ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

174 ಮಂದಿಯ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ ಮಚ್ಚಾರ್‌ ಸೌದಿ ಅರೇಬಿಯಾದಿಂದ ಅಬು ಧಾಬಿಗೆ ಏರ್‌ಲಿಫ್ಟ್‌

Smit Machchhar: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ನಿಂದ ಚಾಕು ಇರಿತಕ್ಕೊಳಗಾದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಗಂಭೀರವಾಗಿ ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟರು. ವಿಮಾನವನ್ನು ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದ್ದು, ಮಚ್ಚಾರ್‌ ಅವರಿಗೆ ಅಬುಧಾಬಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಭಾರತೀಯ ಪೈಲಟ್ ಸ್ಮಿತ್‌ ಮಚ್ಚಾರ್‌ ಅಬು ಧಾಬಿಗೆ ಏರ್‌ಲಿಫ್ಟ್‌

ಸ್ಮಿತ್‌ ಮಚ್ಚಾರ್‌ ಮತ್ತು ಫ್ಲೈದುಬೈ ವಿಮಾನ (ಸಂಗ್ರಹ ಚಿತ್ರ) -

Profile
Sushmitha Jain Oct 1, 2026 6:08 PM

ದುಬೈ, ಅ. 1: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಬುಧವಾರ ಆತಂಕಕಾರಿ ಘಟನೆ ನಡೆದಿದೆ. ವಿಮಾನದ ಕಾಕ್‌ಪಿಟ್‌ನಲ್ಲೇ ಸಹ ಪೈಲಟ್ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ (Smit Machchhar) ಅವರಿಗೆ ಚಾಕುವಿನಿಂದ ಇರಿದಿದ್ದು, ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ ಎಂದು ಇಸ್ರೇಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಚಿಕಿತ್ಸೆಗಾಗಿ ಮಚ್ಚಾರ್‌ ಅವರನ್ನು ಸೌದಿ ಅರೇಬಿಯಾದಿಂದ ಅಬು ಧಾಬಿಗೆ ಏರ್‌ಲಿಫ್ಟ್‌ ಮಾಡಲಾಗಿದೆ.

ದಾಳಿಯಿಂದ ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತರಾಗಿದ್ದರೂ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಧೈರ್ಯ ಕಳೆದುಕೊಳ್ಳದೆ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್‌ಪಿಟ್‌ಗೆ ತೆರಳಿ ಸಹ ಪೈಲಟ್‌ನನ್ನು ನಿಯಂತ್ರಿಸಲು ಸಾಧ್ಯವಾಯಿತು.

ಸ್ಮಿತ್‌ ಮಚ್ಚಾರ್‌ ಅವರಿಗೆ ಚಿಕಿತ್ಸೆ:

CAPTAIN SMIT MACHCHHAR SEEN OUTSIDE AIRCRAFT BEFORE BEING TAKEN FOR TREATMENT

Flydubai Captain Smit Machchhar was seen outside the aircraft before being taken away for medical treatment following the mid-air cockpit incident. pic.twitter.com/S7OAVB7A1n
— Subodh Kumar (@kumarsubodh_) October 1, 2026

ಈ ವೇಳೆ ವಿಮಾನವು ಕೇವಲ ಒಂದು ನಿಮಿಷದಲ್ಲಿ ಸುಮಾರು 17,000 ಅಡಿ ಏಕಾಏಕಿ ಕೆಳಗೆ ಇಳಿದಿತ್ತು ಕಳೆದುಕೊಂಡಿತ್ತು ಎಂದು Flightradar24 ಮಾಹಿತಿ ನೀಡಿದೆ. ವಿಮಾನದಲ್ಲಿದ್ದ ಮತ್ತಿಬ್ಬರು ಫ್ಲೈದುಬೈ ಪೈಲಟ್‌ಗಳು ನಿಯಂತ್ರಣಕ್ಕೆ ಪಡೆದು ಸೌದಿ ಅರೇಬಿಯಾದ ತಬುಕ್‌ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ವಿಮಾನದಲ್ಲಿದ್ದ 174 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ಫ್ಲೈದುಬೈ ತಿಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಇವರಲ್ಲಿ 166 ಮಂದಿ ಇಸ್ರೇಲ್‌ ನಾಗರಿಕರಾಗಿದ್ದರು.

ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಚಾಕುವಿನಿಂದಲ್ಲ ಕೊಡಲಿಯಿಂದ ಹಲ್ಲೆ

ಅಬು ಧಾಬಿಗೆ ಏರ್‌ಲಿಫ್ಟ್

ಗಂಭೀರವಾಗಿ ಗಾಯಗೊಂಡ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಬು ಧಾಬಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

‘ನಿಜವಾದ ಹೀರೋ’ ಎಂದ ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿಯೂ ಪ್ರತಿರೋಧ ತೋರಿಸಿ ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟ ಅವರು “ನಿಜವಾದ ಹೀರೋ” ಎಂದು ನೆತನ್ಯಾಹು ಹೇಳಿದ್ದಾರೆ.

ಘಟನೆಯನ್ನು ಇಸ್ರೇಲ್‌ ಅಧಿಕಾರಿಗಳು “ಭಯೋತ್ಪಾದಕ ದಾಳಿಯ ಯತ್ನ” ಎಂದು ಕರೆದಿದ್ದಾರೆ. ಆದರೆ ಘಟನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಖಚಿತಪಡಿಸಲು ಇನ್ನೂ ಸಮಯ ಬೇಕಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಗುಜರಾತ್ ಸರ್ಕಾರದಿಂದ ಗೌರವ

ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರ ಸಾಹಸವನ್ನು ಗೌರವಿಸಿ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘೋಷಿಸಿದ್ದಾರೆ. ಸ್ಮಿತ್ ಮಚ್ಚಾರ್‌ ಅವರಿಗೆ 13 ವರ್ಷಕ್ಕೂ ಹೆಚ್ಚು ವಾಣಿಜ್ಯ ವಿಮಾನ ಹಾರಾಟದ ಅನುಭವವಿದೆ. 2022ರಿಂದ ಅವರು ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಸ್ಪೈಸ್‌ಜೆಟ್‌ನಲ್ಲಿ ಸೇವೆ ಸಲ್ಲಿಸಿದ್ದರು.