮ್ಮೊಂದಿಗೆ ನಡೆದ ನಿಮಗೆ ನಿಮ್ಮ ಜೀ ಕನ್ನಡ ಎಂದೆಂದೂ ಆಭಾರಿ.

ಇದನ್ನೂ ಓದಿ: Bigg Boss Kannada 13: ಯುವರಾಣಿ ಪಟ್ಟದಿಂದ ಸೌಂದರ್ಯಗೆ ಗೇಟ್‌ಪಾಸ್‌!



ಇದನ್ನೂ ಓದಿ: Bigg Boss Kannada 13: ಆಸಿಯಾ ಈಗ ಯುವರಾಣಿ! ನಾಮಿನೇಶನ್‌ ಅಧಿಕಾರ ಚೆನ್ನಾಗಿ ನಿಭಾಯಿಸಿದ್ರಾ ಸೌಂದರ್ಯ?

ಅಮೃತಧಾರೆಯ ಜಾಗಕ್ಕೆ ಗೌರಿಪುತ್ರ ಬರುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ಈ ಸೀರಿಯಲ್‌ನ ಕೇಂದ್ರಬಿಂದು ಆಗಿದ್ದಾರೆ. ರಾಮಚಾರಿ ಖ್ಯಾತಿಯ ರಿತ್ವಿಕ್, ಡ್ರಾಮಾ ಜೂನಿಯರ್ಸ್ ಕಲಾವಿದೆ ಮಹತಿ ಭಟ್, ಹಿರಿಯ ಕಲಾವಿದರ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ದೊಡ್ಡ ತಾರಾಗಣವನ್ನು ಗೌರಿಪುತ್ರ ಹೊಂದಿದೆ. ಇಂದಿನಿಂದ ಪ್ರತಿದಿನ ಸಂಜೆ 7ಕ್ಕೆ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author