ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೈಸೂರು

T20 World Cup final: ಟಿ20 ವಿಶ್ವಕಪ್ ಫೈನಲ್‌; ಟೀಂ ಇಂಡಿಯಾ ಗೆಲುವಿಗಾಗಿ ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ದೇವಸ್ಥಾನಗಳಲ್ಲಿ ಅಭಿಮಾನಿಗಳ ಪೂಜೆ

ಟೀಂ ಇಂಡಿಯಾ ಗೆಲುವಿಗಾಗಿ ರಾಜ್ಯದ ವಿವಿಧೆಡೆ ಅಭಿಮಾನಿಗಳ ಪೂಜೆ

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾ ಗೆಲುವಿಗಾಗಿ ದೇಶಾದ್ಯಂತ ದೇವಸ್ಥಾನಗಳಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಅದೇ ರೀತಿ ರಾಜ್ಯದ ಬೆಳಗಾವಿ, ಮೈಸೂರು ಸೇರಿ ವಿವಿಧೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

Karnataka Budget 2026: ಸಾಲದ ಪ್ರಮಾಣ ಹೆಚ್ಚಳವೆಂಬುದು ಸತ್ಯಕ್ಕೆ ದೂರವಾದ ಮಾತು: ಸಿಎಂ ಸಿದ್ದರಾಮಯ್ಯ

ಸಾಲದ ಪ್ರಮಾಣ ಹೆಚ್ಚಳವೆಂಬುದು ಸತ್ಯಕ್ಕೆ ದೂರವಾದ ಮಾತು: ಸಿಎಂ ಸಿದ್ದರಾಮಯ್ಯ

CM Siddaramaiah: ಬಿಜೆಪಿಯ ಪ್ರಧಾನಿ ಮೋದಿಯವರು ಸಾಲ ಮಾಡಿದ್ದಾರೆ. ಸಾಲ ಮಾಡದೇ ಅಭಿವೃದ್ಧಿ ಸಾಧ್ಯವಿಲ್ಲ. ಆರ್ಥಿಕ ಹೊಣೆಗಾರಿಕೆ ಕಾಯ್ದೆ ತಿಳಿಸಿರುವ ಮಾನದಂಡಗಳ ಮಿತಿಯಲ್ಲಿ ರಾಜ್ಯದ ಸಾಲದ ಪ್ರಮಾಣ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಸಿಎಂ ಬದಲಾವಣೆ ವಿಚಾರ; ಬಜೆಟ್‌ ಬೆನ್ನಲ್ಲೇ ಶಾಕಿಂಗ್‌ ಹೇಳಿಕೆ ನೀಡಿದ ಸಿದ್ದರಾಮಯ್ಯ!

ಸಿಎಂ ಬದಲಾವಣೆ ವಿಚಾರ ಶಾಕಿಂಗ್‌ ಹೇಳಿಕೆ ನೀಡಿದ ಸಿದ್ದರಾಮಯ್ಯ!

Karnataka CM row: ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದ ವೇಳೆ ಮಾಧ್ಯಮಗಳ ಜತೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಇನ್ನೆರಡು ಬಜೆಟ್‌ ನೀವೇ ಮಂಡಿಸುತ್ತೀರಾ ಎಂಬ ಪ್ರಶ್ನೆಗೆ ಅವರು ನೀಡಿರುವ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Assault Case: ಪಿಯುಸಿ ಪರೀಕ್ಷೆ ಬರೆಯಲು ಹೋಗದಂತೆ ವಿದ್ಯಾರ್ಥಿನಿ ಮೇಲೆ ಸೋದರಮಾವನ ಹಲ್ಲೆ

ಪಿಯುಸಿ ಪರೀಕ್ಷೆ ಬರೆಯಲು ಹೋಗದಂತೆ ವಿದ್ಯಾರ್ಥಿನಿ ಮೇಲೆ ಸೋದರಮಾವನ ಹಲ್ಲೆ

ಪೂರ್ಣಿಮಾ ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ. ಆಕೆ ಪರೀಕ್ಷೆ (2nd PUC Exam) ಮುಗಿಸಿ ಮನೆಗೆ ಬಂದಾಗ ವಿದ್ಯಾರ್ಥಿನಿಯ ಸೋದರ ಮಾವ ಸೋಮಣ್ಣ ಎಂಬಾತ ಏಕಾಏಕಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಹಳೇ ದ್ವೇಷದ ಹಿನ್ನಲೆಯಲ್ಲಿ, ನೀನು ಓದಬಾರದು ಅಂತ ಹಲ್ಲೆ ಮಾಡಿದ್ದಾನೆ.

