Narendra Modi: ಫ್ರಾನ್ಸ್‌ನ ಎಐ ಶೃಂಗಸಭೆಯಲ್ಲಿ ಮೋದಿ ಭಾಗಿ- ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆ ಮಾತುಕತೆ
ಇಂದು(ಫೆ.11) ಪ್ಯಾರಿಸ್ ನಲ್ಲಿ ನಡೆದ ಎಐ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಭೆಯ ನಂತರ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಫ್ರಾನ್ಸ್‌ನಿಂದ ಮೋದಿ ವಾಷಿಂಗ್ಟನ್ ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾದ ಮೇಲೆ ಮೋದಿ ಅವರು ಮೊದಲ ಬಾರಿಗೆ ಅವರನ್ನು ಭೇಟಿಯಾಗುತ್ತಿದ್ದಾರೆ.
![ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭೇಟಿಯಾದ ಪ್ರಧಾನಿ ಮೋದಿ](https://cdn-vishwavani-prod.hindverse.com/media/original_images/Narendra_Modi_12.jpg)
Narendra Modi
![Profile](https://vishwavani.news/static/img/user.png)
ವಾಷಿಂಗ್ಟನ್: ಇಂದು(ಫೆ.11) ಪ್ಯಾರಿಸ್(Paris) ನಲ್ಲಿ ನಡೆದ ಎಐ ಶೃಂಗಸಭೆಯ(AI Summit) ಸಹ-ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಸಭೆಯ ನಂತರ ಅಮೆರಿಕ ಉಪಾಧ್ಯಕ್ಷ(US Vice President) ಜೆಡಿ ವ್ಯಾನ್ಸ್(JD Vance) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಫ್ರಾನ್ಸ್‌ನಿಂದ ಮೋದಿ ವಾಷಿಂಗ್ಟನ್(Washington) ಪ್ರವಾಸ ಕೈಗೊಳ್ಳಲಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾದ ಮೇಲೆ ಮೋದಿ ಅವರು ಮೊದಲ ಬಾರಿಗೆ ಅವರನ್ನು ಭೇಟಿಯಾಗುತ್ತಿದ್ದಾರೆ.
ಪ್ಯಾರಿಸ್ ನಲ್ಲಿ ನಡೆದ ಎಐ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸುವ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆತ್ಮೀಯವಾಗಿ ಸ್ವಾಗತ ಕೋರಿದ್ದರು. ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪ್ಯಾರಿಸ್‌ನಲ್ಲಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ್ದು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಫ್ರಾನ್ಸ್ನಲ್ಲಿ ಇಂದು ನಡೆದ ಎಐ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದರು. ಅವರು ಫ್ರಾನ್ಸ್ಗೆ ಬಂದಿಳಿಯುತ್ತಿದ್ದಂತೆ ಭಾರತೀಯ ಮೂಲದವರು ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಕಳೆದ ರಾತ್ರಿ ಔತಣಕೂಟದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಆಲಿಂಗಿಸಿ ಸ್ವಾಗತಿಸಿದರು.
PM Modi congratulates US Vice President JD Vance at Élysée Palace ahead of the dinner hosted by French President Macron pic.twitter.com/2w1PwNXb55
— Sidhant Sibal (@sidhant) February 11, 2025
ಇನ್ನು ಶೃಂಗಸಭೆ ಮುಗಿಸಿ ಔತಣಕೂಟದಲ್ಲಿ ಭಾಗಿಯಾದ ಮೋದಿ ಫ್ರಾನ್ಸ್ ಗೆ ಆಗಮಿಸಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಸಹ ಭೇಟಿಯಾದರು. ಪ್ರಧಾನಿ ಮೋದಿ ತಮ್ಮ ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಪ್ಯಾರಿಸ್‌ಗೆ ಆಗಮಿಸಿದ್ದರು.
ಈ ಸುದ್ದಿಯನ್ನೂ ಓದಿ:Pariksha Pe Charcha: ಪರೀಕ್ಷಾ ಪೆ ಚರ್ಚಾ ; ಮೋದಿ ಹೇಳಿದ ಯಶಸ್ಸಿನ ಸೂತ್ರಗಳೇನು?
ತಮ್ಮ ಮೂರು ದಿನಗಳ ಭೇಟಿಯ ಸಮಯದಲ್ಲಿ, ಮೋದಿಯವರು ಪ್ಯಾರಿಸ್‌ನಲ್ಲಿ ಮ್ಯಾಕ್ರನ್ ಅವರೊಂದಿಗೆ AI ಆಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದಾರೆ ಮತ್ತು ಉದ್ಯಮ ನಾಯಕರನ್ನು ಉದ್ದೇಶಿಸಿ ಸುದೀರ್ಘವಾಗಿ ಮಾತನಾಡಿದ್ದಾರೆ. ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.