ಟಿವಿಕೆ ಪಕ್ಷದಿಂದ ಗೆದ್ದು ತಮಿಳುನಾಡಿನಲ್ಲಿ MLA ಆದ ಕನ್ನಡಿಗ; ಯಾರೀತ ಹಿನ್ನೆಲೆಯೇನು?
ತಮಿಳುನಾಡಿನ ಚುನಾವಣೆಯಲ್ಲಿ ಟಿವಿಕೆ (TVK) ಪಕ್ಷ ಇತಿಹಾಸವನ್ನೇ ಸೃಷ್ಟಿಸಿದೆ. ದಳಪತಿ ವಿಜಯ್ ನೇತೃತ್ವದ ಪಕ್ಷ ಅಧಿಕಾರ ಚುಕ್ಕಾಣಿಯನ್ನು ಹಿಡಿದಿದೆ. ಇದೀಗ ತಮಿಳಗ ವೆಟ್ರಿ ಕಳಗಂ ಪಕ್ಷದಿಂದ ಕನ್ನಡಿಗನೊಬ್ಬ ಗೆಲುವನ್ನು ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡಿನ ಚುನಾವಣೆಯಲ್ಲಿ ಟಿವಿಕೆ (TVK) ಪಕ್ಷ ಇತಿಹಾಸವನ್ನೇ ಸೃಷ್ಟಿಸಿದೆ. ದಳಪತಿ ವಿಜಯ್ ನೇತೃತ್ವದ ಪಕ್ಷ ಅಧಿಕಾರ ಚುಕ್ಕಾಣಿಯನ್ನು ಹಿಡಿದಿದೆ. ಇದೀಗ ತಮಿಳಗ ವೆಟ್ರಿ ಕಳಗಂ ಪಕ್ಷದಿಂದ ಕನ್ನಡಿಗನೊಬ್ಬ ಗೆಲುವನ್ನು ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ. ನೆ. ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸುನೀಲ್ ಆನಂದ್ (Sunil Anand) ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರಾಗಿದ್ದಾರೆ.
ಹಲವು ವರ್ಷಗಳ ಹಿಂದೆಯೇ ಸುನೀಲ್ ಆನಂದ್ ಅವರ ಕುಟುಂಬ ತಮಿಳುನಾಡಿಗೆ ವಲಸೆ ಹೋಗಿತ್ತು. 96 ವರ್ಷಗಳ ಹಿಂದೆ ಬರಗಾಲದ ಸಮಯದಲ್ಲಿ ಉದ್ಯಮ ಆರಂಭಿಸಲು ಸುನೀಲ್ ಆನಂದ್ ಅವರ ಮುತ್ತಾತ ಊರು ತೊರೆದು ತಮಿಳುನಾಡಿಗೆ ತೆರಳಿದ್ದರಂತೆ. ನಂತರ ಬೋರೆಗೌಡ ಮಗ ಲಿಂಗೇಗೌಡ, ನಂತರದ ತಲೆಮಾರು ಲಿಂಗೇಗೌಡನ ಮಗ ನಾಗರಾಜು, ನಂತರ ನಾಗರಾಜು ಮಗನಾಗಿ ಸುನೀಲ್ ಆನಂದ್ ತಮಿಳುನಾಡಿನಲ್ಲೇ ಹುಟ್ಟು ಬೆಳೆದವರಾಗಿದ್ದಾರೆ.
ಟಿವಿಕೆ ಪಾರ್ಟಿಗೆ ಸೇರುವಾಗ ವಡಕ್ಕೆಘಟ್ಟ ಗ್ರಾಮಕ್ಕೆ ಆಗಮಿಸಿದ್ದ ಸುನೀಲ್ ಆನಂದ್, ಕುಟುಂಬ ಸಮೇತ ಬಂದು ಮನೆ ದೇವರಿಗೆ ಪೂಜೆ ಸಹ ಸಲ್ಲಿಸಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ತಮಿಳುನಾಡಿನಲ್ಲೇ ಶಿಕ್ಷಣ ಮುಗಿಸಿರುವ ಸುನೀಲ್ ಆನಂದ್ ಅವರು ಅಲ್ಲಿ ಜಮೀನ್ದಾರರಾಗಿ, ಅಡಿಕೆ ತೋಟ, ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಪ್ರತಿವರ್ಷ ಅವರು ತಮ್ಮ ಮೂಲ ಗ್ರಾಮವಾದ ವಡಕೆಘಟ್ಟಕ್ಕೆ ಭೇಟಿ ನೀಡುವುದನ್ನು ಮರೆತಿಲ್ಲ. ತಮಿಳುನಾಡಿನ ಮೆಟ್ಟುಪಾಳ್ಯದಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಇವರು ನಂತರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಸರ್ಕಾರ ರಚನೆಗೆ ಟಿವಿಕೆಗೆ ಬೆಂಬಲ ಘೋಷಿಸಿದ ಕಾಂಗ್ರೆಸ್; ವಿಜಯ್ ಸಿಎಂ ಆಗೋದು ಫಿಕ್ಸ್
ಸುನೀಲ್ ಆನಂದ್ ಅವರು ಮೊದಲು ಎಐಎಡಿಎಂಕೆ (AIADMK) ಪಕ್ಷದಲ್ಲಿದ್ದರು. ಆದರೆ ವಿಜಯ್ ಅವರ ಪಕ್ಷದ ಸಿದ್ಧಾಂತಗಳಿಂದ ಮನಸೋತ ಅವರು ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮೊದಲಿನಿಂದಲೂ ರಾಜಕೀಯ ಹಿನ್ನೆಲೆಯನ್ನು ಹೊಂದಿರುವ ಸುನೀಲ್ ಸಂಬಂಧಿ ಎಚ್.ಬಿ. ನಂಜೇಗೌಡ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಕಾಂಗ್ರೆಸ್ ಪಕ್ಷದಲ್ಲಿ ಸೋದರ ಸಂಬಂಧಿ ಸುಬ್ರಮಣಿ ಶ್ರೀಕಂಠೇಗೌಡ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.