drugs factory: ಮೈಸೂರಿನಲ್ಲಿ ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ, ಐವರು ಗುಜರಾತಿಗಳ ಸೆರೆ

ಮೈಸೂರಿನಲ್ಲಿ ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ, ಐದು ಗುಜರಾತಿಗಳ ಸೆರೆ

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ ಪತ್ತೆಯಾಗುತ್ತಿದ್ದಂತೆ ಅಲರ್ಟ್ ಆಗಿದ್ದ ಜಿಲ್ಲಾ ಪೊಲೀಸರು, ಕಳೆದ ಜ.28 ರಂದು ಮೈಸೂರು ತಾಲೂಕು ಯಾಂದಳ್ಳಿಯಲ್ಲಿನ ಮನೆಯೊಂದರಲ್ಲಿ ಡ್ರಗ್ಸ್ ತಯಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದರು. ದಾಳಿ ವೇಳೆ ಆ ಮನೆಯಲ್ಲಿ ಹಲವು ರಾಸಾಯನಿಕ ವಸ್ತುಗಳು ಹಾಗೂ 10 ಬ್ಯಾರಲ್ ರಾಸಾಯನಿಕ ದ್ರವ್ಯ ಪತ್ತೆಯಾಗಿತ್ತು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ, ಜೆಡಿಎಸ್ ತಾಕತ್ ತೋರಿಸುತ್ತೇವೆ ಎಂದ ನಿಖಿಲ್ ಕುಮಾರಸ್ವಾಮಿ

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ, ಜೆಡಿಎಸ್ ತಾಕತ್ ತೋರಿಸುತ್ತೇವೆ

Nikhil Kumaraswamy: ಹಿಂದೆ 5 ವರ್ಷ ಈಗ 3 ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಏಳು ಲಕ್ಷದ ಅರವತ್ತು ಕೋಟಿ ಸಾಲ ಮಾಡಿ ಈ ರಾಜ್ಯದ ಜನರ ಮೇಲೆ ಸಾಲದ ಹೊರೆಯನ್ನು ಹೊರಿಸುವುದಲ್ಲದೆ ಸಾಲಗಾರ ಸರ್ಕಾರ ಎಂಬ ಬಿರುದಿನೊಂದಿಗೆ ಅಭಿವೃದ್ಧಿ ಮಾಡದೆ ಅಧಿಕಾರದ ತಿಕ್ಕಾಟದಲ್ಲಿ ಕಾಲ ಕಳೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

Snehamayi Krishna: ಬಂಧಿತ ಸ್ನೇಹಮಯಿ ಕೃಷ್ಣ ಮನೆ, ಕಚೇರಿಯಲ್ಲಿ ತೀವ್ರ ತಲಾಶೆ, ಮಹತ್ವದ ದಾಖಲೆ ಜಪ್ತಿ

ಸ್ನೇಹಮಯಿ ಕೃಷ್ಣ ಮನೆ, ಕಚೇರಿಯಲ್ಲಿ ತೀವ್ರ ತಲಾಶೆ, ಮಹತ್ವದ ದಾಖಲೆ ಜಪ್ತಿ

ದಾಳಿಯ ವೇಳೆ ಸಿಕ್ಕ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ದಾಖಲೆಗಳನ್ನು ಸಿಸಿಬಿ ಪೊಲೀಸರು ಸ್ಥಳದಲ್ಲೇ ಸೀಲ್ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಡಿಜಿಟಲ್ ಪುರಾವೆಗಳನ್ನು ಎಫ್‌ಎಸ್‌ಎಲ್ (FSL) ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ. ನಕಲಿ ಆಡಿಯೋ ತುಣುಕು ಸೃಷ್ಟಿಸಿದವರ ಹಿಂದೆ ಯಾರಿದ್ದಾರೆ ಮತ್ತು ಇದರ ಉದ್ದೇಶವೇನಿತ್ತು ಎಂಬುದು ಸಿಸಿಬಿ ವಿಚಾರಣೆಯಿಂದ ಹೊರಬರಬೇಕಿದೆ.

