#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Road Accident: ಮಹಾ ಕುಂಭಮೇಳದಿಂದ ಹಿಂತಿರುಗುವಾಗ ದುರಂತ ಅಪಘಾತ- 7 ಮಂದಿ ದಾರುಣ ಸಾವು!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ, ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಹೆದ್ದಾರಿಯಲ್ಲಿ ಇಂದು(ಫೆ.12) ಟೆಂಪೋ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಸಿಹೋರಾದ ರಾಷ್ಟ್ರೀಯ ಹೆದ್ದಾರಿ-30 ಮೊಹ್ಲಾ ಬರ್ಗಿ ಬಳಿ ಈ ಅಪಘಾತ ಸಂಭವಿಸಿದ್ದು, ಸಾವನ್ನಪ್ಪಿದವರು ಆಂಧ್ರಪ್ರದೇಶಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.

ದುರಂತ ರಸ್ತೆ ಅಪಘಾತದಲ್ಲಿ 7 ಜನರ ದಾರುಣ ಸಾವು!

Road Accident

Profile Deekshith Nair Feb 11, 2025 2:02 PM

ಭೋಪಾಲ್‌: ಉತ್ತರ ಪ್ರದೇಶದ(Uttar Pradesh) ಪ್ರಯಾಗ್‌ರಾಜ್‌ನಲ್ಲಿ(Prayagraj) ನಡೆಯುತ್ತಿರುವ ಪವಿತ್ರ ಮಹಾ ಕುಂಭಮೇಳದಲ್ಲಿ(Mahakumbh) ಭಾಗವಹಿಸಿ ಹಿಂತಿರುಗುತ್ತಿದ್ದಾಗ, ಮಧ್ಯಪ್ರದೇಶದ(Madhya Pradesh) ಜಬಲ್ಪುರ(Jabalpur) ಜಿಲ್ಲೆಯ ಹೆದ್ದಾರಿಯಲ್ಲಿ ಇಂದು(ಫೆ.12) ಟೆಂಪೋ ಟ್ರಕ್‌ಗೆ ಡಿಕ್ಕಿ ಹೊಡೆದ(Bus and truck collision) ಪರಿಣಾಮ ಏಳು ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಸಿಹೋರಾದ ರಾಷ್ಟ್ರೀಯ ಹೆದ್ದಾರಿ-30 ಮೊಹ್ಲಾ ಬರ್ಗಿ ಬಳಿ ಈ ಅಪಘಾತ ಸಂಭವಿಸಿದ್ದು, ಸಾವನ್ನಪ್ಪಿದವರು ಆಂಧ್ರಪ್ರದೇಶಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.

ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಭಕ್ತರು ಹಿಂತಿರುಗುತ್ತಿದ್ದ ವೇಳೆ ಭಯಾನಕ ರಸ್ತೆ ಅಪಘಾತ ಸಂಭವಿಸಿದ್ದು,ಸ್ಥಳದಲ್ಲೇ ಏಳು ಜನರು ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಜಬಲ್ಪುರದ ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತಕ್ಕೀಡಾದವರು ಆಂಧ್ರಪ್ರದೇಶದವರು ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



ಜಿಲ್ಲಾಧಿಕಾರಿ ದೀಪಕ್ ಕುಮಾರ್ ಸಕ್ಸೇನಾ ಅವರ ಪ್ರಕಾರ, ಹೆದ್ದಾರಿಯ ರಾಂಗ್‌ ರೂಟ್‌ನಲ್ಲಿ ಚಲಿಸುತ್ತಿದ್ದ ಟ್ರಕ್ ಮಿನಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಜಿಲ್ಲಾ ಕೇಂದ್ರವಾದ ಜಬಲ್ಪುರದಿಂದ ಸುಮಾರು 65 ಕಿ.ಮೀ ದೂರದಲ್ಲಿ ಈ ಅಪಘಾತ ನಡೆದಿದೆ.

ಕುಂಭಮೇಳದಿಂದ ವಾಪಾಸ್‌ ಆಗುವಾಗ ಭೀಕರ ಅಪಘಾತ

ಕಳೆದ ವಾರವಷ್ಟೇ ಮಹಾ ಕುಂಭಮೇಳದಿಂದ ವಾಪಾಸ್ ಆಗುವ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಪರಿಣಾಮ 6 ಮಂದಿ ಮೃತಪಟಟ್ಟ ಘಟನೆ ಮಧ್ಯಪ್ರದೇಶ ಇಂದೋರ್ ಜಿಲ್ಲೆಯಲ್ಲಿ ನಡೆದಿತ್ತು.

ಈ ಸುದ್ದಿಯನ್ನೂ ಓದಿ:Narendra Modi: ಫ್ರಾನ್ಸ್‌ನ ಎಐ ಶೃಂಗಸಭೆಯಲ್ಲಿ ಮೋದಿ ಭಾಗಿ- ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆ ಮಾತುಕತೆ

ಕ್ಯಾಂಟರ್, ಟಿಟಿ ಹಾಗೂ ಬೈಕ್ ನಡುವೆ ಸರಣಿ ಅಪಘಾತದಲ್ಲಿ 6 ಜನರ ಸಾವನ್ನಪ್ಪಿದ್ದರು. ಈ ಸರಣಿ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದರೆ ಉಳಿದ 17 ಜನರಿಗೆ ಗಂಭೀರ ಗಾಯಗಳಾಗಿದ್ದವು. ಮೃತ ಇಬ್ಬರು ಮಹಿಳೆಯರು ಬೆಳಗಾವಿ ಮೂಲದವರು ಎಂದು ಹೇಳಲಾಗಿತ್ತು. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು.