Fact Check: ʼʼವೈದ್ಯರಿಗಾಗಿ ಯಾವುದೇ ಇಂಟರ್ನ್‌ಶಿಪ್ ಆಯೋಜಿಸಿಲ್ಲʼʼ; ನಕಲಿ ಗೂಗಲ್ ಫಾರ್ಮ್ ಬಗ್ಗೆ ಕೇಂದ್ರ ಎಚ್ಚರಿಕೆ
PIB Fact Check: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ವೈದ್ಯರು ಮತ್ತು ವೃತ್ತಿಪರರಿಗಾಗಿ ಇಂಟರ್ನ್‌ಶಿಪ್‌ನ ಆಯೋಜಿಸಲಾಗಿದೆ ಎಂದು ಹೇಳಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಗೂಗಲ್ ಫಾರ್ಮ್ ಹರಿಯ ಬಿಡಲಾಗಿದೆ ಎಂದು ಕೇಂದ್ರ ಸರ್ಕಾರ ಸಾರ್ವಜನಿಕರನ್ನು ಎಚ್ಚರಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಜು. 13: ಸೋಷಿಯಲ್ ಮೀಡಿಯಾದಲ್ಲಿ ನಕಲಿ ಗೂಗಲ್ ಫಾರ್ಮ್ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME) ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (Ministry of Corporate Affairs) ಅನುಮೋದಿಸಿರುವ ವೈದ್ಯರು ಮತ್ತು ವೃತ್ತಿಪರರಿಗಾಗಿಯೇ ಇರುವ ಇಂಟರ್ನ್‌ಶಿಪ್‌ನ ಅರ್ಜಿ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ ಈ ಮಾಹಿತಿ ಸಂಪೂರ್ಣ ಸುಳ್ಳು. ಅಂತಹ ಯಾವುದೇ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಎಂಎಸ್‍ಎಂಇ ಅಥವಾ ಎಂಸಿಎ ಸಚಿವಾಲಯಗಳಿಂದ ಯಾವುದೇ ಅಧಿಕೃತ ಅಧಿಸೂಚನೆ ಅಥವಾ ಅರ್ಜಿ ನಮೂನೆ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ (Fact Check). ಈ ಫಾರ್ಮ್ ಅನ್ನು ಯಾರೂ ತುಂಬಬೇಡಿ ಎಂದೂ ಮನವಿ ಮಾಡಿದೆ.
ನಕಲಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ನಡೆಸಿ ಇದರ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.
PIB ಎಕ್ಸ್ ಪೋಸ್ಟ್:
ಸಾಮಾಜಿಕ ಮಾಧ್ಯಮಗಳಲ್ಲಿ ಗೂಗಲ್ ಫಾರ್ಮ್ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಇದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಅನುಮೋದಿಸಿರುವ ವೈದ್ಯರು ಮತ್ತು ವೃತ್ತಿಪರರಿಗಾಗಿಯೇ ಇರುವ ಇಂಟರ್ನ್‌ಶಿಪ್ ಎಂದು ಹೇಳಿಕೊಳ್ಳಲಾಗುತ್ತಿದೆ.
— PIB in Karnataka (@PIBBengaluru) July 13, 2026
ಆದರೆ, ಈ ಮಾಹಿತಿ ಸಂಪೂರ್ಣ ಸುಳ್ಳು. ಅಂತಹ ಯಾವುದೇ… https://t.co/CrKohHzo3y pic.twitter.com/BWPrYDNnUi
ಫ್ಯಾಕ್ಟ್ ಚೆಕ್‌ನಲ್ಲಿ ಏನಿದೆ?
ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಪಿಐಬಿಯ ಫ್ಯಾಕ್ಟ್ ಚೆಕ್ ವಿಂಗ್, ಎಂಎಸ್ಎಂಇ ಸಚಿವಾಲಯ ಅಥವಾ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈ ರೀತಿಯ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಯಾವುದೇ ಅಧಿಕೃತ ಅಧಿಸೂಚನೆ ಅಥವಾ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿಲ್ಲ ಎಂದು ದೃಢಪಡಿಸಿದೆ. "ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಅನುಮೋದಿಸಿದೆ ಎಂದು ಹೇಳಲಾದ ವೈದ್ಯರು ಮತ್ತು ವೃತ್ತಿಪರರಿಗೆ ಇಂಟರ್ನ್‌ಶಿಪ್ ನೀಡುವುದಾಗಿ ಹೇಳಿರುವ ಗೂಗಲ್ ಫಾರ್ಮ್ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಇದು ನಕಲಿ. ಇಂತಹ ಯಾವುದೇ ಯೋಜನೆ ಕೇಂದ್ರ ಪ್ರಕಟಿಸಿಲ್ಲʼʼ ಎಂದು ಬರೆದುಕೊಂಡಿದೆ. ಜತೆಗೆ ನಕಲಿ ಫಾರ್ಮ್‌ನ ಸ್ಕ್ರೀನ್‌ಶಾಟ್ ಲಗತ್ತಿಸಿದೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿಗೆ ಬೆಂಬಲ ಸೂಚಿಸಿದ್ರಾ ರಕ್ಷಣಾ ಸಚಿವ ರಾಜನಾಥ್ ಸಿಂಗ್?
ನಕಲಿ ಫಾರ್ಮ್‌ನಲ್ಲಿ ಇಂಟರ್ನ್‌ಶಿಪ್ ಅನ್ನು ತಾಂತ್ರಿಕ, ವೈದ್ಯಕೀಯ, ಫಾರ್ಮಸಿ ಮತ್ತು ಮ್ಯಾನೇಜ್‌ಮೆಂಟ್ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಮತ್ತು ಉದ್ಯಮದ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಬಯಸುವವರಿಗೆ ಎಂದು ಉಲ್ಲೇಖಿಸಲಾಗಿದೆ. ಇದು 2 ತಿಂಗಳ ಆನ್‌ಲೈನ್ ಇಂಟರ್ನ್‌ಶಿಪ್ ಎಂದೂ ಬರೆಯಲಾಗಿದೆ.
"ಈ ವಿಶೇಷ ಕಾರ್ಯಕ್ರಮದಲ್ಲಿ ಅನುಭವಿ ವೈದ್ಯರು, ವೈದ್ಯಕೀಯ ವೃತ್ತಿಪರರು, ಆರೋಗ್ಯ ತಜ್ಞರು ಮತ್ತು ಪ್ರಮುಖ ಆರೋಗ್ಯ ಮತ್ತು ತಂತ್ರಜ್ಞಾನ ಸಂಸ್ಥೆಗಳ ವೃತ್ತಿಪರರು ಭಾಗವಹಿಸಲಿದ್ದಾರೆʼʼ ಎಂದು ತಿಳಿಸಲಾಗಿದೆ.
ತಿಂಗಳಿಗೆ 15 ಲಕ್ಷ ರುಪಾಯಿ ಲಾಭದ ಹೂಡಿಕೆ ಬಗ್ಗೆ ವಿವರಿಸಿದ್ರಾ ರಕ್ಷಣಾ ಸಚಿವ ರಾಜನಾಥ್ ಸಿಂಗ್?
ಎಚ್ಚರಿಕೆ
ಇಂತಹ ನಕಲಿ ಮತ್ತು ಅನುಮಾನಾಸ್ಪದ ಲಿಂಕ್‌ಗಳು ಅಥವಾ ವೆಬ್‌ಸೈಟ್‌ಗಳ ಮೇಲೆ ಕ್ಲಿಕ್ ಮಾಡದಂತೆ ಪಿಐಬಿ ಸಾರ್ವಜನಿಕರನ್ನು ಎಚ್ಚರಿಸಿದೆ. ಅಧಿಕೃತವಲ್ಲದ ವೆಬ್‌ಸೈಟ್‌ಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚಿಸಿದೆ. ಜತೆಗೆ ಇಂತಹ ಸುದ್ದಿ ಬಂದಾಗ ಸರ್ಕಾರ ಅಥವಾ ಅಧಿಕೃತ ಮೂಲಗಳಿಂದ ಪರಿಶೀಲಿಸದೆ ಯಾರೊಂದಿಗೂ ಶೇರ್ ಮಾಡಬೇಡಿ ಎಂದು ಸಲಹೆ ನೀಡಿದೆ. ಕೆಲವೊಮ್ಮೆ ಇದು ಹ್ಯಾಕರ್ಸ್ ತಂತ್ರವಾಗಿರುವ ಸಾಧ್ಯತೆ ಇರುವುದರಿಂದ ವೈಯಕ್ತಿಕ ಮಾಹಿತಿ ದುರುಪಯೋಗವಾಗುವ ಅಪಾಯವಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.