Mysuru News: ಪ್ರವಾಸಕ್ಕೆ ಹೋಗಲು ಗಂಡ ಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ

ಪ್ರವಾಸಕ್ಕೆ ಹೋಗಲು ಗಂಡ ಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ

ಮೈಸೂರಿನ ಸರಸ್ವತಿಪುರಂನಲ್ಲಿ ಘಟನೆ ನಡೆದಿದೆ. ನೆನ್ನೆ ರಾತ್ರಿ ಪ್ರವಾಸದ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ಗಂಡ ಮನೆಯಿಂದ ಹೊರ ಹೋದ ನಂತರ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಂಡ್ಯದಲ್ಲಿ 500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ARAI ಸಂಶೋಧನಾ ಕೇಂದ್ರ ಸ್ಥಾಪನೆ: ಎಚ್‌ಡಿಕೆ ಘೋಷಣೆ

ಮಂಡ್ಯದಲ್ಲಿ 500 ಕೋಟಿ ವೆಚ್ಚದಲ್ಲಿ ARAI ಸಂಶೋಧನಾ ಕೇಂದ್ರ ಸ್ಥಾಪನೆ

ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ (ARAI) ಸಂಶೋಧನಾ ಕೇಂದ್ರ ತೆರೆಯಲು 100 ಎಕರೆ ಭೂಮಿ ಅಗತ್ಯವಿದೆ. ಆದಷ್ಟು ಬೇಗ ಭೂಮಿಯನ್ನು ಹಂಚಿಕೆ ಮಾಡಬೇಕು ಎಂದು ಸ್ವತಃ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಅವರು ಆದಷ್ಟು ಬೇಗ ಭೂಮಿ ನೀಡುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Lokayukta Raid: ಮೈಸೂರಿನಲ್ಲಿ 7 ಕಡೆ ಲೋಕಾಯುಕ್ತ ದಾಳಿ, ಲಕ್ಷಾಂತರ ಹಣ ಪತ್ತೆ

ಮೈಸೂರಿನಲ್ಲಿ 7 ಕಡೆ ಲೋಕಾಯುಕ್ತ ದಾಳಿ, ಲಕ್ಷಾಂತರ ಹಣ ಪತ್ತೆ

ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆ ಜೆ.ಇ. ಕೆ.ಆರ್.ಚಂದ್ರಶೇಖರ್ ಮನೆ ಹಾಗೂ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ. ಚಂದ್ರಶೇಖರ್‌ಗೆ ಸಂಬಂಧಿಸಿದ ಮೈಸೂರಿನ ವಿಜಯ ನಗರದ ನಿವಾಸ, ಕೆಜಿ ಕೊಪ್ಪಲು ನಿವಾಸ ಹಾಗೂ ಟಿ.ನರಸೀಪುರ ಕಚೇರಿ ಏರಿ 4 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 60 ಲಕ್ಷ ಹಣ ಪತ್ತೆ ಮಾಡಿದ್ದಾರೆ.

ನಂಜನಗೂಡು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ, ಮಗು ಮೇಲೆ ಚಿರತೆ ದಾಳಿ

ನಂಜನಗೂಡು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ, ಮಗು ಮೇಲೆ ಚಿರತೆ ದಾಳಿ

Leopard attack: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚುಂಚನಹಳ್ಳಿಯಲ್ಲಿ ಘಟನೆ ನಡೆದಿದೆ. ಮಹದೇವಸ್ವಾಮಿ ಎಂಬುವವರು ಪತ್ನಿ, ಮಗು ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಇದರಿಂದ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಮುಡಾ ಹಗರಣ; ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್: ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌

MUDA Scam Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಅವರಿಗೆ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ವಜಾ ಮಾಡಿದೆ.

Dream Library: ಬಾಗಿಲು ಮುಚ್ಚುವ ಹಂತ ತಲುಪಿದ ಕನಸಿನ ಗ್ರಂಥಾಲಯ

ಬಾಗಿಲು ಮುಚ್ಚುವ ಹಂತ ತಲುಪಿದ ಕನಸಿನ ಗ್ರಂಥಾಲಯ

ಮೈಸೂರಿನ ರಾಜೀವ್ ನಗರ ಬಡಾವಣೆ ನಿವಾಸಿಯಾಗಿರುವ ಇವರು ಓದಿದ್ದು ಕೇವಲ ಒಂದನೇ ತರಗತಿ, ಆದರೆ ನೋಡಿ ಕಲಿತದ್ದು ಅಪಾರ. ಬಡತನದ ಬೇಗೆಯಲ್ಲಿ ನಲುಗಿದ ಕುಟುಂಬದಲ್ಲಿ ಹುಟ್ಟಿದ ಇಸಾಕ್ ಅವರಿಗೆ ಓದು ಹತ್ತಲಿಲ್ಲ ಎಂದಲ್ಲ, ತುಂಬಿದ ಕುಟುಂಬದ ಹೊಟ್ಟೆ ತುಂಬಿಸಬೇಕಾದ ಅನಿವಾರ್ಯತೆ. ಅದರ ಪರಿಣಾಮವಾಗಿ ಎಳೆಯ ವಯಸ್ಸಿಗೇ ಬಾಲಕಾರ್ಮಿಕ, ಜೀತದಾಳು.

