ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Polluted City: ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ 13 ಸಿಟಿಗಳು ಭಾರತದಲ್ಲೇ ಇವೆ!

ವಾಯುಮಾಲಿನ್ಯ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿ ಇದ್ದ ಭಾರತ 5ನೇ ಸ್ಥಾನಕ್ಕೆ ಏರಿದೆ‌. ವಿಶ್ವ ವಾಯು ಗುಣಮಟ್ಟ ವರದಿಯಂತೆ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ. 2023ರಲ್ಲಿ, ಭಾರತವು ವಿಶ್ವದ ಮೂರನೇ ಕಲುಷಿತ ರಾಷ್ಟ್ರದ ಸ್ಥಾನದಲ್ಲಿತ್ತು. 2024ರಲ್ಲಿ 5ನೇ ಸ್ಥಾನಕ್ಕೆ ತಲುಪಿದೆ.

ಭಾರತದಲ್ಲಿ ವಾಯುಮಾಲಿನ್ಯದ ಭೀತಿ! ದೆಹಲಿ ದೇಶದ ಅತ್ಯಂತ ಕಲುಷಿತ ನಗರ

Profile Pushpa Kumari Mar 11, 2025 1:24 PM

ನವದೆಹಲಿ: ಜಾಗತಿಕ ಮಟ್ಟದಲ್ಲಿ ವಾಯುಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿರುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ. ಮಾಲಿನ್ಯದಿಂದಾಗಿ ಭಾರತೀಯರಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಕಂಡು ಬರುವ ಪ್ರಮಾಣ ಅಧಿಕ ಆಗುತ್ತಿದೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ಜಗತ್ತಿನ 20 ಅತ್ಯಂತ ಕಲುಷಿತ ನಗರಗಳಲ್ಲಿ (Most Polluted Cities)13 ನಗರಗಳು ಭಾರತದಲ್ಲೇ ಇವೆ. ಅದರಲ್ಲೂ ಜಾಗತಿಕ ಮಟ್ಟದಲ್ಲಿ ದೆಹಲಿ ಅತ್ಯಂತ ಕಲುಷಿತ ರಾಜಧಾನಿ ಎಂದು‌ ಸ್ವಿಸ್ ವಾಯು ಗುಣಮಟ್ಟದ ಅಧ್ಯಯನ ಸಂಸ್ಥೆಯೊಂದರ ವರದಿಯಲ್ಲಿ ತಿಳಿದು ಬಂದಿದೆ. ವಾಯು ಮಾಲಿನ್ಯದಿಂದಾಗಿ ಭಾರತದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಜನರ ಜೀವಿತಾವಧಿ 5.2 ವರ್ಷಗಳಷ್ಟು ಕಡಿಮೆಯಾಗುತ್ತಿದೆ ಎನ್ನುವ ಆಘಾತಕಾರಿ ವಿಚಾರವು‌ ಅಧ್ಯಯನದಲ್ಲಿ ತಿಳಿದು ಬಂದಿದೆ.

2023ರಲ್ಲಿ ವಾಯು ಮಾಲಿನ್ಯ ಪ್ರಮಾಣವು ಘನ ಮೀಟರ್ ಗೆ 54.4 ಇದ್ದಿದ್ದು 2024ರಲ್ಲಿ PM 2.5 ಸಾಂದ್ರತೆಯಲ್ಲಿ 7 ಶೇಕಡದಷ್ಟು ಇಳಿಕೆ ಕಂಡಿದೆ. ಪ್ರತೀ ಘನ ಮೀಟರ್ ಗೆ ಸರಾಸರಿ 50.6 ಮೈಕ್ರೋಗ್ರಾಂ ನಷ್ಟು ಇಳಿಕೆ ಕಂಡಿದ್ದರೂ ಈ ಹಿಂದೆ ವಾಯುಮಾಲಿನ್ಯ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿ ಇದ್ದ ಇದೀಗ ಭಾರತ 5ನೇ ಸ್ಥಾನಕ್ಕೆ ಏರಿದೆ‌. ವಿಶ್ವ ವಾಯು ಗುಣಮಟ್ಟ ವರದಿಯಂತೆ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಯಾಗಿದ್ದು 2023ರಲ್ಲಿ, ಭಾರತವು ವಿಶ್ವದ ಮೂರನೇ ಕಲುಷಿತ ರಾಷ್ಟ್ರದ ಸ್ಥಾನದಲ್ಲಿದ್ದದ್ದು 2024ರಲ್ಲಿ 5 ನೇ ಸ್ಥಾನಕ್ಕೆ ತಲುಪಿದೆ.

ಯಾವೆಲ್ಲ ನಗರಗಳಿವೆ?

