ಲೋಕಸಭೆಯಿಂದ 8 ವಿಪಕ್ಷ ಸಂಸದರ ಅಮಾನತು; ಸದನದಲ್ಲಿ ಅಂತದ್ದೇನಾಯ್ತು?
ಲೋಕಸಭೆಯಲ್ಲಿ ಮಂಗಳವಾರ ಎಂಟು ವಿರೋಧ ಪಕ್ಷದ ಸದಸ್ಯರು "ಅಶಿಸ್ತಿನ ವರ್ತನೆ" ತೋರಿ ಸದನದ ಕಲಾಪಕ್ಕೆ ಅಡ್ಡಿಪಡಿಸಿ, ಸಭಾಪತಿಯ ಕಡೆಗೆ ಕಾಗದಗಳನ್ನು ಎಸೆದಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸ್ಪೀಕರ್ಗೆ ದೂರು ನೀಡಿದರು. ಬಳಿಕ ಸ್ಪೀಕರ್ ಓಂ ಬಿರ್ಲಾ ಎಂಟು ಸಂಸದರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಂಗ್ರಹ ಚಿತ್ರ -
ಲೋಕಸಭೆಯಲ್ಲಿ ಮಂಗಳವಾರ ಎಂಟು ವಿರೋಧ ಪಕ್ಷದ ಸದಸ್ಯರು ( 8 Opposition MPs suspended) "ಅಶಿಸ್ತಿನ ವರ್ತನೆ" ತೋರಿ ಸದನದ ಕಲಾಪಕ್ಕೆ ಅಡ್ಡಿಪಡಿಸಿ, ಸಭಾಪತಿಯ ಕಡೆಗೆ ಕಾಗದಗಳನ್ನು ಎಸೆದಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು (Lok Sabha) ಅಮಾನತುಗೊಳಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡಿಸಿದ ನಿರ್ಣಯದ ನಂತರ ಈ ಕ್ರಮ ಕೈಗೊಳ್ಳಲಾಯಿತು. ಎಂಟು ಸಂಸದರನ್ನು ಅಮಾನತುಗೊಳಿಸಿದ ನಂತರ, ಲೋಕಸಭೆಯನ್ನು ಬುಧವಾರ ಬೆಳಿಗ್ಗೆ 11:00 ಗಂಟೆಗೆ ಮುಂದೂಡಲಾಗಿದೆ.
ಅಮಾನತುಗೊಂಡ ಸಂಸದರು ಯಾರು?
ಪಂಜಾಬ್ನ ಲುಧಿಯಾನ ಸಂಸದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಹಾಗೂ ಅಮೃತಸರ ಸಂಸದ ಗುರ್ಜೀತ್ ಸಿಂಗ್ ಔಜ್ಲಾ, ಕೇರಳದ ಇಡುಕ್ಕಿ ಸಂಸದ ಡೀನ್ ಕುರಿಯಾಕೋಸ್ ಹಾಗೂ ಎರ್ನಾಕುಲಂ ಸಂಸದ ಹಿಬಿ ಈಡನ್, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ರಾಜಂಪೇಟೆ ಸಂಸದ ಕಿರಣ್ ಕುಮಾರ್ ರೆಡ್ಡಿ, ತಮಿಳುನಾಡಿನ ವಿರುದುನಗರ ಸಂಸದ ಮಾಣಿಕ್ಕಂ ಟ್ಯಾಗೋರ್ ಹಾಗೂ ಮಧುರೈ ಸಂಸದ ಎಸ್. ವೆಂಕಟೇಶನ್ ಮತ್ತು ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಸಂಸದ ಪ್ರಶಾಂತ್ ಪೊಡೊಲೆ ಅವರನ್ನ ಬಜೆಟ್ ಅಧಿವೇಶನ ಮುಗಿಯುವ ತನಕ ಅಮಾನತುಗೊಳಿಸಿ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ. ಘಟನೆಯನ್ನು ಬಲವಾಗಿ ಖಂಡಿಸಿದ ಸಭಾಪತಿಗಳು, ಈ ನಡವಳಿಕೆಯನ್ನು ಸಂಸತ್ತಿನ ಶಿಷ್ಟಾಚಾರದ ಗಂಭೀರ ಉಲ್ಲಂಘನೆ ಎಂದು ಕರೆದಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಅಂತಹ ನಡವಳಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸ್ವಂತ UPI ಕ್ಯೂಆರ್ ಕೋಡ್ ಬಳಸಿ ಬಿಎಂಟಿಸಿ ಟಿಕೆಟ್ ಹಣ ಗುಳುಂ; ಮೂವರು ಕಂಡಕ್ಟರ್‌ಗಳ ಅಮಾನತು
ಅಮಾನತಿಗೆ ಏನು ಕಾರಣ?
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು, ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಪುಸ್ತಕದ ಬಗ್ಗೆ ಮಾತನಾಡಲು ಬಯಸಿದ್ದರು, ಆದರೆ ಸ್ಪೀಕರ್ ರಾಹುಲ್ ಭಾಷಣಕ್ಕೆ ಅಕ್ಷೇಪ ವ್ಯಕ್ತಪಡಿಸಿದರು. ಇದಾದ ನಂತರ 8 ಕಾಂಗ್ರೆಸ್ ಸಂಸದರು, ಸದನದೊಳಗೆ ಕಾಗದಗಳನ್ನು ಎಸೆದು ಮತ್ತು ಸಭಾಪತಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸ್ಪೀಕರ್ಗೆ ದೂರು ನೀಡಿದರು. ಬಳಿಕ ಸ್ಪೀಕರ್ ಓಂ ಬಿರ್ಲಾ ಎಂಟು ಸಂಸದರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.