Vijay's Rally Stampede: ಕಾಲ್ತುಳಿತ ಹಿಂದೆ ರಾಜಕೀಯ ಪಿತೂರಿ? ಹೈ ಕೋರ್ಟ್ ಮೊರೆ ಹೋಗಲಿರುವ TVK
ಕರೂರಿನಲ್ಲಿ ನಡೆದ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿ ಸುಮಾರು 100 ಜನರು ಗಾಯಗೊಂಡ ಘಟನೆ ಹಿಂದೆ ರಾಜಕೀಯ ಕೈವಾಡವಿದೆ ಎಂದು ಟಿವಿಕೆ (TVK) ಪಕ್ಷ ಆರೋಪಿಸಿದೆ. ಟಿವಿಕೆ ಡಿಎಂಕೆಯನ್ನು ನೇರವಾಗಿ ದೂಷಿಸಿದೆ.

-

ಚೆನ್ನೈ: ಕರೂರಿನಲ್ಲಿ ನಡೆದ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿ ಸುಮಾರು 100 ಜನರು ಗಾಯಗೊಂಡ ಘಟನೆ ಹಿಂದೆ (Vijay's Rally Stampede) ರಾಜಕೀಯ ಕೈವಾಡವಿದೆ ಎಂದು ಟಿವಿಕೆ (TVK) ಪಕ್ಷ ಆರೋಪಿಸಿದೆ. ಟಿವಿಕೆ ಡಿಎಂಕೆಯನ್ನು (DMK Party) ನೇರವಾಗಿ ದೂಷಿಸಿದೆ. ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲು ಅಥವಾ ಪ್ರಕರಣವನ್ನು ಕೇಂದ್ರ ಸಂಸ್ಥೆ ಸಿಬಿಐಗೆ ವರ್ಗಾಯಿಸಲು ವಿಜಯ್ (Vijay Thalapathy) ನೇತೃತ್ವದ ಪಕ್ಷ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿದೆ ಎಂದು ಟಿವಿಕೆ ವಕೀಲ ಅರಿವಜಗನ್ ತಿಳಿಸಿದ್ದಾರೆ.
ಕರೂರ್ ರ್ಯಾಲಿಯಲ್ಲಿ ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬ ರಾಜ್ಯ ಸರ್ಕಾರದ ವಾದಗಳನ್ನು ಅರಿವಜಗನ್ ತಳ್ಳಿಹಾಕಿದರು. ಟಿವಿಕೆ ಕಾನೂನು ವಿಭಾಗದ ರಾಜ್ಯ ಸಂಯೋಜಕ ಅರಿವಳಗನ್, ನಾಳೆ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಈ ವಿಷಯವನ್ನು ಎತ್ತುವುದಾಗಿ ಹೇಳಿದರು. "ಕರೂರಿನಲ್ಲಿ ನಡೆದ ಘಟನೆಯಲ್ಲಿ ಒಂದು ಪಿತೂರಿ, ಕ್ರಿಮಿನಲ್ ಪಿತೂರಿ ಇತ್ತು, ಆದ್ದರಿಂದ ನಾವು ಗೌರವಾನ್ವಿತ ಹೈಕೋರ್ಟ್ ಅನ್ನು ರಾಜ್ಯ ಸಂಸ್ಥೆಯ ಮೂಲಕವಲ್ಲ, ಸ್ವತಂತ್ರವಾಗಿ ಈ ವಿಷಯವನ್ನು ತನಿಖೆ ಮಾಡುವಂತೆ ವಿನಂತಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯವು ವಿಶೇಷ ತನಿಖಾ ತಂಡವನ್ನು ರಚಿಸಬೇಕು, ಇಲ್ಲದಿದ್ದರೆ ಅವರು ಪ್ರಕರಣವನ್ನು ತಮಿಳುನಾಡು ಪೊಲೀಸರಿಂದ ಸಿಬಿಐಗೆ ವರ್ಗಾಯಿಸಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯ ಪೊಲೀಸರ ತನಿಖೆಯನ್ನು ಟಿವಿಕೆ ನಂಬುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತಿರಿಸಿದ ಅವರು, ಕ್ರಿಮಿನಲ್ ಪಿತೂರಿ ನಡೆದಿದೆ. ಸ್ಥಳೀಯ ಜನರಿಂದ ನಮಗೆ ವಿಶ್ವಾಸಾರ್ಹ ಮಾಹಿತಿ ಸಿಕ್ಕಿದೆ ಮತ್ತು ನಮ್ಮ ಬಳಿ ಕೆಲವು ಸಿಸಿಟಿವಿ ದೃಶ್ಯಾವಳಿಗಳಿವೆ. ಕರೂರ್ ಜಿಲ್ಲೆಯಲ್ಲಿ ಕೆಲವು ಆಡಳಿತ ಪಕ್ಷದ ಪದಾಧಿಕಾರಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂಬುದು ಸ್ವಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Vijay's Rally Stampede: ತಮಿಳುನಾಡು ಕಾಲ್ತುಳಿತ: ಕಂಬನಿ ಮಿಡಿದ ಕಮಲ್ ಹಾಸನ್, ರಜನಿಕಾಂತ್
ಪೊಲೀಸರು ವಿಧಿಸಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ರ್ಯಾಲಿ ಉಲ್ಲಂಘಿಸಿದೆ ಎಂಬ ಡಿಎಂಕೆ ಸರ್ಕಾರದ ಆರೋಪಗಳಿಗೆ ತಿರುಗೇಟು ನೀಡಿದ ಅರಿವಳಗನ್, "ನಾವು ಪೊಲೀಸರು ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ, ಕಳೆದ ಎರಡು ತಿಂಗಳುಗಳಲ್ಲಿ ಮಧುರೈ, ತಿರುಚ್ಚಿ, ಅರಿಯಲೂರು, ತಿರುವರೂರು, ನಾಗಪಟ್ಟಣಂ ಮತ್ತು ನಾಮಕ್ಕಲ್‌ನಲ್ಲಿ ಟಿವಿಕೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಅಲ್ಲಿ ಎಲ್ಲಿಯೂ ಆಗದ ಕಾಲ್ತುಳಿತ ಕರೂರಿನಲ್ಲಿಯೇ ಏಕೆ ಎಂದು ಡಿಎಂಕೆ ವಿರುದ್ಧ ಕಿಡಿ ಕಾರಿದ್ದಾರೆ.