Bharat Connect ಮೂಲಕ ಸರಳೀಕೃತ EV ವಾಲೆಟ್ ರೀಚಾರ್ಜ್ ಮೂಲಕ NBBL ಮೊಬಿಲಿಟಿ ಕ್ಷೇತ್ರಕ್ಕೆ ಶಕ್ತಿ

EV ವಾಲೆಟ್‌ಗಳನ್ನು ಸುಗಮವಾಗಿ ರೀಚಾರ್ಜ್ ಮಾಡುವ ಅವಕಾಶ

ನೀತಿ ಆಯೋಗದ ವರದಿಯ ಪ್ರಕಾರ, ಭಾರತದಲ್ಲಿ EVಗಳ ಮಾರಾಟವು 2016ರಲ್ಲಿ 50,000 ರಿಂದ 2024ರಲ್ಲಿ 2.08 ಮಿಲಿಯನ್‌ಗೆ ಹೆಚ್ಚಾಗಿದೆ. ವರದಿ ಮುಂದುವರೆದು, 2030ರ ವೇಳೆಗೆ ಮಾರಾಟವಾಗುವ ಒಟ್ಟು ವಾಹನಗಳಲ್ಲಿ 30% ಪಾಲನ್ನು ವಿದ್ಯುತ್ ವಾಹನಗಳು ಹೊಂದುವ ಗುರಿಯನ್ನು ಭಾರತ ಹೊಂದಿದೆ ಎಂದು ತಿಳಿಸುತ್ತದೆ.

VB-G RAM G Bill: ವಿಬಿ ಜಿ ರಾಮ್ ಜಿ ರದ್ದಾಗಬೇಕು; ಹೋರಾಟಕ್ಕೆ ಬೆಂಬಲಿಸಲು ಸಿಎಂ ಕರೆ

ವಿಬಿ ಜಿ ರಾಮ್ ಜಿ ರದ್ದಾಗಬೇಕು; ಹೋರಾಟಕ್ಕೆ ಬೆಂಬಲಿಸಲು ಸಿಎಂ ಕರೆ

2005ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಮನರೇಗಾ ಕಾಯ್ದೆ ಜಾರಿ ಮಾಡಿದರು. ಆ ಮೂಲಕ ಕೆಲಸದ ಹಕ್ಕು ಕೊಟ್ಟರು. ಆದರೆ, ಮೋದಿ ಸರ್ಕಾರ ಅದನ್ನು ಕಿತ್ತುಹಾಕುತ್ತಿದೆ. ಬಿಜೆಪಿಯವರು ಬಡವರು, ಹೆಣ್ಣುಮಕ್ಕಳು, ಕಾರ್ಮಿಕರಿಗೆ ಕೆಲಸ ಕೊಡಲು ಬಿಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Mysuru News: ಸಿಎಂ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ; ಕೇಸ್‌ ದಾಖಲು

ಸಿಎಂ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ; ಕೇಸ್‌ ದಾಖಲು

ಮೈಸೂರು ತಾಲೂಕು ಗುಡಮಾದನಹಳ್ಳಿಯಲ್ಲಿ ಘಟನೆ ನಡೆದಿದೆ. ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರುತಿಸಿ, ಭೂ ಸ್ವಾಧೀನ ಪ್ರಕ್ರಿಯೆಗೆ ಗ್ರಾಮ ಆಡಳಿತ ಅಧಿಕಾರಿ ಜಿ.ಭವ್ಯ ಅವರು ತೆರಳಿದ್ದಾಗ, ಅವರ ಕರ್ತವ್ಯಕ್ಕೆ ವ್ಯಕ್ತಿಯೊಬ್ಬರು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

Pratap Simha: ನಾನು ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರತಾಪ್ ಸಿಂಹ ಪ್ರಕಟ

