ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ರಿಕ್ಸ್ ಸಭೆಗೂ ಮುನ್ನ ರಷ್ಯಾ ವಿದೇಶಾಂಗ ಸಚಿವ ಲಾವ್ರೊವ್ ಜೊತೆ ಎಸ್. ಜೈಶಂಕರ್ ಮಾತುಕತೆ

Ahead of the BRICS meeting: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಅವರು ನವದೆಹಲಿಯಲ್ಲಿ ಮಾತುಕತೆ ನಡೆಸಿದರು. ಗುರುವಾರದಿಂದ ಆರಂಭವಾಗಲಿರುವ ಎರಡು ದಿನಗಳ ಬ್ರಿಕ್ಸ್ (BRICS) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಲಾವ್ರೊವ್ ಅವರು ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಈ ಭೇಟಿ ನಡೆದಿದೆ.

ರಷ್ಯಾ ವಿದೇಶಾಂಗ ಸಚಿವ ಲಾವ್ರೊವ್ ಜೊತೆ ಎಸ್. ಜೈಶಂಕರ್ ಮಾತುಕತೆ

ಲಾವ್ರೊವ್ ಜೊತೆ ಎಸ್. ಜೈಶಂಕರ್ ಮಾತುಕತೆ -

Priyanka P
Priyanka P May 14, 2026 3:20 PM

ನವದೆಹಲಿ, ಮೇ 14: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಮತ್ತು ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ (Sergey Lavrov) ಅವರು ಬುಧವಾರ (ಮೇ 13, 2026) ನವದೆಹಲಿಯಲ್ಲಿ ಮಾತುಕತೆ ನಡೆಸಿದರು. ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಇಂಧನ ಸಹಕಾರವನ್ನು ಹೆಚ್ಚಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.

ಗುರುವಾರದಿಂದ ಆರಂಭವಾಗಲಿರುವ ಎರಡು ದಿನಗಳ ಬ್ರಿಕ್ಸ್ (BRICS) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಲಾವ್ರೊವ್ ಅವರು ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಈ ಭೇಟಿ ನಡೆದಿದೆ. ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಬ್ರೆಜಿಲ್‌ನ ಮೌರೊ ವಿಯೆರಾ ಮತ್ತು ದಕ್ಷಿಣ ಆಫ್ರಿಕಾದ ಅಂತಾರಾಷ್ಟ್ರೀಯ ಸಂಬಂಧಗಳ ಸಚಿವ ಓಜಿ ಲಮೋಲಾ ಅವರು ಬುಧವಾರವೇ (ಮೇ 13) ದೆಹಲಿಗೆ ಬಂದಿಳಿದಿದ್ದಾರೆ.

ಜೈಶಂಕರ್ ಮತ್ತು ಲಾವ್ರೊವ್ ಅವರು ಪಶ್ಚಿಮ ಏಷ್ಯಾ ಬಿಕ್ಕಟ್ಟು ಹಾಗೂ ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಉಭಯ ದೇಶಗಳ ನಡುವಿನ ಸುದೃಢ ಸಂಬಂಧ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ನಡೆಸಿದ ಸಮಾಲೋಚನೆಯು ಅತ್ಯಂತ ಸಕಾರಾತ್ಮಕವಾಗಿತ್ತು ಎಂದು ಹಂಚಿಕೊಂಡಿದ್ದಾರೆ.

ʼʼಭಾರತ ಬ್ರೋಕರ್‌ ಕೆಲಸ ಮಾಡುವುದಿಲ್ಲʼʼ: ಇರಾನ್‌-ಅಮೆರಿಕ ಮಧ್ಯೆ ಪಾಕಿಸ್ತಾನದ ಮಧ್ಯಸ್ಥಿಕೆ ಬಗ್ಗೆ ಎಸ್. ಜೈಶಂಕರ್ ಹೇಳಿದ್ದೇನು?

ಭಾರತದ ರಷ್ಯಾದ ಕಚ್ಚಾ ತೈಲ ಖರೀದಿ ಮಾತುಕತೆಯಲ್ಲಿ ಸೇರಿಸಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಜೈಶಂಕರ್ ಅವರು ಬ್ರೆಜಿಲ್ ವಿದೇಶಾಂಗ ಸಚಿವ ವಿಯೆರಾ ದಕ್ಷಿಣ ಆಫ್ರಿಕಾದ ಓಝಿ ಲಮೋಲಾ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವಿದೇಶಾಂಗ ಸಚಿವರು ಮಾಲ್ಡೀವಿಯನ್ ವಿದೇಶಾಂಗ ಸಚಿವ ಇರುತಿಶಮ್ ಆಡಮ್ ಅವರನ್ನು ಭೇಟಿಯಾದರು.

ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಶೃಂಗಸಭೆಗೆ ಮುನ್ನ ಈ ವಿದೇಶಾಂಗ ಸಚಿವರ ಸಮಾವೇಶವನ್ನು ಆಯೋಜಿಸುತ್ತಿದೆ. ಆರಂಭದಲ್ಲಿ ಬ್ರೆಜಿಲ್, ರಷ್ಯಾ, ಭಾರತ , ದಕ್ಷಿಣ ಆಫ್ರಿಕಾ ಮತ್ತು ಚೀನಾ ಸೇರಿ ಸ್ಥಾಪಿಸಿದ ಈ ಒಕ್ಕೂಟಕ್ಕೆ 2024 ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರ್ಪಡೆಯಾಯಿತು. 2025 ರಲ್ಲಿ ಇಂಡೋನೇಷ್ಯಾ ಸೇರಿತು.

ಬ್ರಿಕ್ಸ್ ಈಗ ವಿಶ್ವದ 11 ಪ್ರಮುಖ ಉದಯೋನ್ಮುಖ ಆರ್ಥಿಕತೆಗಳನ್ನು ಒಳಗೊಂಡಿರುವ ಅತ್ಯಂತ ಪ್ರಭಾವಶಾಲಿ ಒಕ್ಕೂಟವಾಗಿ ಹೊರಹೊಮ್ಮಿದೆ. ಬ್ರಿಕ್ಸ್ ಸಭೆಯ ಅಧ್ಯಕ್ಷತೆಯನ್ನು ಜೈಶಂಕರ್ ವಹಿಸಲಿದ್ದಾರೆ.