20 Naxalites Surrender: ಛತ್ತೀಸ್‌ಗಢದಲ್ಲಿ 20 ನಕ್ಸಲರು ಪೊಲೀಸರಿಗೆ ಶರಣು
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ (ಸೆಪ್ಟೆಂಬರ್ 3) 20 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ 11 ಮಂದಿ 33 ಲಕ್ಷ ರೂ. ಇನಾಮು ಹೊಂದಿದ್ದರು. ಶರಣಾದ 20 ನಕ್ಸಲರ ಪೈಕಿ 9 ಮಹಿಳೆಯರು ಸೇರಿದ್ದಾರೆ.

-

ರಾಯ್‌ಪುರ: ಕೇಂದ್ರ ಸರ್ಕಾರದ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ (ಸೆಪ್ಟೆಂಬರ್ 3) 20 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ (20 Naxalites Surrender). ಈ ಪೈಕಿ 11 ಮಂದಿ 33 ಲಕ್ಷ ರೂ. ಇನಾಮು ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ಶರಣಾದ 20 ನಕ್ಸಲರ ಪೈಕಿ 9 ಮಹಿಳೆಯರು ಸೇರಿದ್ದಾರೆ. ಇವರೆಲ್ಲ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (Peoples' Liberation Guerrilla Army) ಬೆಟಾಲಿಯನ್ ನಂ. 1 ಕೇಡರ್‌ಗೆ ಸೇರಿದವರು. ಇದನ್ನು ಮಾವೋವಾದಿಗಳ ಬಲಿಷ್ಠ ಸಂಘಟನೆ ಎಂದು ಪರಿಗಣಿಸಲಾಗಿದೆ.
ʼʼಟೊಳ್ಳು ಮಾವೋವಾದಿ ಸಿದ್ಧಾಂತ, ಮುಗ್ಧ ಬುಡಕಟ್ಟು ಜನಾಂಗದವರ ಮೇಲೆ ಕಾರ್ಯಕರ್ತರು ನಡೆಸಿದ ದೌರ್ಜನ್ಯ ಮತ್ತು ನಿಷೇಧಿತ ಸಂಘಟನೆಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ನಿರಾಶೆಗೊಂಡ ಅವರು ಹಿರಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆʼʼ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.
नक्सल मोर्चे पर सुकमा पुलिस और सीआरपीएफ को बड़ी सफलता मिली है। सुकमा में 20 नक्सलियों ने आत्मसमर्पण किया है। इनमें 9 महिलाएं और 11 पुरुष शामिल हैं। आत्मसमर्पित नक्सलियों पर कुल ₹33 लाख का इनाम घोषित था।#DDNEWS #SUKMA #SUKMAPOLICE #सीआरपीएफ #20नक्सलियों #आत्मसमर्पण pic.twitter.com/0MM362hr2E
— DD NEWS CHHATTISGARH (@ddnewsraipur) September 3, 2025
ಈ ಸುದ್ದಿಯನ್ನೂ ಓದಿ: Anti Naxal Operation: ತಲೆಗೆ 45ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್ ಕಮಾಂಡರ್ ಎನ್‌ಕೌಂಟರ್
ʼʼಶರಣಾದ ನಕ್ಸಲರು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸುವ ಗುರಿ ಹೊಂದಿರುವ ರಾಜ್ಯ ಸರ್ಕಾರದ ನಿಯದ್ ನೆಲ್ಲನಾರ್ (Niyad Nellanar), ಹೊಸ ಶರಣಾಗತಿ ಮತ್ತು ಪುನರ್ವಸತಿ ಯೋಜನೆಗಳಿಂದ ಪ್ರಭಾವಿತರಾಗಿದ್ದಾರೆʼʼ ಎಂದು ಅವರು ಹೇಳಿದ್ದಾರೆ.
ʼʼಪಿಎಲ್‌ಜಿಎ ಬೆಟಾಲಿಯನ್ ನಂ.1ರ ಸದಸ್ಯೆ ಶರ್ಮಿಳಾ ಅಲಿಯಾಸ್ ಉಯಿಕಾ ಭೀಮೆ (25) ಮತ್ತು ಮಾವೋವಾದಿಗಳ ಪಶ್ಚಿಮ ಬಸ್ತಾರ್ ವಿಭಾಗದ ಸದಸ್ಯೆ ತಾತಿ ಕೋಸಿ ಅಲಿಯಾಸ್ ಪರ್ಮಿಳಾ (20)ಗೆ ತಲಾ 8 ಲಕ್ಷ ರೂ. ಇನಾಮು ಘೋಷಿಸಲಾಗಿತ್ತುʼʼ ಎಂದು ಕಿರಣ್ ಚವಾಣ್ ವಿವರಿಸಿದ್ದಾರೆ.
ʼʼಪ್ರದೇಶ ಸಮಿತಿ ಸದಸ್ಯರಾಗಿರುವ ಮುಚಕಿ ಹಿಡ್ಮಾ (54) ಎಂಬ ಮತ್ತೊಬ್ಬ ಕೇಡರ್ 5 ಲಕ್ಷ ರೂ. ಇನಾಮು ಹೊಂದಿದ್ದಳು. ಇತರ ನಾಲ್ವರು ಕೇಡರ್‌ಗಳನ್ನು ಹುಡುಕಿಕೊಟ್ಟರೆ ತಲಾ 4 ಲಕ್ಷ ರೂ. ಬಹುಮಾನ ಮತ್ತು ಇತರರರಿಗೆ ತಲಾ 1 ಲಕ್ಷ ರೂ. ನಗದು ಘೋಷಿಸಲಾಗಿತ್ತುʼʼ ಎಂದು ಅವರು ಹೇಳಿದ್ದಾರೆ.
50,000 ರೂ. ನೆರವು
ಶರಣಾದ ಎಲ್ಲ 20 ನಕ್ಸಲರಿಗೆ ತಲಾ 50,000 ರೂ. ನೆರವು ನೀಡಲಾಯಿತು ಮತ್ತು ಸರ್ಕಾರದ ನಿಯಮದ ಪ್ರಕಾರ ಅವರಿಗೆ ಮತ್ತಷ್ಟು ಸಹಾಯಹಸ್ತ ಚಾಚಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ʼʼನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರೂ ಹಿಂಸಾಚಾರವನ್ನು ತ್ಯಜಿಸುವಂತೆ ಕರೆ ನೀಡಿದ್ದೇವೆ. ಅವರಿಗೆ ಭದ್ರತೆ ಮತ್ತು ಗೌರವಾನ್ವಿತ ಜೀವನವನ್ನು ಖಾತ್ರಿಪಡಿಸಿಕೊಳ್ಳುತ್ತೇವೆʼʼ ಎಂದು ಚವಾಣ್ ತಿಳಿಸಿದ್ದಾರೆ.
ಪುನರ್ವಸತಿ ಯೋಜನೆಯಡಿ ಶರಣಾಗತರಿಗೆ ಶಿಕ್ಷಣ, ಉದ್ಯೋಗ, ಸ್ವಾವಲಂಬಿ ಜೀವನ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. "ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಬನ್ನಿ. ಇಂದಿನ ನಿಮ್ಮ ಹೆಜ್ಜೆ ಮುಂಬರುವ ಪೀಳಿಗೆಗೆ ಹೊಸ ದಾರಿಯನ್ನು ತೋರಿಸುತ್ತದೆʼʼ ಎಂದು ಅವರು ಕರೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಶೀಘ್ರದಲ್ಲೇ ದೇಶದಲ್ಲಿ ಮಾವೋವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದರು.