ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ವಾತಂತ್ರ್ಯ ಸಿಕ್ಕಿದ 78 ವರ್ಷಗಳ ಬಳಿಕ ಮೊದಲ ಬಾರಿಗೆ ಈ ಗ್ರಾಮಕ್ಕೆ ಬಂತು ಬಸ್‌... ಜನರ ಖುಷಿಯ ವಿಡಿಯೋ ನೋಡಿ

ಸ್ವಾತಂತ್ರ್ಯ ಸಿಕ್ಕಿದ ಬಳಿಕ ಮೊದಲ ಬಾರಿಗೆ ಅಂದರೆ ಸರಿಸುಮಾರು 78 ವರ್ಷಗಳ ಬಳಿಕ ಹಿಮಾಚಲ ಪ್ರದೇಶದ ಗ್ರಾಮವೊಂದಕ್ಕೆ ಇದೀಗ ಬಸ್ ಬಂದಿದೆ. ಮಂಡಿ ಜಿಲ್ಲೆಯ ಕರ್ಸೋಗ್ ಉಪವಿಭಾಗದಲ್ಲಿರುವ ತುಮ್ಮನ್ ಗ್ರಾಮಕ್ಕೆ ಮೊದಲ ಬಾರಿಗೆ ಹಿಮಾಚಲ ರಸ್ತೆ ಸಾರಿಗೆ ನಿಗಮದ (HRTC) ಬಸ್ ಬಂದಿದ್ದು, ಇದು ಸ್ಥಳೀಯರಲ್ಲಿ ಉತ್ಸಾಹ ಮತ್ತು ಸಂಭ್ರಮವನ್ನು ಹಚ್ಚಿಸಿದೆ.

ಹಿಮಾಚಲದ ಗ್ರಾಮಕ್ಕೆ ಬಂತು ಮೊದಲ ಬಸ್

(ಸಂಗ್ರಹ ಚಿತ್ರ) -

ಹಿಮಾಚಲ ಪ್ರದೇಶ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳ ಬಳಿಕ ಇದೀಗ ಹಿಮಾಚಲ ಪ್ರದೇಶದ (Himachal Pradesh) ಗ್ರಾಮವೊಂದು ಮೊದಲ ಬಾರಿಗೆ ಬಸ್ (Bus) ಸಂಪರ್ಕವನ್ನು ಪಡೆದುಕೊಂಡಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ (Mandi district) ಕರ್ಸೋಗ್ ಉಪವಿಭಾಗದಲ್ಲಿರುವ ತುಮ್ಮನ್ ಗ್ರಾಮಕ್ಕೆ ಡಿಸೆಂಬರ್ 31ರಂದು ಮೊದಲ ಬಾರಿಗೆ ಹಿಮಾಚಲ ರಸ್ತೆ ಸಾರಿಗೆ ನಿಗಮದ (Himachal Road Transport Corporation) ಬಸ್ ಬಂದಿದ್ದು, ಇದು ಸ್ಥಳೀಯರಲ್ಲಿ ಸಂಭ್ರಮವನ್ನು ಹಚ್ಚಿಸಿದೆ. ಗ್ರಾಮಸ್ಥರು ಇದನ್ನು ಹಬ್ಬದಂತೆ ಆಚರಿಸಿದರು.

ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ತುಮ್ಮನ್ ಗ್ರಾಮಕ್ಕೆ ಸ್ವಾತಂತ್ರ್ಯ ಸಿಕ್ಕಿದ 78 ವರ್ಷಗಳ ಬಳಿಕ ಮೊದಲ ಬಾರಿಗೆ ಹಿಮಾಚಲ ರಸ್ತೆ ಸಾರಿಗೆ ನಿಗಮದ ಬಸ್ ಬಂದಿದೆ. ಇದನ್ನು ಸ್ಥಳೀಯರು ಅತ್ಯಂತ ಸಂತೋಷದಿಂದ ಆಚರಿಸಿದರು. ಡಿಸೆಂಬರ್ 31ರಂದು ಬಸ್ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ಸಂತೋಷದಿಂದ ಬಸ್ ಅನ್ನು ಸ್ವಾಗತಿಸಿದರು. ಈ ಐತಿಹಾಸಿಕ ಘಟನೆಗೆ ನೂರಾರು ಗ್ರಾಮಸ್ಥರು ಸಾಕ್ಷಿಯಾದರು. ನಗರ ಪ್ರದೇಶಕ್ಕೆ ತುಮ್ಮನ್ ಅನ್ನು ಸಂಪರ್ಕಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

ಮೈನಸ್ ಡಿಗ್ರಿ ಚಳಿಯಲ್ಲೂ ಟ್ರಕ್‌ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಭಾರತೀಯ

ಗ್ರಾಮಕ್ಕೆ ಬಸ್ ಆಗಮಿಸಿದ್ದನ್ನು ಸ್ಥಳೀಯರು ಹಬ್ಬದಂತೆ ಆಚರಿಸಿದರು. ರಿಬ್ಬನ್ ಕತ್ತರಿಸಿ ಬಸ್ ಸೇವೆಯನ್ನು ಉದ್ಘಾಟಿಸಲಾಯಿತು. ಬಸ್ ಅನ್ನು ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಅಭಿವೃದ್ಧಿಯತ್ತ ಗ್ರಾಮದ ಪ್ರಮುಖ ಹೆಜ್ಜೆಗೆ ನೂರಾರು ಮಕ್ಕಳು, ಹಿರಿಯರು ಸಾಕ್ಷಿಯಾದರು.



ಆಸ್ಪತ್ರೆ, ಶಿಕ್ಷಣ, ಸರ್ಕಾರಿ ಕಚೇರಿ ಕೆಲಸಗಳಿಗೆ ಈವರೆಗೆ ಗ್ರಾಮಸ್ಥರು ದೂರದ ನಗರ ಪ್ರದೇಶವನ್ನು ತಲುಪಲು ಖಾಸಗಿ ವಾಹನಗಳನ್ನು ಅವಲಂಬಿತರಾಗಿದ್ದರು. ಆದರೆ ಈಗ ಅವರಿಗೆ ಬಸ್ ಸೌಲಭ್ಯ ಸಿಕ್ಕಿರುವುದರಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮತ್ತೆ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಮುಖ್ಯ ಕೋಚ್ ಆಗಿ ಸ್ಜೋರ್ಡ್ ಮಾರಿಜ್ನೆ ನೇಮಕ

ಬಸ್ ಸೇವೆಯಲ್ಲಿ ವಿಶೇಷವಾಗಿ ವೃದ್ಧರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದು ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ.

ಗ್ರಾಮವು ಅನಿ ಬಸ್ ನಿಲ್ದಾಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಅಂತಿಮ ಅನುಮೋದನೆಗಳ ಬಳಿಕ ಗ್ರಾಮಕ್ಕೆ ನಿಯಮಿತ ಬಸ್ ಸೇವೆ ಪ್ರಾರಂಭಿಸುವುದಾಗಿ ಹಿಮಾಚಲ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.