ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೇಂದ್ರದ ಆದೇಶದ ನಂತರ ಪ್ರಯಾಣ ದರ ಮಿತಿ ಜಾರಿಗೆ ತಂದ ಏರ್ ಇಂಡಿಯಾ ಗ್ರೂಪ್; ಹೆಚ್ಚಿನ ಬೆಲೆಯ ಟಿಕೆಟ್‍ಗಳಿಗೆ ಮರುಪಾವತಿ

Air India flight ticket refund: ಕೇಂದ್ರ ಸರ್ಕಾರದ ನಿರ್ದೇಶನದ ನಂತರ ಏರ್ ಇಂಡಿಯಾ ಗ್ರೂಪ್ ಪ್ರಯಾಣ ದರ ಮಿತಿಯನ್ನು ಜಾರಿಗೆ ತಂದಿದೆ. ಹೆಚ್ಚುವರಿ ದರ ಕೊಟ್ಟು ಟಿಕೆಟ್‌ ಖರೀದಿಸಿದ ಪ್ರಯಾಣಿಕರಿಗೆ ಮರುಪಾವತಿ ನೀಡುವುದಾಗಿ ಘೋಷಿಸಿದೆ.

ದರ ಮಿತಿ ಜಾರಿಗೆ ತಂದ ಏರ್ ಇಂಡಿಯಾ ಗ್ರೂಪ್

ಸಂಗ್ರಹ ಚಿತ್ರ -

Priyanka P
Priyanka P Dec 8, 2025 1:57 PM

ನವದೆಹಲಿ, ಡಿ. 8: ಡಿಸೆಂಬರ್ 6ರಂದು ನಾಗರಿಕ ವಿಮಾನಯಾನ ಸಚಿವಾಲಯ (MoCA) ಹೊರಡಿಸಿದ ನಿರ್ದೇಶನಕ್ಕೆ ಅನುಗುಣವಾಗಿ, ಏರ್ ಇಂಡಿಯಾ ಗ್ರೂಪ್ (Air India Group) ತನ್ನ ಎಲ್ಲ ರಿಸರ್ವೇಷನ್‌ ವ್ಯವಸ್ಥೆಗಳಲ್ಲಿ ಹೊಸದಾಗಿ ನಿಗದಿಪಡಿಸಲಾದ ಎಕಾನಮಿ ಕ್ಲಾಸ್ ದರ ಮಿತಿಗಳನ್ನು ಜಾರಿಗೆ ತರಲು ಪ್ರಾರಂಭಿಸಿದೆ. ಕಳೆದ ಕೆಲವು ದಿನಗಳಿಂದ ಇಂಡಿಗೋದಲ್ಲಿ (IndiGo) ಸಾಮೂಹಿಕ ರದ್ದತಿ ಮತ್ತು ಕಾರ್ಯಾಚರಣೆಯ ಅಡಚಣೆಗಳ ನಡುವೆ ವಿಮಾನ ದರಗಳಲ್ಲಿ ತೀವ್ರ ಏರಿಕೆ ಕಂಡುಬಂದ ನಂತರ ಸರ್ಕಾರ ಕ್ರಮ ಕೈಗೊಂಡಿದೆ.

ಮಧ್ಯರಾತ್ರಿಯ ನಂತರ ಬಿಡುಗಡೆಯಾದ ಪ್ರಕಟಣೆಯಲ್ಲಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈಗಾಗಲೇ ಮಿತಿಗೊಳಿಸಿದ ದರ ರಚನೆಗೆ ಪರಿವರ್ತನೆಯನ್ನು ಪೂರ್ಣಗೊಳಿಸಿದೆ ಎಂದು ಹೇಳಿದೆ. ಈ ನಡುವೆ, ಏರ್ ಇಂಡಿಯಾ ತನ್ನೆಲ್ಲ ಬುಕ್ಕಿಂಗ್‌ ಚಾನಲ್‌ಗಳಲ್ಲಿ ಪರಿಷ್ಕೃತ ದರಗಳನ್ನು ಹಂತ ಹಂತವಾಗಿ ಅನ್ವಯಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಬದಲಾವಣೆಗಳು ವ್ಯವಸ್ಥೆಯಾದ್ಯಂತ ಪ್ರತಿಫಲಿಸುವ ನಿರೀಕ್ಷೆಯಿದೆ.

