Operation Trashi-1: ಮಳೆಗೆ ಕುಗ್ಗಿಲ್ಲ, ಚಳಿಗೆ ತಗ್ಗಿಲ್ಲ; ಉಗ್ರರ ವಿರುದ್ಧ ಭಾರತೀಯ ಸೇನೆಯಿಂದ ನಿರಂತರ ಕಾರ್ಯಾಚರಣೆ: 7 ಪಾಕಿಸ್ತಾನ ಭಯೋತ್ಪಾಕರು ಫಿನಿಷ್
Jammu and Kashmir: ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತೀಯ ಸೇನೆ ʼಆಪರೇಷನ್ ಟ್ರಾಶಿ-1ʼ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸುತ್ತಿದೆ. ಕಾರ್ಯಾಚರಣೆ ಆರಂಭಿಸಿ 326 ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 7 ಉಗ್ರರನ್ನು ಹೊಡೆದುರುಳಿಸಲಾಗಿದೆ. ಆ ಮೂಲಕ ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ, ಸಾಹಸ ಮತ್ತು ತ್ಯಾಗಕ್ಕೆ ಈ ಆಪರೇಷನ್ ಉತ್ತಮ ಉದಾಹರಣೆ ಎನಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ -
ಶ್ರೀನಗರ, ಫೆ. 23: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಉಗ್ರವಾದವನ್ನು ಬೇರು ಸಮೇತ ಕಿತ್ತು ಹಾಕಲು ಪಣ ತೊಟ್ಟಿರುವ ಕೇಂದ್ರ ಸರ್ಕಾರ ʼಆಪರೇಷನ್ ಟ್ರಾಶಿ-1ʼ (Operation Trashi-1) ಕಾರ್ಯಾಚರಣೆ ನಡೆಸುತ್ತಿದ್ದು, ನಮ್ಮ ಭದ್ರತಾ ಪಡೆಗಳು ಮೇಲುಗೈ ಸಾಧಿಸಿವೆ. ಕಾರ್ಯಾಚರಣೆ ಆರಂಭಿಸಿ 326 ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 7 ಉಗ್ರರನ್ನು ಹೊಡೆದುರುಳಿಸಲಾಗಿದೆ. ಭಾರತೀಯ ಸೇನೆ, ಪೊಲೀಸ್ ವಿಶೇಷ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ Chikkaballapur News: ಸದಾಕಾಲ ಗುರುಚಿಂತನೆ ಮಾಡುವವರು ಸಹಜಯೋಗಿಗಳು: ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್(Jammu and Kashmir) ಈ ಕಾರ್ಯಾಚರಣೆ ನಡೆಸುತ್ತಿದೆ.
ಕಾಡು, ಬೆಟ್ಟ, ಗುಡ್ಡಗಳಲ್ಲಿ ಮಳೆ, ಚಳಿ, ಗಾಳಿ ಎನ್ನದೆ ಭದ್ರತಾ ಪಡೆಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ, ಸಾಹಸ ಮತ್ತು ತ್ಯಾಗಕ್ಕೆ ಈ ಆಪರೇಷನ್ ಉತ್ತಮ ಉದಾಹರಣೆ ಎನಿಸಿಕೊಂಡಿದೆ.
ವೈಟ್ ನೈಟ್ ಕಾರ್ಪ್ಸ್‌ನ ಎಕ್ಸ್ ಪೋಸ್ಟ್:
#𝗪𝗵𝗶𝘁𝗲𝗞𝗻𝗶𝗴𝗵𝘁𝗖𝗼𝗿𝗽𝘀 | #𝗚𝗮𝗹𝗹𝗮𝗻𝘁𝗣𝗲𝗿𝘀𝗲𝘃𝗲𝗿𝗮𝗻𝗰𝗲
— White Knight Corps (@Whiteknight_IA) February 23, 2026
𝗘𝗹𝗶𝗺𝗶𝗻𝗮𝘁𝗶𝗼𝗻 𝗼𝗳 𝗧𝗲𝗿𝗿𝗼𝗿𝗶𝘀𝘁𝘀
Relentless and painstaking high-altitude joint operations were conducted over 326 days in the Kishtwar region. Forces tracked terrorists in challenging… pic.twitter.com/nIhH71RiOb
7 ಉಗ್ರರು ಹತ
326 ದಿನಗಳ ಈ ಕಾರ್ಯಾಚರಣೆಯಲ್ಲಿ ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಕಿಶ್‌ತ್ವಾರ್‌ನಲ್ಲಿ 7 ಉಗ್ರರನ್ನು ಹೊಡೆದುರುಳಿಸಲಾಗಿದೆ. ಪಾಕಿಸ್ತಾನದ ಸೇನೆಯಿಂದ ತರಬೇತಿ ಪಡೆದ ಉಗ್ರರು ಕಡಿದಾದ ಬೆಟ್ಟ ಮತ್ತು ದಟ್ಟ ಅರಣ್ಯವನ್ನು ಅಡಗುತಾಣವನ್ನಾಗಿಸಿಕೊಂಡಿದ್ದಾರೆ. ಹೀಗಾಗಿ ಸುಮಾರು 1 ವರ್ಷದಿಂದ ಭದ್ರತಾ ಪಡೆ ಬೆಟ್ಟದ ತಪ್ಪಲಿನಲ್ಲಿ ಬೀಡು ಬಿಟ್ಟಿದೆ. ಈ ಪ್ರದೇಶದಲ್ಲಿ ಎನ್‌ಕೌಂಟರ್, ಗುಂಡಿನ ಮೊರೆತ ಆಗಾಗ ಕೇಳಿ ಬರುತ್ತಲೇ ಇದೆ. ಉಗ್ರರು ನಮ್ಮ ಸೇನೆಯ ಮೇಲೆ ದಾಳಿ ನಡೆಸಿ ಮತ್ತೆ ದಟ್ಟ ಅರಣ್ಯದಲ್ಲಿ ಬಟ್ಟಿಟ್ಟುಕೊಳ್ಳುತ್ತಿದ್ದಾರೆ. ಸಮರ್ಪಕ ರಸ್ತೆ ಬಿಡಿ, ಓಡಾಡಲು ದಾರಿಯೂ ಇಲ್ಲದಿರುವುದು ಕಾರ್ಯಾಚರಣೆಗೆ ಬಹುದೊಡ್ಡ ಸವಾಲು ಎನಿಸಿಕೊಂಡಿದೆ.
