ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಇಂತಹ ಸೌಲಭ್ಯ ಯುರೋಪ್‌ನಲ್ಲೂ ಇಲ್ಲʼʼ: ಭಾರತದ 438 ರುಪಾಯಿ ಏಸಿ ಸ್ಲೀಪರ್ ಬಸ್‌ಗೆ ಬ್ರಿಟನ್ ಯುವಕ ಫಿದಾ; ವಿಡಿಯೊ ವೈರಲ್

Viral Video: ದೆಹಲಿಯಿಂದ ಜೈಪುರಕ್ಕೆ ಏಳು ಗಂಟೆ ಕಾಲ ಸ್ಲೀಪರ್ ಏಸಿ ಬಸ್‌ನಲ್ಲಿ ಪ್ರಯಾಣಿಸಿದ ವಿದೇಶಿ ಪ್ರವಾಸಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಈ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ಈ ಸ್ಲೀಪರ್ ಬಸ್‌ ಯುರೋಪಿನ ಸಾರಿಗೆ ವ್ಯವಸ್ಥೆಯನ್ನೇ ಮೀರಿಸುತ್ತಿದೆ. ಇದು ಭಾರತದ ಅತ್ಯುತ್ತಮ ಸಾರಿಗೆ ಅನುಭವಗಳಲ್ಲಿ ಒಂದು ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.

ಭಾರತದ ಸ್ಲೀಪರ್ ಬಸ್‌ನ ಗುಣಮಟ್ಟ ಕಂಡು ವಿದೇಶಿ ಪ್ರವಾಸಿಗ ಫಿದಾ

ಭಾರತದ ಏಸಿ ಸ್ಲೀಪರ್ ಬಸ್‌ನ ಗುಣಮಟ್ಟ ಕಂಡು ಮೆಚ್ಚುಗೆ ಸೂಚಿಸಿದ ವಿದೇಶಿ ಪ್ರವಾಸಿ -

Profile
Pushpa Kumari Jul 26, 2026 10:05 PM

ನವದೆಹಲಿ, ಜು. 26: ಭಾರತಕ್ಕೆ ಭೇಟಿ ನೀಡಿದ ಅನೇಕ ವಿದೇಶಿಗರು ಇಲ್ಲಿನ ಸೌಂದರ್ಯ ಹಾಗೂ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ದೆಹಲಿಯಿಂದ ಜೈಪುರಕ್ಕೆ ಏಳು ಗಂಟೆಗಳ ಕಾಲ ಏಸಿ ಬಸ್‌ನಲ್ಲಿ ಪ್ರಯಾಣಿಸಿದ ವಿದೇಶಿ ಪ್ರವಾಸಿಯೊಬ್ಬರು ಭಾರತದ ಸಾರಿಗೆ ವ್ಯವಸ್ಥೆಯನ್ನು ಕೊಂಡಾಡಿದ್ದಾರೆ. ಭಾರತದ ಈ ಸ್ಲೀಪರ್ ಬಸ್‌ ಯುರೋಪಿನ ಸಾರಿಗೆ ವ್ಯವಸ್ಥೆಯನ್ನೇ ಮೀರಿಸುತ್ತಿವೆ. ಇದು ಭಾರತದಲ್ಲಿನ ತಮ್ಮ ಅತ್ಯುತ್ತಮ ಅನುಭವಗಳಲ್ಲಿ ಒಂದು ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಶೇರ್ (Viral News) ಮಾಡಿದ್ದಾರೆ.

ಭಾರತದ ಸಾರಿಗೆ ಎಂದಾಗ ಕೇವಲ‌ ಟ್ರಾಫಿಕ್ ಎಂದು ನೆನಪಿಸುವ ಜನರ ಮಧ್ಯೆ ಇಲ್ಲಿನ ವ್ಯವಸ್ಥೆ ಬಗ್ಗೆ ವಿದೇಶಿ ಪ್ರವಾಸಿ ಮೆಚ್ಚುಗೆ ಸೂಚಿಸಿದ್ದಾರೆ. ದೆಹಲಿಯಿಂದ ಜೈಪುರಕ್ಕೆ ಏಳು ಗಂಟೆಗಳ ಕಾಲ ಬಸ್‌ನಲ್ಲಿ ಪ್ರಯಾಣಿಸಿದ ವಿದೇಶಿ ಪ್ರಯಾಣಿಕ, ಸ್ಲೀಪರ್ ಬಸ್ ವಿಶಾಲವಾಗಿದ್ದು ಆಧುನಿಕ ಸೌಲಭ್ಯವನ್ನು ಹೊಂದಿದೆ‌. ತಾನು ಅನುಭವಿಸಿದ ಅತ್ಯುತ್ತಮ ಸಾರಿಗೆ ಅನುಭವಗಳಲ್ಲಿ ಒಂದಾಗಿದೆ ಎಂದು ಕರೆದಿದ್ದಾರೆ. ಆಧುನಿಕ ಸೌಕರ್ಯ, ಆನ್‌ಬೋರ್ಡ್ ಸೌಲಭ್ಯ, ಉಚಿತ ಊಟ, ಕಡಿಮೆ ವೆಚ್ಚ, ನಿಜಕ್ಕೂ ಈ ಸ್ಲೀಪರ್ ಬಸ್‌ ಯುರೋಪ್‌ನ ಸೌಲಭ್ಯವನ್ನು ಹಿಂದಿಕ್ಕಿದೆ ಎಂದು ಹೇಳಿದ್ದಾರೆ‌.