ನಾನು ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರತಾಪ್ ಸಿಂಹ ಪ್ರಕಟ

ಅಭ್ಯರ್ಥಿ ಯಾರು ಎಂದು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ. ವಾಸು ಎಚ್ಎಸ್, ಶಂಕರಲಿಂಗೇಗೌಡ ಹಾದಿಯಲ್ಲಿ ನಾನು ನಡೆಯುತ್ತೇನೆ. ಮುಂದೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಚಾಮರಾಜ ಕ್ಷೇತ್ರದ ಜನ ವಿದ್ಯಾವಂತ ಪ್ರತಿನಿಧಿ ಬಯಸುತ್ತಾರೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.

Rahul Gandhi: ಸಿಎಂ- ಡಿಸಿಎಂ ಪ್ರತ್ಯೇಕವಾಗಿ ಭೇಟಿಯಾದ ರಾಹುಲ್‌ ಗಾಂಧಿ, ಎರಡೇ ನಿಮಿಷ ಮಾತುಕತೆ!

ಸಿಎಂ- ಡಿಸಿಎಂ ಭೇಟಿಯಾದ ರಾಹುಲ್‌ ಗಾಂಧಿ, ಎರಡೇ ನಿಮಿಷ ಮಾತುಕತೆ!

15 ನಿಮಿಷವಷ್ಟೇ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಇದ್ದರು. ಕೇವಲ 2 ನಿಮಿಷವಷ್ಟೇ ಸಿಎಂ, ಡಿಸಿಎಂಗೆ ಭೇಟಿಗೆ ಅವಕಾಶ ಸಿಕ್ಕಿತು. ಇಬ್ಬರೂ ನಾಯಕರು ಉಭಯ ಕುಶಲೋಪರಿ ವಿಚಾರಿಸಿದರು. ಅಧಿಕಾರ ಹಂಚಿಕೆ ಗೊಂದಲ ಶುರುವಾದ ಮೇಲೆ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರನ್ನು ಸಿದ್ದು-ಡಿಕೆಶಿ ಭೇಟಿಯಾಗಿದ್ದಾರೆ.

ರಾಹುಲ್ ಗಾಂಧಿ ಜತೆಗೆ ರಾಜಕಾರಣ ಚರ್ಚೆ ಮಾಡಿಲ್ಲ; ಅಧಿಕಾರ ಹಂಚಿಕೆ ಗೊಂದಲವೂ ಇಲ್ಲ ಎಂದ ಸಿಎಂ

ರಾಹುಲ್ ಗಾಂಧಿ ಜತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

Rahul Gandhi Mysore Visit: ತಮಿಳುನಾಡಿನ ಗೂಡ್ಲೂರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ್ದರು. ಈ ವೇಳೆ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸ್ವಾಗತಿಸಿದರು.

ನಾಮಧಾರಿ ಒಕ್ಕಲಿಗರ ಬೆನ್ನಿಗೆ ನಿಂತ ಎಚ್.ಡಿ. ಕುಮಾರಸ್ವಾಮಿ; 2ಎ ಪ್ರವರ್ಗಕ್ಕೆ ಸೇರಿಸಲು ಪ್ರಯತ್ನಿಸುವುದಾಗಿ ಭರವಸೆ

ನಾಮಧಾರಿ ಒಕ್ಕಲಿಗರ ಬೆನ್ನಿಗೆ ನಿಂತ ಎಚ್.ಡಿ. ಕುಮಾರಸ್ವಾಮಿ

H.D. Kumaraswamy: ಮೈಸೂರಿನ ಕೆ.ಆರ್. ನಗರದಲ್ಲಿ ಭಾನುವಾರ (ಜನವರಿ 11) ನಾಮಧಾರಿ ಸಮುದಾಯ ಭವನದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಚ್.ಡಿ. ಕುಮಾರಸ್ವಾಮಿ, ʼʼಈ ಬಗ್ಗೆ ನೀವು ಸಂಪೂರ್ಣ ಮಾಹಿತಿ ತೆಗೆದುಕೊಂಡು ಬನ್ನಿ. ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರಕಾರಕ್ಕೆ ನೀಡಿರುವ ಅರ್ಜಿ, ಇನ್ನಿತರ ಬೇಡಿಕೆಗಳ ಮಾಹಿತಿ ಜತೆ ನನ್ನ ಬಳಿಗೆ ಬನ್ನಿ. ನಾನು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆʼʼ ಎಂದರು.

