ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: 17 ವರ್ಷಗಳ ಶ್ರಮಕ್ಕೆ ಕೊನೆಗೂ ಫಲ; ಭಾರತಕ್ಕೆ ಬಂದಿಳಿದ ತಹಾವ್ವುರ್‌ ರಾಣಾ

ಭಾರತೀಯ ಗುಪ್ತಚರ ಮತ್ತು ತನಿಖಾ ಅಧಿಕಾರಿಗಳ ಜಂಟಿ ತಂಡದೊಂದಿಗೆ ವಿಶೇಷ ವಿಮಾನದಲ್ಲಿ ತಹಾವ್ವುರ್‌ ರಾಣಾನನ್ನು ಕರೆತರಲಾಯಿತು. ಇನ್ನು ರಾಣಾನನ್ನು ಭಾರತಕ್ಕೆ ಕರೆತರುತ್ತಿರುವ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯಾಹ್ನ 2:50ರ ಸುಮಾರಿಗೆ ವಿಶೇಷ ವಿಮಾನ ಪಾಲಂ ವಿಮಾನ ನಿಲ್ದಾಣ್ಕಕ್ಕೆ ಬಂದಿಳಿದಿದೆ.

ತಹಾವ್ವುರ್‌ ರಾಣಾ ಭಾರತಕ್ಕೆ ಕರೆತಂದ NIA

ಹಾವ್ವುರ್‌ ರಾಣಾ.

Profile Ramesh B Apr 10, 2025 5:15 PM

ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಆರೋಪಿ ತಹಾವ್ವುರ್‌ ರಾಣಾ (Tahawwur Rana)ನನ್ನು ಅಮೆರಿಕದಿಂದ ಗಡಿಪಾರು ಮಾಡಿದ ನಂತರ ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ದೆಹಲಿಗೆ ಕರೆತಂದಿದ್ದಾರೆ. ಭಾರತೀಯ ಗುಪ್ತಚರ ಮತ್ತು ತನಿಖಾ ಅಧಿಕಾರಿಗಳ ಜಂಟಿ ತಂಡದೊಂದಿಗೆ ವಿಶೇಷ ವಿಮಾನದಲ್ಲಿ ರಾಣಾನನ್ನು ಕರೆತರಲಾಯಿತು. ಇನ್ನು ರಾಣಾನನ್ನು ಭಾರತಕ್ಕೆ ಕರೆತರುತ್ತಿರುವ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯಾಹ್ನ 2:50ರ ಸುಮಾರಿಗೆ ವಿಶೇಷ ವಿಮಾನ ಪಾಲಂ ವಿಮಾನ ನಿಲ್ದಾಣ್ಕಕ್ಕೆ ಬಂದಿಳಿದಿದೆ.

ಇನ್ನು ರಾಣಾನನ್ನು ವೈದ್ಯಕೀಯ ತಪಾಸನೆ ನಡೆಸಿದ ಬಳಿಕ ದೆಹಲಿ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಬಳಿಕ ಎನ್‌ಐಎ ಅಧಿಕಾರಿಗಳು ಆತನನ್ನು ಅರೆಸ್ಟ್‌ ಮಾಡಲಿದ್ದಾರೆ. ಎನ್‌ಐಎ ಕಚೇರಿಯ ಮೂರನೇ ಮಹಡಿಯಲ್ಲಿ ಹೈ ಸೆಕ್ಯೂರಿಟಿಯಲ್ಲಿ ರಾಣಾನ ವಿಚಾರಣೆ ನಡೆಯಲಿದೆ.



ಈ ಸುದ್ದಿಯನ್ನೂ ಓದಿ: Tahawwur Rana: ಅಜ್ಮಲ್ ಕಸಬ್‌ ಇದ್ದ ಸೆಲ್‌ನಲ್ಲೇ ತಹಾವ್ವುರ್‌ ರಾಣಾನನ್ನು ಇರಿಸಲಾಗುತ್ತಾ?

ತಹಾವ್ವುರ್‌ ರಾಣಾ ಯಾರು?

ತಹಾವ್ವುರ್‌ ಹುಸೇನ್‌ ರಾಣಾ ಜನವರಿ 12, 1961 ರಂದು ಪಾಕಿಸ್ತಾನದ ಪಂಜಾಬ್‌ನ ಚಿಚಾವತ್ನಿಯಲ್ಲಿ ಜನಿಸಿದ್ದು, ಆತ ಕ್ಯಾಡೆಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ. ಕ್ಯಾಡೆಟ್‌ ಕಾಲೇಜಿನಲ್ಲಿ ಅಲ್ಲಿ ಅವರು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಹ-ಸಂಚುಕೋರ ​​ಡೇವಿಡ್ ಹೆಡ್ಲಿ ಜೊತೆ ನಿಕಟ ಸಂಪರ್ಕ ಬೆಳೆದಿತ್ತು. ಕಾಲೇಜು ವಿದ್ಯಾಭ್ಯಾಸ ಮುಗಿದ ನಂತರ ರಾಣಾ ಪಾಕಿಸ್ತಾನ ಸೇನಾ ವೈದ್ಯಕೀಯ ದಳಕ್ಕೆ ಸೇರಿದ್ದ ಮತ್ತು ಕ್ಯಾಪ್ಟನ್-ಜನರಲ್ ಡ್ಯೂಟಿ ಪ್ರಾಕ್ಟೀಷನರ್ ಆಗಿ ಸೇವೆ ಸಲ್ಲಿಸಿದ. 1997 ರಲ್ಲಿ, ಮಿಲಿಟರಿಯನ್ನು ತೊರೆದ ಆತ ವೈದ್ಯೆ ಪತ್ನಿಯೊಂದಿಗೆ ಕೆನಡಾಕ್ಕೆ ತೆರಳಿದ್ದ. ರಾಣಾ ಮತ್ತು ಅವರ ಪತ್ನಿ ಇಬ್ಬರೂ 2001 ರಲ್ಲಿ ಕೆನಡಾದ ಪೌರತ್ವ ಪಡೆದಿದ್ದರು.

ನಂತರ ಚಿಕಾಗೋ, ನ್ಯೂಯಾರ್ಕ್ ಮತ್ತು ಟೊರೊಂಟೊದಲ್ಲಿ ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್ ಸೇರಿದಂತೆ ಹಲವಾರು ವ್ಯವಹಾರಗಳನ್ನು ಪ್ರಾರಂಭಿಸಿದ. ಅಲ್ಲದೇ 'ಹಲಾಲ್ ಕಸಾಯಿಖಾನೆ'ಯನ್ನೂ ಸಹ ಸ್ಥಾಪಿಸಿದರು. ರಾಣಾ ಕೆನಡಾದ ಒಟ್ಟಾವಾದಲ್ಲಿ ಒಂದು ಮನೆಯನ್ನು ಹೊಂದಿದ್ದಾನೆ. ಅಲ್ಲಿ ಆತನ ತಂದೆ ಮತ್ತು ಸಹೋದರ ವಾಸಿಸುತ್ತಿದ್ದಾರೆ. ಆತನ ತಂದೆ ಲಾಹೋರ್ ಬಳಿಯ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದರು, ಮತ್ತು ಅವರ ಸಹೋದರರಲ್ಲಿ ಒಬ್ಬರು ಪಾಕಿಸ್ತಾನಿ ಮಿಲಿಟರಿಯಲ್ಲಿ ಮನೋವೈದ್ಯರಾಗಿದ್ದಾನೆ. ಮತ್ತೊಬ್ಬ ಕೆನಡಾದ ರಾಜಕೀಯ ಪತ್ರಿಕೆಯ ಪತ್ರಕರ್ತರಾಗಿದ್ದಾನೆ.

64 ವರ್ಷದ ಈತ 2005ರಲ್ಲಿ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಡ್ಯಾನಿಶ್ ಪತ್ರಿಕೆ ಜಿಲ್ಯಾಂಡ್ಸ್-ಪೋಸ್ಟನ್ ಅನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಸಂಚಿನಲ್ಲಿ ಭಾಗಿಯಾಗಿದ್ದ. ಕೋಪನ್ ಹ್ಯಾಗನ್ ನಲ್ಲಿ ಪತ್ರಿಕೆಯ ಸಿಬ್ಬಂದಿಯ ಶಿರಚ್ಛೇದ ಮಾಡಿ ಅವರ ತಲೆಗಳನ್ನು ಬೀದಿಗೆ ಎಸೆಯುವ ಗುರಿಯನ್ನು ಹೊಂದಿತ್ತು. ಡೇವಿಡ್ ಹೆಡ್ಲಿಯೊಂದಿಗೆ ರಾಣಾ ಈ ಸಂಚಿನಲ್ಲಿ ಕೆಲಸ ಮಾಡಿದ್ದ. ಹೆಡ್ಲಿಯನ್ನು ಬಂಧಿಸಿದ ನಂತರ ದಾಳಿ ನಡೆಯಲು ಸಾಧ್ಯವಾಗಲಿಲ್ಲ.

26/11 ದಾಳಿಯನ್ನು ಯೋಜಿಸಲು ಬಳಸಲಾಗುವ ಮುಂಬೈನಲ್ಲಿ ಮುಂಭಾಗದ ಕಚೇರಿಯನ್ನು ಸ್ಥಾಪಿಸಲು ರಾಣಾ ಹೆಡ್ಲಿಗೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. NIA ಚಾರ್ಜ್‌ಶೀಟ್ ಪ್ರಕಾರ, 166 ಜನರನ್ನು ಬಲಿತೆಗೆದುಕೊಂಡ 2008 ರ ಮುಂಬೈ ಭಯೋತ್ಪಾದಕ ದಾಳಿಗೆ ರಾಣಾ ಲಾಜಿಸ್ಟಿಕಲ್ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸಿದ್ದಾನೆ. ಆತನನ್ನು 2009 ರಲ್ಲಿ ಅಮೆರಿಕದಲ್ಲಿ ಅರೆಸ್ಟ್‌ ಮಾಡಲಾಗಿತ್ತು.