ವಿಡಿಯೊ ನೋಡಿ:

ಮೂರೂವರೆ ತಿಂಗಳಿನಿಂದ ಭಾರತ ಪ್ರವಾಸದಲ್ಲಿರುವ ಬ್ರಿಟನ್‌ನ ಜಾಕ್ ಹೀಟನ್ ದೆಹಲಿಯಿಂದ ಜೈಪುರಕ್ಕೆ ತೆರಳಲು ಮೊದಲ ಬಾರಿಗೆ 'ಜಿಂಗ್ ಬಸ್' ಸಂಸ್ಥೆಯ ಏಸಿ ಬಸ್ ಬುಕ್ ಮಾಡಿದ್ದರು‌. ಕೇವಲ 438 ರುಪಾಯಿ ವೆಚ್ಚದಲ್ಲಿ ದೆಹಲಿಯಿಂದ ಜೈಪುರಕ್ಕೆ ಬಂದಿದ್ದು, ಭಾರತದ ಈ ಬಸ್ ಸೌಲಭ್ಯವು ಯುರೋಪ್‌ಗೆ ನಾಚಿಕೆ ತರುವಂತಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿದ ಬಿ.ಟೆಕ್ ಪದವೀಧರ!

​ಬಸ್ ಪ್ರಯಾಣದ ಕುರಿತು ಮಾತನಾಡುತ್ತಾ ಅವರು ಈ ಸೌಕರ್ಯ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ʼʼಬಸ್‌ನಲ್ಲಿ ಕುಳಿತ ತಕ್ಷಣ ಆದ ಆನಂದವೇ ಬೇರೆ. ಬಸ್ ಹತ್ತಿ ಕುಳಿತ ಕೂಡಲೇ ಸಿಬ್ಬಂದಿ ರುಚಿ ರುಚಿಯಾದ ಊಟವನ್ನು ತಂದುಕೊಟ್ಟರು. ಅದರಲ್ಲಿ ಕರಿ, ದಾಲ್, ತರಕಾರಿ, ಅನ್ನ ಮತ್ತು ಗುಲಾಬ್ ಜಾಮೂನ್ ಕೂಡ ಇತ್ತು. ಕೊಟ್ಟ ಹಣಕ್ಕೆ ಹೆಚ್ಚು ಮೌಲ್ಯ" ಎಂದು ಅವರು ಹೇಳಿದರು.

ಸ್ಲೀಪರ್ ಕ್ಯಾಬಿನ್ ವಿಶಾಲವಾಗಿದ್ದು ಸ್ವಚ್ಛವಾದ ವಾಶ್‌ರೂಮ್ ವ್ಯವಸ್ಥೆಯನ್ನು ಕ್ಯಾಮರಾದಲ್ಲಿ ತೋರಿಸಿ ಪ್ರಶಂಸಿದ್ದಾರೆ. "ರಾತ್ರಿ ಇಡೀ ಆರಾಮವಾಗಿ ನಿದ್ದೆ ಮಾಡಿಕೊಂಡು ಹೋಗುವಷ್ಟು ಪ್ರಯಾಣ ಆರಾಮದಾಯಕವಾಗಿತ್ತು" ಎಂದು ಬಣ್ಣಿಸಿದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದರು. ಬಳಕೆದಾರರೊಬ್ಬರು, ʼʼಧನ್ಯವಾದಗಳು ಸಹೋದರ. ನೀವು ಭಾರತದ ಪ್ರಗತಿಯನ್ನು ತೋರಿಸಿದ್ದೀರಿʼʼ ಎಂದು ಮೆಚ್ಚುಗೆ ಸೂಚಿಸಿದ್ದಾರೆ.