AFSPA: ಈಶಾನ್ಯ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಆರು ತಿಂಗಳ ಕಾಲ ವಿಸ್ತರಣೆ
ಜನಾಂಗೀಯ ಹಿಂಸಾಚಾರದ ಬಳಿಕ ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (AFSPA) ಆರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

-

ಮಣಿಪುರ: ಜನಾಂಗೀಯ ಹಿಂಸಾಚಾರದ (violence) ಬಳಿಕ ಮಣಿಪುರ (Manipur), ನಾಗಾಲ್ಯಾಂಡ್ (Nagaland) ಮತ್ತು ಅರುಣಾಚಲ ಪ್ರದೇಶದ (Arunachal Pradesh) ಕೆಲವು ಭಾಗಗಳನ್ನು ಕೇಂದ್ರ ಸರ್ಕಾರವು "ಕ್ಷೋಭೆಗೊಳಗಾದ ಪ್ರದೇಶ' (Disturbed area) ಎಂದು ಘೋಷಿಸಿದ್ದು, ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (Armed Forces Special Powers Act) ಆರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು 2023ರ ಮೇ ತಿಂಗಳಿನಿಂದ ಮಣಿಪುರವು ತೀವ್ರವಾದ ಜನಾಂಗೀಯ ಹಿಂಸಾಚಾರವನ್ನು ಎದುರಿಸಿದೆ ಎಂದು ಹೇಳಿದೆ.
ಭದ್ರತಾ ಕಾಳಜಿಗಳ ನಡುವೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿರುವ ಗೃಹ ಸಚಿವಾಲಯ ಈಶಾನ್ಯದ ಕೆಲವು ಭಾಗಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯು ಆರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದು ಘೋಷಿಸಿದೆ.
ಅಕ್ಟೋಬರ್ 1 ರಿಂದ ಜಾರಿಯಾಗುವಂತೆ ಈ ವಿಸ್ತರಣೆಯು ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಕೆಲವು ನಿರ್ದಿಷ್ಟ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ. ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ತೀವ್ರವಾದ ಜನಾಂಗೀಯ ಹಿಂಸಾಚಾರಕ್ಕೆ ಒಳಗಾಗಿದೆ. ಈ ಅಧಿಸೂಚನೆಯು ಐದು ಕಣಿವೆ ಜಿಲ್ಲೆಗಳಾದ ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್, ಬಿಷ್ಣುಪುರ ಮತ್ತು ಕಾಕ್ಚಿಂಗ್‌ನಾದ್ಯಂತ 13 ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದೆಡೆ ಹಿಂದಿನ ವಿನಾಯಿತಿಗಳು ಇರಲಿದೆ. ಭಾಗಶಃ ನಿರ್ಬಂಧ ಸಡಿಲಿಸುವ ಮೂಲಕ ಕೇಂದ್ರವು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಿದೆ.
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯಡಿ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಪಡೆಗಳಿಗೆ ಹುಡುಕಾಟ, ವಾರಂಟ್ ಇಲ್ಲದೆ ಬಂಧಿಸುವುದು ಮತ್ತು ಕಾನೂನು ವಿನಾಯಿತಿಯೊಂದಿಗೆ ಗುಂಡು ಹಾರಿಸುವ ಅಧಿಕಾರವನ್ನು ನೀಡಿದೆ.
ಇದನ್ನೂ ಓದಿ: Acid Attack: ಒಬ್ಬನನ್ನು ದಾಳವಾಗಿರಿಸಿ ಮತ್ತೊಬ್ಬನಿಗೆ ಖೆಡ್ಡಾ; ಅಡ್ಡ ಬಂದವಳ ಮುಖಕ್ಕೆ ಆ್ಯಸಿಡ್ ಹಾಕಿದ್ಲು ಈ ನವರಂಗಿ
ಮಣಿಪುರ ಹೊರತು ಪಡಿಸಿ ನಾಗಾಲ್ಯಾಂಡ್ ನ ಒಂಬತ್ತು ಜಿಲ್ಲೆಗಳು ಮತ್ತು 21 ಪೊಲೀಸ್ ಠಾಣೆ ಪ್ರದೇಶಗಳು, ಅರುಣಾಚಲ ಪ್ರದೇಶದ ಅಸ್ಸಾಂನ ಗಡಿಯಲ್ಲಿರುವ ನಮ್ಸೈ ಜಿಲ್ಲೆಯ ಮೂರು ಪೊಲೀಸ್ ಠಾಣೆ ಪ್ರದೇಶಗಳು, ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳಲ್ಲಿ ಭದ್ರತಾ ಪರಿಸ್ಥಿತಿ ಸೂಕ್ಷ್ಮವಾಗಿದೆ. ಆದರೂ ನಿರ್ದಿಷ್ಟ ಪೊಲೀಸ್ ಠಾಣೆ ಪ್ರದೇಶಗಳನ್ನು ಹೊರಗಿಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಹೇಳಿದೆ.