ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಯುವರಾಣಿ ಪಟ್ಟದಿಂದ ಸೌಂದರ್ಯಗೆ ಗೇಟ್‌ಪಾಸ್‌!

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಆಟ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ನಡುವಿನ ಪೈಪೋಟಿ, ವಾದ-ವಿವಾದ ಹಾಗೂ ಮನಸ್ತಾಪಗಳು ಹೆಚ್ಚಾಗುತ್ತಿದ್ದು, ಪ್ರತಿ ಟಾಸ್ಕ್ ಕೂಡ ಮನೆಯ ವಾತಾವರಣವನ್ನು ಮತ್ತಷ್ಟು ಕಾವೇರಿಸುತ್ತಿದೆ. ಇದೀಗ ಬಿಗ್ ಬಾಸ್ (Bigg boss) ಮನೆಯಲ್ಲಿ ನೀಡಲಾದ ವಿಶೇಷ ಟಾಸ್ಕ್ ಒಂದು ಸ್ಪರ್ಧಿಗಳ ನಡುವೆ ಭಾರೀ ಗದ್ದಲಕ್ಕೆ ಕಾರಣವಾಗಿದೆ.

ಯುವರಾಣಿ ಪಟ್ಟದಿಂದ ಸೌಂದರ್ಯಗೆ ಗೇಟ್‌ಪಾಸ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 16, 2026 9:03 AM

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಆಟ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ನಡುವಿನ ಪೈಪೋಟಿ, ವಾದ-ವಿವಾದ ಹಾಗೂ ಮನಸ್ತಾಪಗಳು ಹೆಚ್ಚಾಗುತ್ತಿದ್ದು, ಪ್ರತಿ ಟಾಸ್ಕ್ ಕೂಡ ಮನೆಯ ವಾತಾವರಣವನ್ನು ಮತ್ತಷ್ಟು ಕಾವೇರಿಸುತ್ತಿದೆ. ಇದೀಗ ಬಿಗ್ ಬಾಸ್ (Bigg boss) ಮನೆಯಲ್ಲಿ ನೀಡಲಾದ ವಿಶೇಷ ಟಾಸ್ಕ್ ಒಂದು ಸ್ಪರ್ಧಿಗಳ ನಡುವೆ ಭಾರೀ ಗದ್ದಲಕ್ಕೆ ಕಾರಣವಾಗಿದೆ.

ಗಾನವಿ ಮತ್ತು ಸೌಂದರ್ಯ ನಡುವೆ ಮಹಾರಾಣಿ ಪಟ್ಟದ ಪೈಪೋಟಿ!

ಮನೆಯ ಯುವರಾಣಿಯರಾದ ಗಾನವಿ ಹಾಗೂ ಸೌಂದರ್ಯ ಅವರಲ್ಲಿ ಯಾರು ಮಹಾರಾಣಿಯಾಗಲು ಅರ್ಹರಲ್ಲ ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಬಿಗ್ ಬಾಸ್ ಉಳಿದ ಸ್ಪರ್ಧಿಗಳಿಗೆ ನೀಡಿದ್ದಾರೆ.

ಈ ಟಾಸ್ಕ್‌ನಲ್ಲಿ ಮಹಾರಾಣಿಯಾಗಲು ಅರ್ಹರಲ್ಲ ಎಂದು ಭಾವಿಸುವ ಸ್ಪರ್ಧಿಯ ಫೋಟೋ ಮುಂದೆ ಕೆಂಪು ಬಾವುಟವನ್ನು ಇಡಬೇಕಿತ್ತು. ಆದರೆ ಈ ಸವಾಲು ಆರಂಭವಾಗುತ್ತಿದ್ದಂತೆ ಮನೆಯೊಳಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಶುರುವಾದವು.

ಸೌಂದರ್ಯಗೆ ಸಾಲು ಸಾಲು ರೆಡ್ ಫ್ಲ್ಯಾಗ್!

ಟಾಸ್ಕ್‌ನ ವೇಳೆ ಬಹುತೇಕ ಸ್ಪರ್ಧಿಗಳು ಸೌಂದರ್ಯ ಅವರ ಫೋಟೋ ಮುಂದೆ ಕೆಂಪು ಬಾವುಟಗಳನ್ನು ಇಟ್ಟಿದ್ದಾರೆ. ಇದರಿಂದ ಅಸಮಾಧಾನಗೊಂಡ ಸೌಂದರ್ಯ, "ನನಗೆ ಏಕೆ ರೆಡ್ ಫ್ಲ್ಯಾಗ್ ಕೊಟ್ಟಿದ್ದೀರಿ?" ಎಂದು ಸ್ಪರ್ಧಿಗಳನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಸ್ಪರ್ಧಿಗಳ ನಿರ್ಧಾರದಿಂದ ಸೌಂದರ್ಯ ಬೇಸರಗೊಂಡಿದ್ದು, ತಮ್ಮ ವಿರುದ್ಧ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದರಿಂದ ಮನೆಯ ವಾತಾವರಣ ಮತ್ತಷ್ಟು ಬಿಸಿಯಾಗಿದೆ.

ಗ್ರೋಸರಿ ಟಾಸ್ಕ್‌ನಲ್ಲಿ ಶುರುವಾಯಿತೇ ಹೊಸ ಜಗಳ?

ಮೇಲ್ನೋಟಕ್ಕೆ ಈ ಟಾಸ್ಕ್ ಕೇವಲ ಮಹಾರಾಣಿ ಪಟ್ಟಕ್ಕೆ ಅರ್ಹರಲ್ಲದವರನ್ನು ಗುರುತಿಸುವ ಪ್ರಕ್ರಿಯೆಯಂತೆ ಕಂಡರೂ, ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗಿವೆ. ಯಾರಿಗೆ ಯಾರ ಮೇಲೆ ಅಸಮಾಧಾನವಿದೆ ಎಂಬುದು ಕೂಡ ಈ ಟಾಸ್ಕ್ ಮೂಲಕ ಹೊರಬಂದಂತಾಗಿದೆ.

ಒಟ್ಟಿನಲ್ಲಿ, ಗಾನವಿ ಮತ್ತು ಸೌಂದರ್ಯ ನಡುವಿನ ಮಹಾರಾಣಿ ಪಟ್ಟದ ಪೈಪೋಟಿ ಬಿಗ್ ಬಾಸ್ ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ರೆಡ್ ಫ್ಲ್ಯಾಗ್ ಟಾಸ್ಕ್‌ನ ಪರಿಣಾಮ ಸ್ಪರ್ಧಿಗಳ ಆಟದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.