ಕರ್ತವ್ಯ ನಿರತ ಏರ್ ಇಂಡಿಯಾ ಪೈಲಟ್ ಹೃದಯಾಘಾತದಿಂದ ಸಾವು
Air India Pilot Dies of Heart Attack: ಭಾರತೀಯ ಪೈಲಟ್ ಒಬ್ಬರು ಇಂಡೋನೇಷ್ಯಾದಲ್ಲಿ ಮೃತಪಟ್ಟಿದ್ದಾರೆ. ನಿಗದಿತ ವಿಶ್ರಾಂತಿಯಲ್ಲಿದ್ದ ಏರ್ ಇಂಡಿಯಾ ಪೈಲಟ್ ಬುಧವಾರ (ಏ.29) ಬಾಲಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಪೈಲಟ್ ಬಾಲಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅಸ್ವಸ್ಥತೆ ಉಂಟಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.
ಸಾಂದರ್ಭಿಕ ಚಿತ್ರ -
ನವದೆಹಲಿ, ಏ.30: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಯಾವುದೇ ಅನಾರೋಗ್ಯ ಸಮಸ್ಯೆ ಇಲ್ಲದವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಭಾರತೀಯ ಪೈಲಟ್ ಒಬ್ಬರು ಇಂಡೋನೇಷ್ಯಾದಲ್ಲಿ ಮೃತಪಟ್ಟಿದ್ದಾರೆ. ನಿಗದಿತ ವಿಶ್ರಾಂತಿಯಲ್ಲಿದ್ದ ಏರ್ ಇಂಡಿಯಾ ಪೈಲಟ್ (Air India Pilot) ಬುಧವಾರ (ಏ.29) ಬಾಲಿಯಲ್ಲಿ ಹೃದಯಾಘಾತದಿಂದ (Heart Attack) ನಿಧನರಾದರು. ಸುಮಾರು 40 ವರ್ಷ ವಯಸ್ಸಿನ ಪೈಲಟ್ ಮಂಗಳವಾರ (ಏ.28) ದೆಹಲಿಯಿಂದ ಬಾಲಿಗೆ ವಿಮಾನ ಹಾರಾಟ ನಡೆಸಿದರು ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏರ್ ಇಂಡಿಯಾ ವಕ್ತಾರರು ನೀಡಿದ ಹೇಳಿಕೆಯ ಪ್ರಕಾರ, ಮೊದಲ ಪೈಲಟ್ ಬಾಲಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ನಿಗದಿತ ಸಿಬ್ಬಂದಿ ತಮ್ಮ ಹೋಟೆಲ್‌ನಲ್ಲಿ ವಿಶ್ರಾಂತಿಯಲ್ಲಿದ್ದಾಗ ಅವರು ತೀವ್ರ ಅನಾರೋಗ್ಯದ ಬಗ್ಗೆ ದೂರು ನೀಡಿದರು. ಕೂಡಲೇ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಹೃದಯಾಘಾತವಾಗಿದೆ ಎಂಬುದು ತಿಳಿದುಬಂತು ವೈದ್ಯಕೀಯ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಪೈಲಟ್ ನಿಧನದಿಂದ ಏರ್ ಇಂಡಿಯಾ ತೀವ್ರ ದುಃಖಿತವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಮೃತರ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿದರು.
ಹೃದಯಾಘಾತ: ಕೇವಲ 16 ನಿಮಿಷಗಳಲ್ಲಿ ತುರ್ತು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ: ಬದುಕುಳಿದ ರೋಗಿ
ಕೆಲವು ತಿಂಗಳ ಹಿಂದೆಯಷ್ಟೇ ಪೈಲಟ್ ಎಲ್ಲಾ ಕಡ್ಡಾಯ ವೈದ್ಯಕೀಯ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದರು ಎಂದು ವಿಮಾನಯಾನ ಅಧಿಕಾರಿ ತಿಳಿಸಿದ್ದಾರೆ. ಈ ವೇಳೆ ಯಾವುದೇ ಅನಾರೋಗ್ಯ ಕಂಡು ಬಂದಿರಲಿಲ್ಲ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೂಚಿಸಿದ ಹಾರಾಟದ ಗಂಟೆಗಳ ಮಿತಿಯೊಳಗೆ ಪೈಲಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದರು.
ದೈಹಿಕ ಶಿಕ್ಷಕ ಹೃದಯಾಘಾತದಿಂದ ನಿಧನ
ಮಧ್ಯಪ್ರದೇಶದ ಭೋಪಾಲ್‌ನ ರತಿಬಾದ್ ಪ್ರದೇಶದ ಖಾಸಗಿ ಶಾಲೆಯ 29 ವರ್ಷದ ದೈಹಿಕ ಶಿಕ್ಷಕರೊಬ್ಬರಿಗೆ ಶಾಲಾ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ನಂತರ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ನಿಜವಾದ ಕಾರಣವನ್ನು ಕಂಡುಹಿಡಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಕಮಲಾ ನಗರದ ನಿವಾಸಿ ಸೌರಭ್ ಖತಿಕ್ (29) ಎಂಬಾತ ಮೃತ ವ್ಯಕ್ತಿಯಾಗಿದ್ದು, ಕ್ರೀಡಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಖಾಸಗಿ ಕ್ರಿಕೆಟ್ ಅಕಾಡೆಮಿಯನ್ನೂ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಸೌರಭ್ ಬೆಳಿಗ್ಗೆ ಎಂದಿನಂತೆ ಶಾಲೆಗೆ ತಲುಪಿದ್ದರು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಅವರಿಗೆ ಎದೆ ನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿತು.
ಸಹೋದ್ಯೋಗಿಯೊಬ್ಬರು ತಕ್ಷಣ ಅವರನ್ನು ರಾತಿಬಾದ್‌ನಲ್ಲಿರುವ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಹಬೀಬ್‌ಗಂಜ್ ಪ್ರದೇಶದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹಮೀದಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆದರೆ, ಸೌರಭ್ ದಾರಿ ಮಧ್ಯೆ ಮೃತಪಟ್ಟರು.