Singer Zubeen Garg: ಲಿಮ್ಕಾ ರೆಕಾರ್ಡ್‌ಗೆ ಸೇರ್ಪಡೆಯಾಯಿತು ಗಾಯಕ ಜುಬೀನ್ ಗಾರ್ಗ್ ಅಂತಿಮ ಯಾತ್ರೆ
ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಿಧನರಾದ ಅಸ್ಸಾಂ ಗಾಯಕ ಜುಬೀನ್ ಗಾರ್ಗ್ ಅವರಿಗೆ ವಿದಾಯ ಹೇಳಲು ಭಾನುವಾರ ಗುವಾಹಟಿಯಲ್ಲಿ ಸಾವಿರಾರು ಜನರು ಸೇರಿದ್ದರು. ಈ ವೇಳೆ ಲಕ್ಷಾಂತರ ಜನರು ಭಾಗಿಯಾಗಿದ್ದರು. ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಗಾಯಕ ಪಾಪನ್ ಮತ್ತು ಭೂತಾನ್ ರಾಜನ ಪ್ರತಿನಿಧಿ ಸೇರಿದಂತೆ ಪ್ರಮುಖ ವ್ಯಕ್ತಿಗಳು ಗೌರವ ಸಲ್ಲಿಸಿದರು.

-

ದಿಸ್ಪುರ: ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಿಧನರಾದ ಅಸ್ಸಾಂ ಗಾಯಕ ಜುಬೀನ್ ಗಾರ್ಗ್ (Singer Zubeen Garg) ಅವರಿಗೆ ವಿದಾಯ ಹೇಳಲು ಭಾನುವಾರ ಗುವಾಹಟಿಯಲ್ಲಿ ಸಾವಿರಾರು ಜನರು ಸೇರಿದ್ದರು. ಈ ವೇಳೆ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಜನರು ಸೇರಿದ 4ನೇ ಅಂತಿಮ ಯಾತ್ರೆ ಎಂದು ದಾಖಲೆ ನಿರ್ಮಿಸಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ (Limca Book of Records) ಸೇರ್ಪಡೆಯಾಗಿದೆ. ಗಾಯಕನ ಅಂತಿಮ ದರ್ಶನ ಪಡೆಯಲು ರಾತ್ರಿಯಿಡೀ ಗಂಟೆಗಟ್ಟಲೆ ಕಾಯುತ್ತಾ ದುಃಖಿತ ಅಭಿಮಾನಿಗಳ ಬೃಹತ್ ಗುಂಪು ಸಾಲುಗಟ್ಟಿ ನಿಂತಿತ್ತು.
ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಗಾಯಕ ಪಾಪನ್ ಮತ್ತು ಭೂತಾನ್ ರಾಜನ ಪ್ರತಿನಿಧಿ ಸೇರಿದಂತೆ ಪ್ರಮುಖ ವ್ಯಕ್ತಿಗಳು ಗೌರವ ಸಲ್ಲಿಸಿದರು. ಅವರ ಪಾರ್ಥಿವ ಶರೀರ ಗುವಾಹಟಿಯ ತಮ್ಮ ನಿವಾಸವನ್ನು ತಲುಪುತ್ತಿದ್ದಂತೆ ಅವರ ಪತ್ನಿ ಗರಿಮಾ ಸೈಕಿಯಾ ಗಾರ್ಗ್ ಕಣ್ಣೀರು ಹಾಕುತ್ತಾ ಭಾವುಕರಾಗಿದ್ದರು. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ, ಗಾರ್ಗ್ ಅವರ ಅಂತಿಮ ಯಾತ್ರೆ ವೇಳೆ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ಮೂಲಕ ಮೈಕೆಲ್ ಜಾಕ್ಸನ್, ಪೋಪ್ ಫ್ರಾನ್ಸಿಸ್, ರಾಜಕುಮಾರಿ ಡಯಾನಾ ಮತ್ತು ರಾಣಿ ಎಲಿಜಬೆತ್ ಅವರಿಗೆ ನೀಡಿದಂತೆ ಇದು ಕೂಡ ಸ್ಮರಣೀಯ ವಿದಾಯ ಎಂದು ಗುರುತಿಸಲಾಗಿದೆ. ಕಾಮರ್ಕುಚಿಯ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಅಂತ್ಯಕ್ರಿಯೆ ನಡೆಯುವ ಸ್ಥಳದವರೆಗೆ ಶವಯಾತ್ರೆ ನಡೆಸಲಾಗಿದೆ.
1972ರಲ್ಲಿ ಜನಿಸಿದ ಗಾರ್ಗ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಸಂಗೀತದಲ್ಲಿ ತಮ್ಮ ಹೆಸರನ್ನು ಅಚ್ಚಳಿಯಂತೆ ಮಾಡಿದ್ದಾರೆ. ಅಸ್ಸಾಂ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದಾಗ ಜುಬೀನ್ ಗಾರ್ಗ್ ಅವರು ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದರು. ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.
ಈ ಸುದ್ದಿಯನ್ನೂ ಓದಿ: Singer Zubeen Garg: ಖ್ಯಾತ ಗಾಯಕ ಜುಬೀನ್ ಗರ್ಗ್ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ
ಜುಬೀನ್ ಗರ್ಗ್ ಅಸ್ಸಾಮಿ ಮತ್ತು ಹಿಂದಿ ಮಾತ್ರವಲ್ಲದೆ, ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ನೇಪಾಳಿ ಸೇರಿದಂತೆ ಹಲವು ಭಾಷೆಗಳಿಗೆ ಹಾಡಿದ್ದಾರೆ. ಗ್ಯಾಂಗ್‌ಸ್ಟರ್‌ಗಾಗಿ ಅವರು ಹಾಡಿದ್ದ ‘ಯಾ ಅಲಿ’ ಹಾಡು ಅವರಿಗೆ ಅಸ್ಸಾಂನ ಹೊರಗೂ ಜನಪ್ರಿಯತೆ ತಂದುಕೊಟ್ಟಿತು.