6ನೇ ದಿನವೂ ಮುಂದುವರಿದ ಇಂಡಿಗೋ ಸಮಸ್ಯೆ; 650 ವಿಮಾನ ಹಾರಾಟ ರದ್ದು, ಪ್ರಯಾಣಿಕರು ಸುಸ್ತು

ವ್ಯವಸ್ಥೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ನಡೆಯುತ್ತಿರುವ ಬುಕ್ಕಿಂಗ್‌ಗಳಿಗೆ ಮತ್ತಷ್ಟು ಅಡ್ಡಿಯಾಗುವುದನ್ನು ತಪ್ಪಿಸಲು ಹಂತ ಹಂತವಾಗಿ ಜಾರಿಗೊಳಿಸುವುದು ಅತ್ಯಗತ್ಯ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಏರ್‌ ಇಂಡಿಯಾ ಸಂಸ್ಥೆಯುಂದ ರಿಫಂಡ್‌:



ಈ ಪ್ರಕ್ರಿಯೆಯು ಥರ್ಡ್‌ ಪಾರ್ಟಿ ವ್ಯವಸ್ಥೆಯ ಅವಲಂಬನೆಗಳನ್ನು ಒಳಗೊಂಡಿರುವುದರಿಂದ, ಬುಕ್ಕಿಂಗ್‌ಗಳಿಗೆ ಅಡ್ಡಿಯಾಗದಂತೆ ನಿಖರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ಹೊಸದಾಗಿ ಕಡ್ಡಾಯಗೊಳಿಸಿದ ಮಿತಿಗಳಿಗಿಂತ ಹೆಚ್ಚಿನ ಮೂಲ ದರದಲ್ಲಿ ಎಕಾನಮಿ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ವ್ಯತ್ಯಾಸದ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಏರ್ ಇಂಡಿಯಾ ಘೋಷಿಸಿದೆ. ದರ ಮರುಮಾಪನದಿಂದ ಪರಿಣಾಮ ಬೀರುವ ಎಲ್ಲ ಏರ್ ಇಂಡಿಯಾ ವಿಮಾನಗಳಲ್ಲಿ ಇದು ಅನ್ವಯಿಸುತ್ತದೆ.

ಇಂಡಿಗೋ ವಿಮಾನ ಹಾರಾಟ ವ್ಯತ್ಯಯ: ಪಿಜಿ ನೀಟ್‌ ಪರೀಕ್ಷೆ ಮುಂದೂಡಿಕೆ

ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ವ್ಯಾಪಕ ವಿಮಾನ ಹಾರಾಟದ ಅಡಚಣೆಗಳು ಹಲವು ದೇಶೀಯ ಮಾರ್ಗಗಳಲ್ಲಿ ದರ ಏರಿಕೆಗೆ ಕಾರಣವಾದ ನಂತರ, ಸರ್ಕಾರವು ವಿಮಾನಯಾನ ಬೆಲೆ ಮತ್ತು ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸುತ್ತಿದೆ. ಅದರ ಪರಿಣಾಮವಾಗಿ ಈ ಕ್ರಮ ಜಾರಿಯಾಗಿದೆ. ಬಿಕ್ಕಟ್ಟು ಸಹಜ ಸ್ಥಿತಿಯತ್ತ ಮರಳುತ್ತಿದ್ದು ಎಲ್ಲ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ದರಗಳು ಸಮಂಜಸವಾದ ಮಿತಿಗಳಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ.

ಈಗ ದರ ಮಿತಿಗಳನ್ನು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರಲಾಗುತ್ತಿರುವುದರಿಂದ, ನಡೆಯುತ್ತಿರುವ ಸಂಕಷ್ಟದಿಂದ ಉಂಟಾಗಿರುವ ಕಾರ್ಯಾಚರಣೆಯ ಅಡಚಣೆಗಳನ್ನು ವಿಮಾನಯಾನ ಸಂಸ್ಥೆಗಳು ಪರಿಹರಿಸುತ್ತಿರುವ ನಡುವೆಯೇ, ಅವು ತಮ್ಮ ವೇಳಾಪಟ್ಟಿಗಳು ಮತ್ತು ದರಗಳನ್ನು ಸ್ಥಿರಗೊಳಿಸಲಿವೆ ಎಂದು ಪ್ರಯಾಣಿಕರು ನಿರೀಕ್ಷಿಸಿದ್ದಾರೆ.