ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಹಾರದ ಪ್ರಸಿದ್ಧ ದೇವಾಲಯದಲ್ಲಿ ಕಾಲ್ತುಳಿತ; 7 ಮಂದಿ ದುರ್ಮರಣ, ಹಲವರಿಗೆ ಗಂಭೀರ ಗಾಯ

ಶ್ರಾವಣ ಮಾಸದ ಮೂರನೇ ಸೋಮವಾರದಂದು ಬಿಹಾರದ ಲಖಿಸರಾಯ್ ಜಿಲ್ಲೆಯ ಅಶೋಕ್ ಧಾಮ್ ದೇವಾಲಯದ ಹೊರಗೆ ಕಾಲ್ತುಳಿತ ನಡೆದಿದೆ. ಘಟನೆಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ .ಘಟನೆಯಿಂದ ದೇವಾಲಯದ ಆವರಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಬಿಹಾರದ ಪ್ರಸಿದ್ಧ ದೇವಾಲಯದಲ್ಲಿ ಕಾಲ್ತುಳಿತ; 7 ಮಂದಿ ದುರ್ಮರಣ

ಬಿಹಾರದ ದೇವಾಲಯದಲ್ಲಿ ಕಾಲ್ತುಳಿತ -

Vishakha Bhat Heggar
Vishakha Bhat Heggar Aug 17, 2026 9:07 AM

ಪಾಟನಾ: ಶ್ರಾವಣ ಮಾಸದ ಮೂರನೇ ಸೋಮವಾರದಂದು ಬಿಹಾರದ ಲಖಿಸರಾಯ್ ಜಿಲ್ಲೆಯ ಅಶೋಕ್ ಧಾಮ್ ದೇವಾಲಯದ ಹೊರಗೆ (Bihar Stampede) ಕಾಲ್ತುಳಿತ ನಡೆದಿದೆ. ಘಟನೆಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ .ಘಟನೆಯಿಂದ ದೇವಾಲಯದ ಆವರಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.ಪ್ರಾಥಮಿಕ ವರದಿಗಳ ಪ್ರಕಾರ, ಸುಮಾರು 50,000 ಸಾವಿರ ಭಕ್ತರು ದೇವಸ್ಥಾನದ ಅಂಗಳದಲ್ಲಿ ಜಮಾಯಿಸಿದ್ದರು ಎಂದು ಹೇಳಲಾಗಿದೆ. ಘಟನೆ ಬಳಿಕ ಗಾಯಗೊಂಡವರನ್ನ‌ ಚಿಕಿತ್ಸೆಗಾಗಿ ಲಖಿಸರಾಯ್ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಲಖಿಸರೈ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಿಗ್ಗೆ 6.30-6.45 ರ ಸುಮಾರಿಗೆ ಎರಡು ರೈಲುಗಳು ಒಟ್ಟಿಗೆ ಆಗಮಿಸಿದವು. ಏಕಾಏಕಿ ಜನಸಂದಣಿ ಹೆಚ್ಚಾಯಿತು. ದೇವಾಲಯದ ಹೊರಗೆ ಬ್ಯಾರಿಕೇಡ್ ಕುಸಿದು ಬೀಳಲು ಕಾರಣವಾಯಿತು. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದೇವಾಲಯದ ಪ್ರವೇಶದ್ವಾರದ ಬಳಿ ಸುಮಾರು 100 ಜನರು ಬ್ಯಾರಿಕೇಡ್‌ಗಳನ್ನು ನುಗ್ಗಿ ಒಳನುಗ್ಗಿದರು ಎಂದು ಸ್ಥಳದಲ್ಲಿರುವ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಆಡಳಿತ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ತಂಡಗಳು ಸ್ಥಳಕ್ಕೆ ಧಾವಿಸಿದ್ದಿ, ರಕ್ಷಣಾ ಕಾರ್ಯಾಚರಣೆ ಹಾಗೂ ವೈದ್ಯಕೀಯ ನೆರವು ನೀಡಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದೇವಾಲಯದ ಆವರಣದಲ್ಲಿ ಜನಸಂದಣಿ ನಿಯಂತ್ರಿಸಲು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕರೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ ಉದ್ಯೋಗ ನೀಡಿದ್ದ ಸಿಎಂ ವಿಜಯ್ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಸ್ಥಳದಲ್ಲಿ ಸಾಕಷ್ಟು ಭದ್ರತೆ ಮತ್ತು ಜನಸಂದಣಿಯ ನಿರ್ವಹಣೆ ಇರಲಿಲ್ಲ, ಅದು ಇಳಿಜಾರಾದ ಮಾರ್ಗವಿತ್ತು. ಕ್ತರು ಬಿದಿರಿನ ಬ್ಯಾರಿಕೇಡ್ ಮೂಲಕ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಹಿಂದಿನಿಂದ ಜನರು ತಳ್ಳಲು ಪ್ರಾರಂಭಿಸಿದಾಗ ಬ್ಯಾರಿಕೇಡ್ ದಾರಿ ತಪ್ಪಿ ಹಲವಾರು ಜನರು ಬಿದ್ದರು ಎಂದು ಮತ್ತೊಬ್ಬರು ಹೇಳಿದ್ದಾರೆ. "ಜನಸಮೂಹವನ್ನು ನಿರ್ವಹಿಸಲು ಅಲ್ಲಿ ಯಾವುದೇ ಆಡಳಿತ ಅಥವಾ ಭದ್ರತಾ ಸಿಬ್ಬಂದಿ ಇರಲಿಲ್ಲ. ಜನರು ಒಳಗೆ ಬರಲು ಒಬ್ಬರನ್ನೊಬ್ಬರು ತಳ್ಳುತ್ತಿದ್ದರು ಮತ್ತು ಬಿದ್ದ ಎಲ್ಲರನ್ನೂ ತುಳಿದು ಹಾಕಲಾಗುತ್ತಿತ್ತು" ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.