ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವ್ಯಾಪಾರ ಒಪ್ಪಂದ: ಮುಂದಿನ ವಾರ ಅಮೆರಿಕ ತಂಡ ಭಾರತಕ್ಕೆ ಭೇಟಿ, ಜಂಟಿ ಹೇಳಿಕೆ ಬಿಡುಗಡೆ ಸಾಧ್ಯತೆ

ಭಾರತ ಮತ್ತು ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತ್ರ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರಧಾನಿ ಟ್ವಿಟ್ ಮಾಡಿದ್ದರೂ ಏನು ವಿವರಣೆ ನೀಡಿರಲಿಲ್ಲ. ಇದು ಸಾಕಷ್ಟು ಗೊಂದಲವನ್ನು ಉಂಟು ಮಾಡಿದ್ದು, ವಿಪಕ್ಷಗಳಿಂದ ಟೀಕೆಗೂ ಗುರಿಯಾಗಿತ್ತು. ಆದರೆ ಈಗ ಒಪ್ಪಂದದ ಕುರಿತು ಭಾರತ ಮತ್ತು ಯುಎಸ್ ಹೇಳಿಕೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇದರಲ್ಲಿ ಏನಿರಬಹುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ವ್ಯಾಪಾರ ಒಪ್ಪಂದದ ಬಗ್ಗೆ ಭಾರತ- ಯುಎಸ್ ಹೇಳಿಕೆ ಬಿಡುಗಡೆ ಸಾಧ್ಯತೆ

ಸಂಗ್ರಹ ಚಿತ್ರ -

ನವದೆಹಲಿ: ಭಾರತ ಮತ್ತು ಯುಎಸ್ ನಡುವಿನ ವ್ಯಾಪಾರ ಒಪ್ಪಂದ (India-US Trade Deal) ನಡೆದು ನಾಲ್ಕು ದಿನಗಳ ಬಳಿಕ ಭಾರತ (India) ಮತ್ತು ಯುಎಸ್ (US) ಜಂಟಿ ಹೇಳಿಕೆ ನೀಡುವ ನಿರೀಕ್ಷೆ ಹುಟ್ಟಿಕೊಂಡಿದೆ. ಭಾರತ ಮತ್ತು ಯುಎಸ್ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಏಕಪಕ್ಷೀಯವಾಗಿ ಘೋಷಣೆ ಮಾಡಿದ್ದರು. ಇದರಿಂದ ವ್ಯಾಪಾರ ಒಪ್ಪಂದದಲ್ಲಿ ಏನೋ ಮುಚ್ಚಿಡಲಾಗಿದೆ ಎನ್ನುವ ಕುತೂಹಲ ಉಂಟಾಗಿತ್ತು. ಆದರೆ ಇದರಲ್ಲಿ ಯಾವುದೇ ಗೌಪ್ಯತೆ ಇಲ್ಲ. ಶೀಘ್ರದಲ್ಲೇ ಯುಎಸ್ ತಂಡ ಭಾರತಕ್ಕೆ ಭೇಟಿ ನೀಡಲಿದ್ದು, ಬಳಿಕ ಎಲ್ಲ ವಿವರಗಳನ್ನು ಬಹಿರಂಗ ಪಡಿಸುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.

ಭಾರತ-ಯುಎಸ್ ವ್ಯಾಪಾರ ಒಪ್ಪಂದದ ನಡೆದು ನಾಲ್ಕು ದಿನಗಳ ಬಳಿಕ ಎರಡು ರಾಷ್ಟ್ರಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಪಕ್ಷೀಯವಾಗಿ ಘೋಷಿಸಿದ್ದರು. ಈ ಒಪ್ಪಂದದ ಪ್ರಕಾರ ಅಮೆರಿಕವು ಭಾರತೀಯ ಸರಕುಗಳಿಗೆ ಸುಂಕಗಳನ್ನು ಶೇ.50ರಿಂದ ಶೇ. 18ಕ್ಕೆ ಇಳಿಸಿತ್ತು.

ಫೆಬ್ರವರಿ 7ರಿಂದ ನರೇಂದ್ರ ಮೋದಿ ಮಲೇಷ್ಯಾ ಪ್ರವಾಸ; ಪ್ರಧಾನಿ ಅನ್ವರ್ ಇಬ್ರಾಹಿಂ ಜತೆ ಮಾತುಕತೆ

ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಪೋಸ್ಟ್ ಮಾಡದೇ ಇದ್ದುದರಿಂದ ಇದು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು. ಅಲ್ಲದೇ ಈ ಒಪ್ಪಂದದಲ್ಲಿ ಏನೋ ಗೌಪ್ಯತೆ ಇದೆ ಎನ್ನುವ ಕುತೂಹಲವು ಉಂಟಾಗಿತ್ತು. ಆದರೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡದ ಹಿರಿಯ ಅಧಿಕಾರಿಗಳು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದು, ಈ ಬಳಿಕ ಒಪ್ಪಂದದ ಬಗ್ಗೆ ಹಲವು ಅಂಶಗಳನ್ನು ಬಹಿರಂಗ ಪಡಿಸುವ ಸಾಧ್ಯತೆ ಇದೆ. ಅಲ್ಲದೇ ಭಾರತ ಮತ್ತು ಯುಎಸ್ ಜಂಟಿ ಹೇಳಿಕೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಸುಮಾರು ಒಂದು ವರ್ಷಗಳಿಂದ ಮಾತುಕತೆಗಳು ನಡೆದಿವೆ. ಇದರಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿತ್ತು. ಆದರೆ ಅಂತಿಮವಾಗಿ ಒಪ್ಪಂದ ಮಾತುಕತೆಗಳು ಪೂರ್ಣಗೊಂಡಿವೆ. ಈ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದು, ಮಾರ್ಚ್ ಮಧ್ಯಭಾಗದ ವೇಳೆಗೆ ವ್ಯಾಪಾರ ಒಪ್ಪಂದದ ಮೊದಲ ಕಂತಿಗೆ ಸಹಿ ಹಾಕಲಾಗುವುದು ಎಂದು ತಿಳಿಸಿದರು.

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸೈನಿಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ; ಪಾಕ್‌ ರಕ್ಷಣಾ ಸಚಿವರೇ ಸೋಲನ್ನು ಒಪ್ಪಿಕೊಂಡ್ರಾ?

ಕೃಷಿ ವಲಯ ಸಂರಕ್ಷಣೆ?

ಈ ವ್ಯಾಪಾರ ಒಪ್ಪಂದದಲ್ಲಿ ಭಾರತದ ಕೃಷಿ ವಲಯವನ್ನು ಸಂಪೂರ್ಣವಾಗಿ ಸಂರಕ್ಷಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಕೃಷಿ, ಡೈರಿ ಮತ್ತು ಮೀನುಗಾರಿಕೆ ಸೇರಿದೆ. ನ್ಯೂಜಿಲೆಂಡ್, ಯುಕೆ ಅಥವಾ ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿರುವ ವ್ಯಾಪಾರ ಒಪ್ಪಂದದಲ್ಲೂ ಭಾರತವು ಕೃಷಿ ಮತ್ತು ಡೈರಿಯನ್ನು ಒಪ್ಪಂದಗಳ ವ್ಯಾಪ್ತಿಯಿಂದ ಹೊರಗೆ ಇರಿಸಿದೆ. ಇದನ್ನೇ ಅಮೆರಿಕದೊಂದಿಗಿನ ತನ್ನ ಪ್ರಸ್ತಾವಿತ ಒಪ್ಪಂದದಲ್ಲೂ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.