ಪೊಲೀಸರ ಮೇಲೆ ಹಲ್ಲೆ ನಡೆಸಿ ಬಾಲಾಪರಾಧಿ ಗೃಹದಿಂದ ಇಬ್ಬರು ಪಾಕಿಸ್ತಾನಿ ಬಾಲಕರು ಸೇರಿ ಮೂವರು ಪರಾರಿ; ಹೈ ಅಲರ್ಟ್
ಜಮ್ಮು ಮತ್ತು ಕಾಶ್ಮೀರದ ಬಾಲಾಪರಾಧಿ ಗೃಹದಲ್ಲಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಮೂವರು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ಪರಾರಿಯಾದ ಕೈದಿಗಳನ್ನು ಅಹ್ಸಾನ್ ಅನ್ವರ್ ಮತ್ತು ಮೊಹಮ್ಮದ್ ಸನಾವುಲ್ಲಾ (ಇಬ್ಬರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಗಳು) ಮತ್ತು ಜಮ್ಮು ನಿವಾಸಿ ಕರಣ್‌ಜಿತ್ ಸಿಂಗ್ ಅಲಿಯಾಸ್ ಗುಗ್ಗ ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ. -
ಶ್ರೀನಗರ, ಫೆ. 16: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾಲಾಪರಾಧಿ ಗೃಹದಲ್ಲಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಮೂವರು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ''ಸೋಮವಾರ (ಫೆಬ್ರವರಿ 16) ಸಂಜೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮೂವರು ಅಪರಾಧಿಗಳು ಪರಾರಿಯಾಗಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ (Juvenile Home). ಮೂಲಗಳ ಪ್ರಕಾರ, ಸಂಜೆ 5.05ರ ಸುಮಾರಿಗೆ ಜಮ್ಮುವಿನ ಆರ್.ಎಸ್. ಪುರದಲ್ಲಿರುವ ಜೈಲಿನಲ್ಲಿ ನಿಯೋಜಿಸಲಾದ ಕಾವಲುಗಾರರ ಮೇಲೆ ಕೈದಿಗಳು ದಾಳಿ ಮಾಡಿ ಕಸ್ಟಡಿಯಿಂದ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಎಸ್‌ಪಿಒ ವಿನಯ್ ಕುಮಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಪರ್ವೀನ್ ಕುಮಾರ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಾರಿಯಾದ ಕೈದಿಗಳನ್ನು ಅಹ್ಸಾನ್ ಅನ್ವರ್ ಮತ್ತು ಮೊಹಮ್ಮದ್ ಸನಾವುಲ್ಲಾ (ಇಬ್ಬರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಗಳು) ಮತ್ತು ಜಮ್ಮು ನಿವಾಸಿ ಕರಣ್‌ಜಿತ್ ಸಿಂಗ್ ಅಲಿಯಾಸ್ ಗುಗ್ಗ ಎಂದು ಗುರುತಿಸಲಾಗಿದೆ. ಇಬ್ಬರು ಪಾಕಿಸ್ತಾನಿ ಬಾಲಕರು ಅಜಾಗರೂಕತೆಯಿಂದ ಅಂತಾರಾಷ್ಟ್ರೀಯ ಗಡಿ ದಾಟಿ ಭಾರತಕ್ಕೆ ಕಾಲಿಟ್ಟಿದ್ದು, ಉಗ್ರ ಸಂಘಟನೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ಪೊಲೀಸರ ಮೇಲೆ ದಾಳಿ ನಡೆಸಿದ ಬಾಲಾಪರಾಧಿಗಳು:
VIDEO | J&K: CCTV footage show three inmates escaping RS Pura Observation Home after attacking policemen.
— Press Trust of India (@PTI_News) February 16, 2026
(Source: Third Party)#JammuandKashmir pic.twitter.com/g9vS38dYKz
ತನಿಖೆ ಚುರುಕು
ಬಾಲಕರ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪರಾರಿಯಾಗಲು ಈ ಬಾಲಾಪರಾಧಿಗಳು ಮೊದಲೇ ಯೋಜನೆ ರೂಪಿಸಿದ್ದರೆ ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇವರು ಪರಾರಿಯಾಗಲು ಗಡಿಯಾಚೆಗಿನಿಂದ ಸಹಾಯ ಲಭಿಸಿರುವ ಬಗ್ಗೆ ಮೇಲ್ನೋಟಕ್ಕೆ ಯಾವುದೇ ಕುರುಹು ಸಿಕ್ಕಿಲ್ಲ. ಬಾಲಾಪರಾಧಿಗಳು ಬಂಧನದಲ್ಲಿದ್ದಾಗ ಯಾವುದೇ ಬಾಹ್ಯ ಸಂವಹನ ನಡೆಸಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ವ್ಯಕ್ತಿಯ ಪಾತ್ರವನ್ನೂ ಪರಿಶೀಲಿಸಲಾಗುತ್ತಿದೆ. ಅಂದರೆ ಕೃತ್ಯದ ಹಿಂದೆ ಸ್ಥಳೀಯರ ಕೈವಾಡವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಅಪರಾಧಿಗಳು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾಲಾಪರಾಧಿ ಗೃಹದಲ್ಲಿ ಪೈಶಾಚಿಕ ಕೃತ್ಯ! ಬಾಲಕರ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ
ಸೂಕ್ಷ್ಮ ಪ್ರದೇಶ
ಘಟನೆ ನಡೆದ ಆರ್.ಎಸ್. ಪುರ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿದ್ದು, ಸೂಕ್ಷ್ಮ ಪ್ರದೇಶ ಎನಿಸಿಕೊಂಡಿದೆ. ಘಟನೆ ಬಳಿಕ ಈ ಪ್ರದೇಶ ಮತ್ತು ಅಕ್ಕ ಪಕ್ಕದ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಂತಾರಾಷ್ಟ್ರೀಯ ಗಡಿಯ ಕಡೆಗೆ ಹೋಗುವ ಮಾರ್ಗಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಮೂಲಗಳ ಪ್ರಕಾರ ತಪ್ಪಿಸಿಕೊಂಡ ಅಪರಾಧಿಗಳು ಗಡಿ ದಾಟಲು ಪ್ರಯತ್ನಿಸುವ ಸಾಧ್ಯತೆ ಹೆಚ್ಚಿದೆ.
![]()
ಸೋಮವಾರ ಸಂಜೆ 5:05ರ ಸುಮಾರಿಗೆ ಜಮ್ಮುವಿನ ಆರ್.ಎಸ್. ಪುರದಲ್ಲಿರುವ ಬಾಲಾಪರಾಧಿ ಗೃಹದಿಂದ ಮೂವರು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರು ಪಾಕಿಸ್ತಾನದವರು ಮತ್ತು ಓರ್ವ ಜಮ್ಮು ಮೂಲದವನು. ತಪ್ಪಿಸಿಕೊಂಡ ಈ ಬಾಲಾಪರಾಧಿಗಳನ್ನು ಪತ್ತೆಹಚ್ಚಲು ಭದ್ರತಾ ಸಂಸ್ಥೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ. ಎಲ್ಲ ಕಡೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಮತ್ತೆಯಾಗುವ ಸಾಧ್ಯತೆ ಇದೆ. ಎಲ್ಲ ಆಯಾಮದಿಂಲೂ ತನಿಖೆ ನಡೆಸಲಾಗುತ್ತಿದೆ.
ಗುಪ್ತಚರ ಇಲಾಖೆಯ ಅಧಿಕಾರಿಗಳು