ಪ್ರಜ್ಞೆ ತಪ್ಪಿ ಈಜು ಕೊಳಕ್ಕೆ ಬಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು; ಸಮೀಪದಲ್ಲೇ ಜನ ಇದ್ದರೂ ನೆರವಿಗೆ ಧಾವಿಸಿಲ್ಲ!
Man Fell into swimming pool: ರೆಸಾರ್ಟ್ ಒಂದರಲ್ಲಿ ಮೂರ್ಛೆ ಹೋಗಿ ಈಜುಕೊಳಕ್ಕೆ ಬಿದ್ದು 33 ವರ್ಷದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನವಗಮ್ ನಿವಾಸಿ ಅಜಯ್ ಈಜುಕೊಳಕ್ಕೆ ಬಿದ್ದು ಒದ್ದಾಡುತ್ತಿರುವುದನ್ನು ಮೂರು ನಿಮಿಷಗಳ ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತದೆ. ಅಚ್ಚರಿ ಎಂದರೆ ಅಲ್ಲೇ ಮೂರ್ನಾಲ್ಕು ಮಂದಿ ಇದ್ದರೂ ಅಜಯ್‌ನನ್ನು ಉಳಿಸಲು ಸಾಧ್ಯವಾಗಲಿಲ್ಲ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮೂರ್ಛೆ ತಪ್ಪಿ ಈಜುಕೊಳಕ್ಕೆ ಬಿದ್ದ ವ್ಯಕ್ತಿ -
ಗಾಂಧಿನಗರ, ಏ. 21: ರೆಸಾರ್ಟ್‌ವೊಂದರಲ್ಲಿ ಪ್ರಜ್ಞೆ ತಪ್ಪ ಈಜುಕೊಳಕ್ಕೆ ಬಿದ್ದು 33 ವರ್ಷದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುಜರಾತ್‌ನ (Gujarat) ರಾಜ್‌ಕೋಟ್‌ನಲ್ಲಿ ನಡೆದಿದೆ. ಅಜಯ್ ರಾಥೋಡ್ ಮೃತ ದುರ್ದೈವಿ. ತನ್ನ ಮಗನ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ರೆಸಾರ್ಟ್‌ನಲ್ಲಿದ್ದ ವೇಳೆ ಈ ಘಟನೆ ಸಂಭವಿಸಿದೆ.
ನವಗಮ್ ನಿವಾಸಿ ಅಜಯ್ ಈಜುಕೊಳದ ಅಂಚಿನಲ್ಲಿ ವಿಶ್ರಾಂತಿ ಪಡೆಯುತ್ತಿರುವುದು, ಈಜುಕೊಳಕ್ಕೆ ಬಿದ್ದು ಒದ್ದಾಡುತ್ತಿರುವುದನ್ನು ಮೂರು ನಿಮಿಷಗಳ ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ. ಸ್ವಿಮ್ಮಿಂಗ್ ಪೋಲ್ ಅಂಚಿನಲ್ಲಿ ನಿಂತು ಅವರು ತನ್ನ ಒಂಬತ್ತು ವರ್ಷದ ಮಗ ವಿಹಾನ್ ಆಟವಾಡುವುದನ್ನು ನೋಡುತ್ತಿದ್ದರು. ಈ ವೇಳೆ ಮೂರ್ಛೆ ಹೋಗಿ ನೀರಿಗೆ ಬಿದ್ದಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಜ್ಞೆ ತಪ್ಪಿ ಕೊಳಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಅಜಯ್ ಮೃತಪಟ್ಟಿದ್ದಾರೆ. ಈ ವೇಳೆ ಅಲ್ಲೇ ಇದ್ದವರಿಗೆ ಏನಾಗುತ್ತಿದೆ ಎನ್ನುವುದೇ ಅವರಿಗೆ ಗೊತ್ತಾಗಿಲ್ಲ. ಅಜಯ್ ಈಜುತ್ತಿದ್ದಾರೆ ಎಂದು ಭಾವಿಸಿ ರಕ್ಷಣೆಗೆ ಮುಂದಾಗಿಲ್ಲ. ಈಜುಕೊಳದಲ್ಲಿ ಆಟವಾಡುತ್ತಿದ್ದವರು ತಮ್ಮ ಪಾಡಿಗೆ ತಾವು ಇರುವುದನ್ನು ವಿಡಿಯೊದಲ್ಲಿ ನೋಡಬಹುದು. ಕೊನೆಗೆ ಸಂದೇಹ ಬಂದು ಮೃತರ ಮಗ ತನ್ನ ತಂದೆಯನ್ನು ಕಾಪಾಡಲು ಪ್ರಯತ್ನಪಟ್ಟಿದ್ದಾನೆ. ಇನ್ನಿತರರು ಸಹಾಯ ಮಾಡಲು ಮುಂದಾದಾಗ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಇಲ್ಲಿದೆ ವಿಡಿಯೊ:
