ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ʼಅನಕ್ಷರಸ್ಥ ಮೂರ್ಖʼ ಪಾಕ್ ಮಾಜಿ ಸಚಿವರ ವಿರುದ್ಧ ಅದ್ನಾನ್ ಸಾಮಿ ವಾಗ್ದಾಳಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ. 22ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಬಿಟ್ಟು ಹೋಗಲು ಆದೇಶಿಸಲಾಗಿದೆ. ಹೀಗಾಗಿ ಖ್ಯಾತ ಗಾಯಕ ಅದ್ನಾನ್ ಸಾಮಿ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗುತ್ತದೆಯೇ ಎಂದು ಅಲ್ಲಿನ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಪ್ರಶ್ನಿಸಿದ್ದಾರೆ. ಇದು ಅದ್ನಾನ್ ಸಾಮಿ ಮತ್ತು ಚೌಧರಿ ಫವಾದ್ ಹುಸೇನ್ ನಡುವೆ ತೀವ್ರ ವಾಗ್ವಾದದಕ್ಕೆ ಕಾರಣವಾಗಿದೆ.

ಅದ್ನಾನ್ ಪೌರತ್ವದ ಬಗ್ಗೆ ಪ್ರಶ್ನಿಸಿದ ಪಾಕ್ ಮಾಜಿ ಸಚಿವನಿಗೆ ಮುಖಭಂಗ

ನವದೆಹಲಿ: ಕಾಶ್ಮೀರದ (Kashmir) ಪಹಲ್ಗಾಮ್‌ನಲ್ಲಿ (Pahalgam) ಏ. 22ರಂದು ನಡೆದ ಭಯೋತ್ಪಾದಕ ದಾಳಿಯ (terror attack) ಬಳಿಕ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಬಿಟ್ಟು ಹೋಗಲು ಆದೇಶಿಸಲಾಗಿದೆ. ಇದರ ಬಳಿಕ ಖ್ಯಾತ ಗಾಯಕನನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗುತ್ತದೆಯೇ ಎನ್ನುವ ಪ್ರಶ್ನೆಯನ್ನು ಕೇಳಿದ ಪಾಕಿಸ್ತಾನದ ಮಾಜಿ ಸಚಿವರಿಗೆ ಗಾಯಕ ಸರಿಯಾದ ತಿರುಗೇಟು ನೀಡಿದ್ದಾರೆ. ಇದು ಗಾಯಕ ಅದ್ನಾನ್ ಸಾಮಿ (singer Adnan Sami) ಮತ್ತು ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ (Fawad Hussain) ನಡುವೆ ತೀವ್ರ ವಾಗ್ವಾದದಕ್ಕೆ ಕಾರಣವಾಗಿದೆ. ಫವಾದ್ ಹುಸೇನ್ ಅವರನ್ನು "ಅನಕ್ಷರಸ್ಥ ಮೂರ್ಖ" ಎಂದು ಕರೆದಿರುವ ಸಾಮಿ ತಾವು 2016ರಲ್ಲಿ ಭಾರತೀಯ ಪೌರತ್ವವನ್ನು ಪಡೆದಿರುವುದಾಗಿ ಸಚಿವರಿಗೆ ನೆನಪಿಸಿದರು.

ಪಹಲ್ಗಾಮ್‌ನಲ್ಲಿ ಏ. 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಿಯರ ವೀಸಾವನ್ನು ರದ್ದುಗೊಳಿಸಿತ್ತು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಕಿಸ್ತಾನಿ ಪ್ರಜೆಗಳು ಕೂಡಲೇ ತಮ್ಮ ದೇಶಕ್ಕೆ ಮರಳುವಂತೆ ನಿರ್ದೇಶನ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪಾಕಿಸ್ತಾನಿ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಗಾಯಕ ಅದ್ನಾನ್ ಸಾಮಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.

ಅಮಿತ್ ಶಾ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಪಾಕಿಸ್ತಾನಿಯರಿಗೆ ದೇಶ ತೊರೆಯಲು ಏಪ್ರಿಲ್ 27ರ ಗಡುವು ನೀಡಿರುವುದಾಗಿ ಹೇಳಿದ್ದು, ಇದನ್ನು ಮೀರಿ ಯಾವುದೇ ಪಾಕಿಸ್ತಾನಿ ನಾಗರಿಕರು ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳುವಂತೆ ಕೇಳಿಕೊಂಡರು. ವೈದ್ಯಕೀಯ ವೀಸಾ ಹೊಂದಿರುವವರು ಏಪ್ರಿಲ್ 29ರೊಳಗೆ ಹೊರಹೋಗುವಂತೆ ಕೇಳಲಾಗಿದೆ.

