ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉತ್ತಮವಾಗಿ ಹಾಡುವ ನಿಮ್ಮ ಮಗು ʻಸರಿಗಮಪʼ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕಾ? ಇಲ್ಲಿದೆ ಮಾಹಿತಿ

Sa Re Ga Ma Pa Little Champs Audition: ಜೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್‌ ಚಾಂಪ್ಸ್‌ ಶೋ‌ ಶೀಘ್ರದಲ್ಲೇ ಆರಂಭವಾಗಲಿದ್ದು, 3 ರಿಂದ 15 ವರ್ಷದೊಳಗಿನ ಪ್ರತಿಭಾವಂತ ಮಕ್ಕಳಿಗೆ ಜೀ ಕನ್ನಡ ವೇದಿಕೆ ಕಲ್ಪಿಸಿಕೊಡಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಸರಿಗಮಪ ಆಡಿಷನ್ ಆರಂಭ: ನಿಮ್ಮ ಮಗುವಿನ ಹಾಡುಗಾರಿಕೆಗೆ ಇಲ್ಲಿದೆ ವೇದಿಕೆ

-

Avinash GR
Avinash GR Feb 11, 2026 1:46 PM

ಜೀ ಕನ್ನಡ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಮತ್ತೆ ಶುರುವಾಗ್ತಿದೆ. ಈ ಬಾರಿ ಮಕ್ಕಳಿಗಾಗಿ ಶೋ ನಡೆಸಲಾಗುತ್ತಿದೆ. 3 ರಿಂದ 15 ವರ್ಷ ವಯಸ್ಸಿನ ಒಳಗಿನ ಮಕ್ಕಳು ಭಾಗವಹಿಸಬಹುದಾದ ಸರಿಮಗಪ ಲಿಟ್ಲ್‌ ಚಾಂಪ್ಸ್‌ ಶೋ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ. ನಿಮ್ಮ ಮಕ್ಕಳು ಉತ್ತಮವಾಗಿ ಹಾಡುತ್ತಾರೆಯೇ? ಈ ಶೋನ ವೇದಿಕೆ ಮೇಲೆ ನಿಮ್ಮ ಮಕ್ಕಳನ್ನು ನೋಡಬೇಕು ಎಂಬ ಆಸೆ ಇದೆಯಾ? ಹಾಗಿದ್ದಲ್ಲಿ, ಇಲ್ಲಿದೆ ನೋಡಿ ಸುವರ್ಣಾವಕಾಶ.

ಶೀಘ್ರದಲ್ಲೇ ಬರಲಿದೆ ಸರಿಮಗಪ ಶೋ

ಜೀ ಕನ್ನಡದಲ್ಲಿ ಶೀಘ್ರದಲ್ಲೇ ಸರಿಮಗಪ ಶೋ ಆರಂಭವಾಗಲಿದ್ದು, ಅದಕ್ಕಾಗಿ ಲಿಟ್ಲ್‌ ಸಿಂಗರ್‌ಗಳಿಗಾಗಿ ಆಡಿಷನ್‌ ಶುರುವಾಗಿದೆ. ಹಾಗಾದರೆ, ಯಾರೆಲ್ಲಾ ಆಡಿಷನ್‌ನಲ್ಲಿ ಭಾಗಿಯಾಗಬಹುದು? ಏನೆಲ್ಲಾ ರೂಲ್ಸ್‌ ಇವೆ? ಮುಂದೆ ಓದಿ. ಸರಿಮಗಪ ಲಿಟ್ಲ್‌ ಚಾಂಪ್ಸ್ ಆಡಿಷನ್‌ಗಳು ಕರ್ನಾಟಕದ 31 ಜಿಲ್ಲೆಗಳಲ್ಲಿ ನಡೆಯಲಿದ್ದು, ಚೆನ್ನಾಗಿ ಹಾಡುವ 3 ರಿಂದ 15 ವರ್ಷದ ಒಳಗಿನ ಮಕ್ಕಳು, 3 ವಿಭಿನ್ನ ಹಾಡುಗಳನ್ನು ಕಲಿತು ಆಡಿಷನ್‌ನಲ್ಲಿ ಭಾಗವಹಿಸಿ, ಹಾಡಬೇಕು.

Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್‌ಗಳು ಯಾವವು?

ಈ ಆಡಿಷನ್‌ನಲ್ಲಿ ಭಾಗಿಯಾಗಲು, ಮಗುವಿನ ಪಾಸ್‌ಪೋರ್ಟ್‌ ಸೈಜ್‌ ಫೋಟೋ, ಅಡ್ರೆಸ್ ಪ್ರೂಫ್ ಕಡ್ಡಾಯವಾಗಿ ಬೇಕು. ಫೆ.14ರಿಂದ ಆಡಿಷನ್‌ಗಳು ಆರಂಭವಾಗಲಿದ್ದು, ಸ್ಪರ್ದಿಗಳು ಯಾವುದೇ ಕರೋಕೆ ಬಳಸುವಂತಿಲ್ಲ. ಇನ್ನು ಈ ಆಡಿಷನ್ ನಲ್ಲಿ ಭಾಗವಹಿಸಲು ಜೀ ಕನ್ನಡ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ ಎಂದು ವಾಹಿನಿ ಸ್ಪಷ್ಟಪಡಿಸಿದೆ.

Anchor Anushree: ಜೀ ಕನ್ನಡ ವಾಹಿನಿಯಿಂದ ಮಡಿಲು ತುಂಬುವ ಶಾಸ್ತ್ರ- ತಾಳಿ ಹಿಡಿದು ಅನುಶ್ರೀ ಭಾವುಕ!

ಆಡಿಷನ್ ಎಲ್ಲೆಲ್ಲಿ? ಯಾವಾಗ ನಡೆಯುತ್ತದೆ?

ಫೆಬ್ರವರಿ 14 (ಶನಿವಾರ): ಕೊಪ್ಪಳ, ಶಿವಮೊಗ್ಗ, ತುಮಕೂರು

ಫೆಬ್ರವರಿ 15 (ಭಾನುವಾರ): ಬಳ್ಳಾರಿ, ಉಡುಪಿ, ಬೆಂಗಳೂರು

ಫೆಬ್ರವರಿ 16 (ಸೋಮವಾರ): ರಾಯಚೂರು, ಮಂಗಳೂರು

ಫೆಬ್ರವರಿ 17 (ಮಂಗಳವಾರ): ಯಾದಗಿರಿ, ಚಿತ್ರದುರ್ಗ, ಮಡಿಕೇರಿ

ಫೆಬ್ರವರಿ 18 (ಬುಧವಾರ): ಚಿಕ್ಕಮಗಳೂರು, ದಾವಣಗೆರೆ

ಫೆಬ್ರವರಿ 19 (ಗುರುವಾರ): ಬೀದರ್, ಹಾವೇರಿ

ಫೆಬ್ರವರಿ 20 (ಶುಕ್ರವಾರ): ಕಲಬುರಗಿ, ಮಂಡ್ಯ, ಶಿರಸಿ

ಫೆಬ್ರವರಿ 21 (ಶನಿವಾರ): ವಿಜಯಪುರ, ಬೆಳಗಾವಿ, ಹಾಸನ

ಫೆಬ್ರವರಿ 22 (ಭಾನುವಾರ): ಬಾಗಲಕೋಟೆ, ಮೈಸೂರು, ಹುಬ್ಬಳ್ಳಿ

ಫೆಬ್ರವರಿ 23 (ಸೋಮವಾರ): ಗದಗ

ಫೆಬ್ರವರಿ 24 (ಮಂಗಳವಾರ): ವಿಜಯನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ

ಫೆಬ್ರವರಿ 25 (ಬುಧವಾರ): ರಾಮನಗರ, ಕೋಲಾರ