ವಾಯು ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದ ಬೆನ್ನಲ್ಲೇ ಕಲುಷಿತ ನಗರಗಳ ಬಗ್ಗೆ ವಿವಿಧ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಅಧ್ಯಯನ ಮಾಡುತ್ತಿವೆ. ಈ ನಿಟ್ಟಿನಲ್ಲಿ ಪ್ರತೀ ವರ್ಷ ಕೂಡ ವಾಯು ಮಾಲಿನ್ಯದಿಂದ ಕಲುಷಿತಗೊಂಡ ನಗರಗಳನ್ನು ಪಟ್ಟಿ ಮಾಡಿ ಅದಕ್ಕೆ ಕೆಲವು ಉಪಕ್ರಮ ಕೂಡ ಜಾರಿ ಮಾಡಲು ಮುಂದಾಗುತ್ತಿದೆ. ಈ ಬಾರಿಯ ಸ್ವಿಸ್ ವರದಿಯಂತೆ ಭಾರತದಲ್ಲಿ 13 ಕಲುಷಿತ ನಗರ ಇರುವುದು ತಿಳಿದು ಬಂದಿದ್ದು ದೆಹಲಿ, ಪಂಜಾಬ್ ನ ಮಲ್ಲನ್ ಪುರ್, ಫರಿದಾಬಾದ್, ಲೋನಿ, ಹೊಸ ದಿಲ್ಲಿ, ಗಂಗಾನಗರ, ಗುರುಗ್ರಾಮ್, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಾಫರ್ ನಗರ, ಹನುಮಾನ್‌ಗಢ, ನೊಯ್ಡಾದಲ್ಲಿ ಅತೀ ಹೆಚ್ಚು ವಾಯುಮಾಲಿನ್ಯ ಇರುವುದು ತಿಳಿದು ಬಂದಿದೆ.

2024 ರ ವೇಳೆಗೆ ಭಾರತದಲ್ಲಿ PM2.5 ಮಟ್ಟವು ಶೇಕಡಾ 7 ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳುತ್ತದೆ. 2024 ರಲ್ಲಿ, ಇದು ಪ್ರತಿ ಘನ ಮೀಟರ್‌ಗೆ ಸರಾಸರಿ 50.6 ಮೈಕ್ರೋಗ್ರಾಂಗಳಷ್ಟಿದ್ದರೆ, 2023 ರಲ್ಲಿ ಇದು ಪ್ರತಿ ಘನ ಮೀಟರ್‌ಗೆ 54.4 ಮೈಕ್ರೋಗ್ರಾಂಗಳಷ್ಟಿತ್ತು. ಆದರೂ, ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಆರು ಭಾರತದಲ್ಲಿವೆ. ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ನಿರಂತರವಾಗಿ ಹೆಚ್ಚಿನ ಮಟ್ಟದಲ್ಲಿ ದಾಖಲಾಗಿದೆ. ಇಲ್ಲಿ ವಾರ್ಷಿಕ ಸರಾಸರಿ PM2.5 ಮಟ್ಟವು ಪ್ರತಿ ಘನ ಮೀಟರ್‌ಗೆ 91.6 ಮೈಕ್ರೋಗ್ರಾಂಗಳಷ್ಟಿತ್ತು. 2023 ರ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳ ಅಂಕಿ ಅಂಶಕ್ಕೆ ಹೋಲಿಸಿದರೆ ಇದು ಬಹುತೇಕ ಬದಲಾಗಿಲ್ಲ.

ಇದನ್ನು ಓದಿ: Traveled Destination: 2024ರಲ್ಲಿ ಭಾರತೀಯರು ಗೂಗಲ್‍ನಲ್ಲಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳಿವು

PM2.5 ಎಂದರೆ ಗಾಳಿಯಲ್ಲಿ 2.5 ಮೈಕ್ರಾನ್‌ಗಳಿಗಿಂತ ಚಿಕ್ಕದಾದ ಸೂಕ್ಷ್ಮ ಮಾಲಿನ್ಯ ಕಣಗಳು. ಈ ಕಣಗಳು ಹೃದ್ರೋಗ ಸಮಸ್ಯೆ, ಶ್ವಾಸಕೋಶದ ಆರೋಗ್ಯ ಸಮಸ್ಯೆ, ಉಸಿರಾಟದ ಸಮಸ್ಯೆ, ಕ್ಯಾನ್ಸರ್ ಹಾಗೂ ಇತರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. PM 2.5 ಮಾಲಿನ್ಯದ ನಡುವೆ ನಾವು ಜೀವಿಸುವುದರಿಂದ ಪ್ರತೀ ವರ್ಷ ಸುಮಾರು 1.5 ಮಿಲಿಯನ್ ಸಾವುಗಳು ಸಂಭವಿಸಿದೆ ಎಂದು 2009-2019ರ ಅಧ್ಯಯನದಲ್ಲಿ ತಿಳಿದುಬಂದಿದೆ. ಒಟ್ಟಿನಲ್ಲಿ ಮಾಲಿನ್ಯ ನಿಯಂತ್ರಿಸಲು ಕೈಗಾರಿಕಾ ಮಾಲಿನ್ಯ ಹೊರಸೂಸುವಿಕೆ ಪ್ರಮಾಣ ತಗ್ಗಿಸುವ ಜೊತೆಗೆ ವಾಹನಗಳ ಹೊಗೆಯ ನಿಯಂತ್ರಣಕ್ಕೆ ಇನ್ನಷ್ಟು ಸುಧಾರಿತ ಕ್ರಮಜಾರಿಗೆ ಬರಬೇಕು.