ಇದನ್ನು ಉಲ್ಲೇಖಿಸಿದ ಹುಸೇನ್, ಅದ್ನಾನ್ ಸಾಮಿ ಬಗ್ಗೆ ನಿಮ್ಮ ನಿರ್ಧಾರ ಏನು? ಎಂದು ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಪ್ರಶ್ನಿಸಿದ್ದಾರೆ.



ಇದಕ್ಕೆ ಪ್ರತಿಕ್ರಿಯೆ ನೀಡಿದ 'ಕಭಿ ತೋ ನಜರ್ ಮಿಲಾವ್'ನಂತಹ ಯಶಸ್ವಿ ಆಲ್ಬಮ್‌ಗಳಿಗೆ ಹೆಸರುವಾಸಿಯಾದ ಗಾಯಕ ಸಾಮಿ, ಈ ಅನಕ್ಷರಸ್ಥ ಮೂರ್ಖನಿಗೆ ಯಾರು ಹೇಳುವರು ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ಹುಸೇನ್ ಗಾಯಕ ಲಾಹೋರ್‌ನವರು ಎಂದು ಹೇಳಿರುವುದಕ್ಕೆ ಪ್ರತಿಯಾಗಿ ಕೋಪ ವ್ಯಕ್ತಪಡಿಸಿರುವ ಸಾಮಿ, ತಾವು ಪೇಶಾವರದಿಂದ ಬಂದಿರುವುದು. ಮಾಹಿತಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಸಚಿವರಿಗೆ ಸತ್ಯವೇ ತಿಳಿದಿಲ್ಲ ಎಂದು ಟೀಕಿಸಿದರು.

ಪಾಕಿಸ್ತಾನದ ಹಿಂದಿನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದಲ್ಲಿ ಫವಾದ್ ಹುಸೇನ್ ಮಾಹಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು. ನಾನು ಲಾಹೋರ್‌ನಿಂದ ಅಲ್ಲ ಪೇಶಾವರದಿಂದ ಬಂದವನು. ನೀವು ಮಾಹಿತಿ ಸಚಿವರಾಗಿದ್ದಿರಿ ಮತ್ತು ಯಾವುದೇ ಮಾಹಿತಿಯ ಬಗ್ಗೆ ಜ್ಞಾನವಿಲ್ಲ ಎಂದು ಭಾವಿಸಬೇಕಿದೆ ನಾವು. ನೀವು ವಿಜ್ಞಾನ ಸಚಿವರಾಗಿದ್ದೀರಾ? ಅದು ಬುಲ್ಸ್ ಟಿ ವಿಜ್ಞಾನವೇ? ಎಂದು ಸಾಮಿ ತಿರುಗೇಟಿ ನೀಡಿದ್ದಾರೆ.

ಅದ್ನಾನ್ ಸಾಮಿ 2016 ರಲ್ಲಿ ಭಾರತೀಯ ಪೌರತ್ವವನ್ನು ಪಡೆದಿದ್ದು ಬಳಿಕ ಅವರು ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಸಾಮಿ ಭಾರತೀಯ ಪೌರತ್ವವನ್ನು ಪಡೆಯಲು 18 ವರ್ಷಗಳನ್ನು ತೆಗೆದುಕೊಂಡರು. ಒಂದೂವರೆ ವರ್ಷಗಳ ಕಾಲ ಅವರು ರಾಷ್ಟ್ರರಹಿತರಾಗಿದ್ದರು ಎಂಬುದನ್ನು ಅವರೇ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಪಾಕಿಸ್ತಾನದಲ್ಲಿ ತಮಗೆ ಬೆದರಿಕೆ ಇದೆಎಂಬುದಾಗಿಯೂ ಅವರು ತಿಳಿಸಿದ್ದರು.

ಭಾರತೀಯರಾಗಲು ಉದ್ದೇಶಿಸಿದ್ದ ಅದ್ನಾನ್ ಸಾಮಿ ತಮಗೆ ಪೌರತ್ವ ನೀಡಿರುವುದಕ್ಕೆ ಭಾರತ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.