ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೈಬರ್ ದಾಳಿಗೆ ಸವಾಲೊಡ್ಡಿದ ಸಿಬಿಎಸ್‌ಇ; ವಿದ್ಯಾರ್ಥಿಗಳ ಅರ್ಜಿ ಸ್ವೀಕಾರ ಪ್ರಕ್ರಿಯೆ ನಿರಾತಂಕ

ಸಿಬಿಎಸ್‌ಇ ಮರುಮೌಲ್ಯಮಾಪನ ಮತ್ತು ಪರಿಶೀಲನಾ ಪೋರ್ಟಲ್ ಮೊದಲ ದಿನವೇ ಭಾರಿ ಸೈಬರ್ ದಾಳಿಗಳಿಗೆ ಗುರಿಯಾದರೂ ಯಾವುದೇ ವ್ಯತ್ಯಯವಿಲ್ಲದೆ ಕಾರ್ಯನಿರ್ವಹಿಸಿದೆ. ಕೇವಲ ಎರಡು ನಿಮಿಷಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಹಿಟ್‌ಗಳು ದಾಖಲಾಗಿದ್ದು, 1 ಲಕ್ಷಕ್ಕೂ ಹೆಚ್ಚು ಅನಧಿಕೃತ ಪ್ರವೇಶ ಪ್ರಯತ್ನಗಳು ನಡೆದಿವೆ. ಆದಾಗ್ಯೂ, ಪೋರ್ಟಲ್ ಏಕಕಾಲದಲ್ಲಿ 8 ಸಾವಿರಕ್ಕೂ ಹೆಚ್ಚು ಬಳಕೆದಾರರನ್ನು ನಿರ್ವಹಿಸಿ, ಮಧ್ಯಾಹ್ನ 3 ಗಂಟೆಯೊಳಗೆ 18 ಸಾವಿರಕ್ಕೂ ಹೆಚ್ಚು ಯಶಸ್ವಿ ಅರ್ಜಿಗಳನ್ನು ಸ್ವೀಕರಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೆಷನ್ ಅವಧಿಯನ್ನು ವಿಸ್ತರಿಸುವಂತಹ ಹಲವು ಸುಧಾರಣೆಗಳನ್ನೂ ಸಿಬಿಎಸ್‌ಇ ಜಾರಿಗೆ ತಂದಿದೆ

ಸಿಬಿಎಸ್‌ಇ ಪೋರ್ಟಲ್‌ಗೆ ಹ್ಯಾಕರ್ಸ್ ಕಾಟ

ಚಾಟ್‌ಜಿಪಿಟಿ ಎಐ ರಚಿತ ಚಿತ್ರ -

Profile
Sushmitha Jain Jun 2, 2026 11:06 PM

ದೆಹಲಿ, ಜೂ. 2: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE)ಯ ಮರುಮೌಲ್ಯಮಾಪನ ಹಾಗೂ ಉತ್ತರಪತ್ರಿಕೆ ಪರಿಶೀಲನಾ ಪೋರ್ಟಲ್ ಮೊದಲ ದಿನವೇ ಭಾರೀ ಸೈಬರ್ ದಾಳಿಗಳಿಗೆ (Cyber Attack) ಗುರಿಯಾದರೂ ಯಾವುದೇ ವ್ಯತ್ಯಯವಿಲ್ಲದೆ ಕಾರ್ಯನಿರ್ವಹಿಸಿದೆ ಎಂದು ಮಂಡಳಿ ತಿಳಿಸಿದೆ. ಪೋರ್ಟಲ್‌ಗೆ ಸೇವೆ ನಿರಾಕರಣೆ (DoS) ದಾಳಿಯ ಮೂಲಕ ಕೇವಲ ಎರಡು ನಿಮಿಷಗಳಲ್ಲಿ ಸುಮಾರು 15 ಲಕ್ಷ ಹಿಟ್‌ಗಳು ದಾಖಲಾಗಿದ್ದು, 1 ಲಕ್ಷಕ್ಕೂ ಹೆಚ್ಚು ಅನಧಿಕೃತ ಫೈಲ್ ಪ್ರವೇಶ ಪ್ರಯತ್ನಗಳು ನಡೆದಿವೆ ಎಂದು ಸಿಬಿಎಸ್‌ಇ ಮಾಹಿತಿ ನೀಡಿದೆ.

ಸಾವಿರಾರು ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಅಂಕಗಳ ಪರಿಶೀಲನೆಗಾಗಿ ಪೋರ್ಟಲ್ ಬಳಸುತ್ತಿದ್ದ ವೇಳೆ ದುರುದ್ದೇಶಪೂರಿತ ವ್ಯಕ್ತಿಗಳು ಸೈಬರ್ ದಾಳಿಗಳ ಮೂಲಕ ಸೇವೆಯನ್ನು ಅಸ್ತವ್ಯಸ್ತಗೊಳಿಸಲು ಯತ್ನಿಸಿದ್ದಾರೆ ಎಂದು ಸಿಬಿಎಸ್‌ಇ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 31 ರೊಳಗೆ ಸಿಬಿಎಸ್ಸಿ 12ನೇ ತರಗತಿ ಫಲಿತಾಂಶ

ಆದಾಗ್ಯೂ, ಪೋರ್ಟಲ್ ಯಾವುದೇ ತಾಂತ್ರಿಕ ತೊಂದರೆ ಇಲ್ಲದೆ ಕಾರ್ಯನಿರ್ವಹಿಸಿದ್ದು, ಏಕಕಾಲದಲ್ಲಿ 8 ಸಾವಿರಕ್ಕೂ ಹೆಚ್ಚು ಬಳಕೆದಾರರಿಗೆ ಸೇವೆ ನೀಡಿದೆ. ಅಪರಾಹ್ನ 3 ಗಂಟೆಯ ವೇಳೆಗೆ 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಶಸ್ವಿಯಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ. ಕೆಲವು ವರದಿಗಳ ಪ್ರಕಾರ ಈ ಸಂಖ್ಯೆ ನಂತರ 18 ಸಾವಿರಕ್ಕೂ ಮೀರಿದೆ.

ವಿದ್ಯಾರ್ಥಿಗಳಿಂದ ಬಂದ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ಪರಿಗಣಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಸೆಷನ್ ಅವಧಿಯನ್ನು ವಿಸ್ತರಿಸುವಂತಹ ಸುಧಾರಣೆಗಳನ್ನೂ ಸಿಬಿಎಸ್‌ಇ ಜಾರಿಗೆ ತಂದಿದೆ. ಪೋರ್ಟಲ್ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸೈಬರ್ ಭದ್ರತಾ ತಂಡಗಳು ನಿರಂತರ ನಿಗಾ ವಹಿಸುತ್ತಿವೆ ಎಂದು ಮಂಡಳಿ ತಿಳಿಸಿದೆ.