Vijay's Rally Stampede: ತಮಿಳುನಾಡು ಕಾಲ್ತುಳಿತ: ಕಂಬನಿ ಮಿಡಿದ ಕಮಲ್ ಹಾಸನ್, ರಜನಿಕಾಂತ್
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ಪ್ರಚಾರ ರಾಲಿಯ ವೇಳೆ ನಡೆದ ಕಾಲ್ತುಳಿತದಿಂದ ಸುಮಾರು 38 ಜನರು ಸಾವನ್ನಪ್ಪಿದ್ದರು. ಇದಕ್ಕೆ ನಟರಾದ ಕಮಲ್ ಹಾಸನ್, ರಜನಿಕಾಂತ್ ದುಃಖ ವ್ಯಕ್ತಪಡಿಸಿದ್ದಾರೆ. ಇದು ತಮ್ಮ ಹೃದಯವನ್ನು ನಡುಗಿಸುತ್ತದೆ ಎಂದು ಹೇಳಿದ್ದಾರೆ.

-

ಚೆನ್ನೈ: ತಮಿಳುನಾಡಿನ (tamil nadu) ಕರೂರಿನಲ್ಲಿ (Karur) ಶನಿವಾರ ಆಯೋಜಿಸಿದ್ದ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಮುಖ್ಯಸ್ಥ ವಿಜಯ್ (actor vijay) ಅವರ ಪ್ರಚಾರ ರಾಲಿಯ ವೇಳೆ ನಡೆದ ಕಾಲ್ತುಳಿತದಿಂದ ಸುಮಾರು 39 ಜನರು ಸಾವನ್ನಪ್ಪಿದ್ದರು. ಈ ಬಗ್ಗೆ ನಟರಾದ ಕಮಲ್ ಹಾಸನ್ (kamal hasan), ರಜನಿಕಾಂತ್ (Rajinikanth) ದುಃಖ ವ್ಯಕ್ತಪಡಿಸಿದ್ದು, ಈ ಘಟನೆ ಹೃದಯವನ್ನು ನಡುಗಿಸುತ್ತದೆ. ಜೀವ ಕಳೆದುಕೊಂಡವರ ಕುಟುಂಬಗಳಿಗೆ ಆಳವಾದ ಸಂತಾಪಗಳು ಎಂದು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿದ್ದಾರೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ಪ್ರಚಾರ ರಾಲಿಯಲ್ಲಿ ಕಾಲ್ತುಳಿತ ಉಂಟಾದ ಬಳಿಕ ಅವರು ತಮ್ಮ ಭಾಷಣವನ್ನು ನಿಲ್ಲಿಸಬೇಕಾಯಿತು. ರಾಲಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮಕ್ಕಳು ಸೇರಿದಂತೆ ಹಲವಾರು ಮಂದಿ ಹಾಜರಿದ್ದವರು ಹೆಚ್ಚಿನ ಜನದಟ್ಟಣೆಯಿಂದ ಕೆಲವರು ಮೂರ್ಛೆ ಹೋದರು.
கரூரில் நிகழ்ந்திருக்கும் அப்பாவி மக்களின் உயிரிழப்புச் செய்தி நெஞ்சை உலுக்கி மிகவும் வேதனையளிக்கிறது.
— Rajinikanth (@rajinikanth) September 27, 2025
உயிரிழந்தோரின் குடும்பத்தினருக்கு என் ஆழ்ந்த அனுதாபங்கள். காயமடைந்தோருக்கு ஆறுதல்கள்.#Karur #Stampede
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಜನಿಕಾಂತ್, ಕರೂರಿನಲ್ಲಿ ಸಂಭವಿಸಿದ ಘಟನೆಯಲ್ಲಿ ಅಮಾಯಕರ ಜೀವಹಾನಿಯ ಸುದ್ದಿ ಹೃದಯವನ್ನು ನಡುಗಿಸುತ್ತದೆ ಮತ್ತು ಅಪಾರ ದುಃಖವನ್ನು ಉಂಟುಮಾಡುತ್ತದೆ. ಜೀವ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರಿಗೆ ಸಾಂತ್ವನ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vijay's Rally Stampede: ಕಾಲ್ತುಳಿತದಿಂದ ಪಾರಾಗಲು ಗುಡಿಸಲಿಗೆ ನುಗ್ಗಿದ ಬಾಲಕರು; ಭಯಾನಕ ವಿಡಿಯೋ ವೈರಲ್
நெஞ்சு பதைக்கிறது. கரூரிலிருந்து வரும் செய்திகள் பேரதிர்ச்சியையும் வேதனையையும் அளிக்கின்றன. கூட்ட நெரிசலில் சிக்கி உயிரிழந்த அப்பாவி மக்களுக்கு என் ஆழ்ந்த இரங்கலைத் தெரிவிக்கவும் வார்த்தைகளின்றித் திகைக்கிறேன்.
— Kamal Haasan (@ikamalhaasan) September 27, 2025
நெரிசலிலிருந்து மீட்கப்பட்டவர்களுக்கு உரிய சிகிச்சையும்,…
ಕಮಲ್ ಹಾಸನ್ ತಮ್ಮ ಪೋಸ್ಟ್ ನಲ್ಲಿ ಇದು ನನ್ನ ಹೃದಯ ನಡುಗಿಸುತ್ತಿದೆ. ಕರೂರಿನಿಂದ ಬರುತ್ತಿರುವ ಸುದ್ದಿ ಆಘಾತ ಮತ್ತು ದುಃಖವನ್ನು ಉಂಟು ಮಾಡಿದೆ. ಜನದಟ್ಟಣೆಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಅಮಾಯಕ ಜನರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಲು ನನಗೆ ಪದಗಳೇ ಸಾಲುತ್ತಿಲ್ಲ. ದಟ್ಟಣೆಯಿಂದ ರಕ್ಷಿಸಲ್ಪಟ್ಟವರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ಮತ್ತು ಬಾಧಿತರಿಗೆ ಸೂಕ್ತ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕೆಂದು ತಮಿಳುನಾಡು ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.