ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಾರಾಷ್ಟ್ರದಲ್ಲಿ ಭೀಕರ ದುರಂತ; ಸಮುದ್ರಕ್ಕೆ ಈಜಲು ಇಳಿದ 8 ವಿದ್ಯಾರ್ಥಿಗಳು ಜಲಸಮಾಧಿ

ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿಗಳ ಪೈಕಿ 8 ಮಂದಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಢದ ದಿವೇಗರ್‌ ಸಮುದ್ರ ತೀರದಲ್ಲಿ ನಡೆದಿದೆ. ʼʼಪುಣೆಯ 8 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನೀರಿನಿಂದ ಎಲ್ಲರ ಮೃತದೇಹಗಳನ್ನು ಹೊರತೆಗೆಯಲಾಗಿದೆʼʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸಮುದ್ರಕ್ಕೆ ಈಜಲು ಇಳಿದ 8 ವಿದ್ಯಾರ್ಥಿಗಳು ಜಲಸಮಾಧಿ

-

Ramesh Ballamoole
Ramesh Ballamoole Oct 1, 2026 8:08 PM

ಮುಂಬೈ, ಅ. 1: ಮಹಾರಾಷ್ಟ್ರದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿಗಳ ಪೈಕಿ 8 ಮಂದಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಾಯಗಢದ ದಿವೇಗರ್‌ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. ʼʼಪುಣೆಯ 8 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನೀರಿನಿಂದ ಎಲ್ಲರ ಮೃತದೇಹಗಳನ್ನು ಹೊರತೆಗೆಯಲಾಗಿದೆʼʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸಕ್ಕಾಗಿ ಬಂದ ಇವರು ದುರಂತ ಅಂತ್ಯ ಕಂಡಿದ್ದು, ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ವಿದ್ಯಾರ್ಥಿಗಳು ಪುಣೆಯ ಆಲಂದಿಯಿಂದ ದಿವೇಗರ್‌ ಬೀಚ್‌ಗೆ ಬಂದಿದ್ದರು. ಶಾಲಾ ಪ್ರವಾಸದ ಭಾಗವಾಗಿ ಅವರು ಸಮುದ್ರ ತೀರಕ್ಕೆ ಆಗಮಿಸಿದ್ದರು. ಈ ವಿದ್ಯಾರ್ಥಿಗಳ ಗುಂಪು ಈಜಲು ಸಮುದ್ರಕ್ಕಿಳಿದಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿರುವ ಸಾಧ್ಯತೆ ಇದೆ. ಸಮುದ್ರ ತೀರದಲ್ಲಿನ ಪ್ರಬಲ ನೀರಿನ ಸೆಳೆತವೇ ಇದಕ್ಕೆ ಕಾರಣವೆಂದು ಅಧಿಕಾರಿಗಳು ಹೇಳಿದ್ದಾರೆ.

ರಾಯಗಢದಲ್ಲಿ 8 ವಿದ್ಯಾರ್ಥಿಗಳ ಸಾವು:



ದುರಂತದ ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ಸ್ಥಳೀಯಾಡಳಿತ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ, ಕಡಲ ತೀರದ ಉದ್ದಕ್ಕೂ ಶೋಧ ಮತ್ತು ರಕ್ಷಣಾ ಕಾರ್ಯ ಕೈಗೊಂಡರು.

ಹಲವು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಎಲ್ಲ 8 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪುಣೆ ಜಿಲ್ಲೆಯ ಅಲಂದಿಯಲ್ಲಿರುವ ಖಾಸಗಿ ತರಬೇತಿ ತರಗತಿಯೊಂದಕ್ಕೆ ಸೇರಿದ 42 ವಿದ್ಯಾರ್ಥಿಗಳ ಗುಂಪು ಪ್ರವಾಸಕ್ಕಾಗಿ ಬಂದಿತ್ತು ಎನ್ನಲಾಗಿದೆ. ಮೃತರು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು.

ʼʼಮುಂಬೈಯಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ದಿವೇಗರ್‌ ಕಡಲತೀರದಲ್ಲಿ 8 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಪ್ರವಾಸ ಬಂದಿದ್ದ ಅವರು ಈಜಲು ಸಮುದ್ರಕ್ಕೆ ಇಳಿದಾಗ ದುರಂತ ಸಂಭವಿಸಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.