Navabrindavana: ನವಬೃಂದಾವನ ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗಬೇಕು ?

ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗಬೇಕು ?

ಶ್ರೀ ರಾಮಜನ್ಮಭೂಮಿ ವಿವಾದವನೊಳ್ಳಗೊಂಡಂತೆ ಹಲವು ವಿಷಯಗಳು ಕಾನೂನಾತ್ಮಕವಾಗಿ ಅಥವಾ ರಾಜಿ /ಹೊಂದಾಣಿಕೆಗಳ ಮೂಲಕ ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿರುವುದು ಕಾಲದ ವಿಶೇಷ. ಇದೇ ಸಾಲಿನಲ್ಲಿ ನಿಲ್ಲುವ ಮತ್ತೊಂದು ವಿವಾದವೇ ಹಂಪಿ/ಆನೆಗೊಂದಿ ಪರಿಸರದಲ್ಲಿ ಮಧ್ವ ಪರಂಪರೆಗೆ ಸೇರಿದ ಮೂಲ ಯತಿಗಳು ಬೃಂದಾವನಸ್ಥರಾಗಿ ನೆಲೆಸಿರುವ ನವಬೃಂದಾವನ ಕ್ಷೇತ್ರದ ವಿವಾದ.

ಪೊಲೀಸರ ಎದುರೇ ಯುವಕರ ಅಪಾಯಕಾರಿ ವ್ಹೀಲಿಂಗ್‌: ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರ ಆಕ್ರೋಶ

ಮೈಸೂರಿನಲ್ಲಿ ಪೊಲೀಸರ ಮುಂದೆಯೇ ಯುವಕರ ವ್ಹೀಲಿಂಗ್‌

Viral Video: ಮೈಸೂರಿನ ಜನ ನಿಬಿಡ ರಸ್ತೆಯಲ್ಲೇ ಯುವಕರ ಗುಂಪೊಂದು ಪುಂಡಾಟಿಕೆ ಮೆರೆದಿದ್ದು, ಪೊಲೀಸರ ಎದುರೇ ವ್ಹೀಲಿಂಗ್‌ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸ್ ವಾಹನಗಳು ಹತ್ತಿರದಲ್ಲಿಯೇ ಇದ್ದಾಗಲೂ ಯುವಕರು ಈ ಸಾಹಸಕ್ಕೆ ಮುಂದಾಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Navavrundavana: ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

ನವವೃಂದಾವನವು ಇಷ್ಟು ದಿನಗಳ ಕಾಲ ಕುರುಕ್ಷೇತ್ರ ದಂತಿದ್ದದ್ದು ನಿಜ. ಈಗ ಅದಕ್ಕೆ ಶಾಂತಿ ಲಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಈ ಶಾಂತಿ ಶಾಶ್ವತವಾಗಿ ಉಳಿಯಬೇಕೆಂದರೆ ಪ್ರಸ್ತುತ ನಡೆದಿರುವ ಉತ್ತರಾದಿ ಮಠ ಮತ್ತು ರಾಯರ ಮಠಗಳ ನಡುವಿನ ಒಪ್ಪಂದವಷ್ಟೇ ಸಾಕಾಗುವುದಿಲ್ಲ.

ಜನಪ್ರಿಯ ಯೂಟ್ಯೂಬರ್, ಪತ್ರಕರ್ತೆ ಕೆ.ಎಲ್‌. ನಂದಿನಿಗೆ ಮೈಸೂರು ವಿವಿಯಿಂದ ಪಿಎಚ್‌ಡಿ ಪ್ರದಾನ

ಪತ್ರಕರ್ತೆ ಕೆ.ಎಲ್‌. ನಂದಿನಿಗೆ ಮೈಸೂರು ವಿವಿಯಿಂದ ಪಿಎಚ್‌ಡಿ ಪ್ರದಾನ

ಜನಪ್ರಿಯ ಯೂಟ್ಯೂಬರ್, ಪತ್ರಕರ್ತೆ ಕೆ.ಎಲ್ ನಂದಿನಿ ಅವರು 'ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ. ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ' ವಿಷಯದಲ್ಲಿ ನಂದಿನಿ ಮಹಾ ಪ್ರಬಂಧ ಮಂಡಿಸಿದ್ದರು. ಮೈಸೂರು ವಿವಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎನ್‌.ಮಮತಾ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಸಲ್ಲಿಸಿದ್ದರು.

Loading...