MLA Pradeep Eshwar: 35.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಸಂಜೀವಿನಿ ಕಟ್ಟಡ ಉದ್ಘಾಟಿಸಿದ ಶಾಸಕ ಪ್ರದೀಪ್ ಈಶ್ವರ್
ಮೂರು ದಿನದ ಹಿಂದೆ ಇದೇ ಆವಲಗುರ್ಕಿ ಪಂಚಾಯತಿಯ ವಡ್ಡರೆ ಪಾಳ್ಯ ಮತ್ತು ಕುರ್ಲಹಳ್ಲಿ ಗ್ರಾಮಗಳಿಗೆ ಭೇಟಿ ನೀಡಿದ್ದ ವೇಳೆ ಅರ್ಹರಿಗೆ ವೃದ್ದಾಪ್ಯವೇತನ, ವಿಧವಾ ವೇತನವನ್ನು ಮಂಜೂರು ಮಾಡಿಸಲು ನಾಡಕಛೇರಿಯನ್ನೇ ಗ್ರಾಮದ ನಡುವೆ ಪ್ರತಿಷ್ಠಾಪಿಸಿ ಜನರ ಕಷ್ಟ ಗಳನ್ನು ಪರಿಹರಿಸಿ ಅವರ ಮೊಗದಲ್ಲಿ ಸಂತೋಷ ಕಂಡಿದ್ದೇನೆ
ಆವಗುರ್ಕಿಗ್ರಾಮಪಂಚಾಯಿತಿ ಕಟ್ಟಡದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸುಮಾರು ೩೫.೫ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಸಂಜೀವಿನಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. -
ಚಿಕ್ಕಬಳ್ಳಾಪುರ: ಆವಲಗುರ್ಕಿ ಗ್ರಾಮಪಂಚಾಯಿತಿ ಮೊದಲ ಮಹಡಿ ಕಟ್ಟಡದಲ್ಲಿ ಸುಮಾರು ೩೫.೫ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಸಂಜೀವಿನಿ ಕಟ್ಟಡವನ್ನು ಶಾಸಕ ಪ್ರದೀಪ್ ಈಶ್ವರ್ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನ ಆವಲಗುರ್ಕಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ರಾಮ ಪಂಚಾ ಯಿತಿಯ ಸಂಜೀವಿನಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಇದರ ಸದುಪಯೋಗ ವನ್ನು ಜನತೆ ಪಡೆದುಕೊಳ್ಳಬೇಕೆಂದರು.
ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಗ್ರಾಮ ಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೆ ಸಾಕಷ್ಟು ಸಮಸ್ಯೆ ಗಳಿಗೆ ಪರಿಹಾರ ನೀಡಿದ್ದೇನೆ. ವೃದ್ದಾಪ್ಯ ವೇತನ ಪಡೆಯ ಬೇಕಾದರೆ ಮೂರು ತಿಂಗಳು ಬೇಕಾಗುತ್ತದೆ. ಆದರೆ ನಾನು ಗ್ರಾಮಗಳಿಗೆ ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅರ್ಹರಿಗೆ ಸ್ಥಳದಲ್ಲೇ ವೃದ್ದಾಪ್ಯವೇತನ, ವಿಧವಾ ವೇತನವನ್ನು ಮಂಜೂರು ಮಾಡಿ ಕೊಡುವ ಕೆಲಸ ಮಾಡುತ್ತಿದ್ದೇನೆ.
ಮೂರು ದಿನದ ಹಿಂದೆ ಇದೇ ಆವಲಗುರ್ಕಿ ಪಂಚಾಯತಿಯ ವಡ್ಡರೆ ಪಾಳ್ಯ ಮತ್ತು ಕುರ್ಲಹಳ್ಲಿ ಗ್ರಾಮಗಳಿಗೆ ಭೇಟಿ ನೀಡಿದ್ದ ವೇಳೆ ಅರ್ಹರಿಗೆ ವೃದ್ದಾಪ್ಯವೇತನ, ವಿಧವಾ ವೇತನವನ್ನು ಮಂಜೂರು ಮಾಡಿಸಲು ನಾಡಕಛೇರಿಯನ್ನೇ ಗ್ರಾಮದ ನಡುವೆ ಪ್ರತಿಷ್ಠಾ ಪಿಸಿ ಜನರ ಕಷ್ಟಗಳನ್ನು ಪರಿಹರಿಸಿ ಅವರ ಮೊಗದಲ್ಲಿ ಸಂತೋಷ ಕಂಡಿದ್ದೇನೆ ಎಂದರು.
ಈ ವೇಳೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಿ ರಮೇಶ್, ಪಿಡಿಒ ಅರುಣಗೋಪಿ, ಕಾರ್ಯದರ್ಶಿ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷತ್ ರೆಡ್ಡಿ, ಮುಖಂಡರಾದ ಡ್ಯಾನ್ಸ್ ಶ್ರೀನಿವಾಸ್, ನಾಗೇಶ್, ರಮೇಶ್ ಬಾಬು,ದೇವರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ, ಸದಸ್ಯರು, ಸಾರ್ವಜನಿಕರು ಇದ್ದರು.