ಚಳಿಗೂ ಕುಗ್ಗಿಲ್ಲ, ಮಳೆಗೂ ಬೆದರಿಲ್ಲ
ನಮ್ಮ ಸೇನೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಇಟ್ಟ ಹೆಜ್ಜೆಯಿಂದ ಹಿಂದಕ್ಕೆ ಸರಿದಿಲ್ಲ. ಮೈ ನಡುಗಿಸುವ ಮಳೆ ಇರಲಿ, ಮೈ ಕೊರೆವ ಚಳಿ ಇರಲಿ ಕಾರ್ಯಾಚರಣೆ ಮುಂದುವರಿಸಿದೆ. ಬೆಟ್ಟ-ಗುಡ್ಡ, ಕಾಡು-ಮೇಡು ಎನ್ನದೆ ನಿರಂತರವಾಗಿ ಅಲೆದಾಡಿದೆ.
2 ವರ್ಷ 20 ಬಾರಿ ತಪ್ಪಿಸಿಕೊಂಡಿದ್ದ ಪಾಕಿಸ್ತಾನ ಉಗ್ರ ಸೈಫುಲ್ಲಾನನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಕಾರ್ಯಾಚರಣೆ ಭಾರಿ ಯಶಸ್ಸು
ಸೇನಾ ಸಿಬ್ಬಂದಿಯ ಬದ್ಧತೆಯಿಂದ ಈ ʼಆಪರೇಷನ್ ಟ್ರಾಶಿ-1ʼ ಕಾರ್ಯಾಚರಣೆ ಭಾರಿ ಯಶಸ್ವಿಯಾಗಿದೆ. ಹಲವು ವರ್ಷಗಳಿಂದ ತಪ್ಪಿಸಿಕೊಳ್ಳುತ್ತಿದ್ದ, ಇದೇ ಪ್ರದೇಶದಲ್ಲಿ ಅಡಗಿಕೊಂಡಿದ್ದ, ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ (JeM) ಉನ್ನತ ಕಮಾಂಡರ್, ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಸೈಫುಲ್ಲಾ ಸೇರಿದಂತೆ ಉನ್ನತ ನಾಯಕರನ್ನು ಹೊಡೆದುರುಳಿಸಲಾಗಿದೆ. 2016ರಲ್ಲಿ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದ ಮತ್ತೊಬ್ಬ ಭಯೋತ್ಪಾದಕ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಬುರ್ಹಾನ್ ವಾನಿಯಂತೆ ಜೆಇಎಂನ ಸೈಫುಲ್ಲಾ ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದ. ಅವನ ನಿರ್ಮೂಲನೆಯೊಂದಿಗೆ ಭಯೋತ್ಪಾದಕ ಜಾಲಕ್ಕೆ ಬಲವಾದ ಪ್ರಹಾರವನ್ನೇ ನೀಡಿದಂತಾಗಿದೆ.
ಪಾಕ್‌ನ ಸಾರ್ವಜನಿಕ ರ್‍ಯಾಲಿಯಲ್ಲಿ ಪಹಲ್ಗಾಮ್ ದಾಳಿ ರೂವಾರಿ; ರಾಜಕೀಯ ನಾಯಕರ ಜೊತೆ ಕಾಣಿಸಿಕೊಂಡ ಸೈಫುಲ್ಲಾ
ಮಳೆ ಮತ್ತು ಹಿಮದ ನಡುವೆಯೂ ಎತ್ತರದ ಛಾತ್ರೂ ಪ್ರದೇಶದಲ್ಲಿ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಈ ಕಠಿಣ ಕಾರ್ಯಾಚರಣೆಯನ್ನು ಮುನ್ನಡೆಸಿದೆ. ಜತೆಗೆ ಸ್ಥಳೀಯ ನಿವಾಸಿಗಳ ಬೆಂಬಲ ಮತ್ತು ನಿಖರವಾದ ಮಿಲಿಟರಿ ಗುಪ್ತಚರ ಮಾಹಿತಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭದ್ರತಾ ಪಡೆಗಳು ಡ್ರೋನ್‌ಗಳು, ಮಾನವ ರಹಿತ ವೈಮಾನಿಕ ವಾಹನಗಳು ಮತ್ತು ಉಪಗ್ರಹ ಚಿತ್ರಣಗಳನ್ನು ಒಳಗೊಂಡಂತೆ ಹೈಟೆಕ್ ಯುದ್ಧ ಹೋರಾಟ ಉಪಕರಣಗಳ ಮೂಲಕ ಉಗ್ರವಾದದ ವಿರುದ್ಧ ಸಮರ ಸಾರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.