🚨 Entire 3 mins people just barely reacted while a guy was drowning in a swimming pool in Rajkot😭
— Vije (@vijeshetty) April 20, 2026
India literally needs to teach survival skills. pic.twitter.com/GkbeNEcgr4
ಆರಂಭದಲ್ಲಿ ಅಜಯ್ ಪ್ರಜ್ಞೆ ತಪ್ಪಿ ಬಿದ್ದಿರುವುದು ಅವರ ಕುಟುಂಬಕ್ಕೆ ತಿಳಿದಿರಲಿಲ್ಲ. ಸ್ನಾನ ಮಾಡುವಾಗ ಅವರು ಕೊಳಕ್ಕೆ ಬಿದ್ದಿದ್ದಾರೆಂದು ಭಾವಿಸಿದರು. ಆದರೆ ಅವರು ಮೇಲಕ್ಕೆ ಬಾರದಿದ್ದಾಗ ಅವರನ್ನು ಹೊರತೆಗೆದು ಸಿಪಿಆರ್ ನೀಡಿದರು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರೀಲ್ಸ್ ಹುಚ್ಚಿಗೆ ಪ್ರಾಣ ಬಿಟ್ಟ ಮೂವರು ಸಹೋದರರು: ಟ್ರಕ್‌ಗೆ ಡಿಕ್ಕಿ ಹೊಡೆದ ವೇಗವಾಗಿ ಬಂದ ಬೈಕ್
ತನ್ನ ವಿವಾಹ ವಾರ್ಷಿಕೋತ್ಸವ ಮತ್ತು ಮಗನ ಹುಟ್ಟುಹಬ್ಬವನ್ನು ಆಚರಿಸಲು ಅಜಯ್ ಮತ್ತು ಅವರ ಕುಟುಂಬ ಭಾನುವಾರ (ಏಪ್ರಿಲ್ 19) ಬೆಳಗ್ಗೆ 11 ಗಂಟೆ ಸುಮಾರಿಗೆ ರೆಸಾರ್ಟ್‌ಗೆ ಆಗಮಿಸಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ, ಅಜಯ್ ಈಜುಕೊಳದ ಬಳಿ ನಿಂತಿದ್ದಾಗ ಮೂರ್ಛೆ ತಪ್ಪಿ ಕೊಳಕ್ಕೆ ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಅವರ ಕುಟುಂಬಕ್ಕೆ ತಿಳಿದಿರಲಿಲ್ಲ. ನಂತರ ಅವರಿಗೆ ಅರಿವಾದಾಗ ಸಮಯ ಮೀರಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಅಜಯ್ ಮೃತಪಟ್ಟಿದ್ದರುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಅಜಯ್ ಸಾವು ನೀರಿನಲ್ಲಿ ಮುಳುಗಿ ಸಂಭವಿಸಿದೆ ಎಂದು ತೀರ್ಮಾನಿಸಲಾಗಿತ್ತು. ಇದೀಗ ಪೊಲೀಸರು ಅಜಯ್ ಹೇಗೆ ಮೂರ್ಛೆ ಹೋದರು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರಿಗೆ ತಲುಪಿದ ನಂತರವೇ ಅಜಯ್ ಸಾವಿಗೆ ನಿಖರವಾದ ಕಾರಣ ಬಹಿರಂಗಗೊಳ್ಳಲಿದೆ ಎಂದು ಪೊಲೀಸರು ಹೇಳಿದರು.