ಅಮೆಜಾನ್ ಏರ್ ಈಶಾನ್ಯ ಭಾರತಕ್ಕೆ ವಿಸ್ತರಣೆ, ಹಿಂದಿಗಿಂತ 5X ವೇಗದಲ್ಲಿ ಡೆಲಿವರಿ
ತನ್ನ ಬಹುಮಾದರಿ ಲಾಜಿಸ್ಟಿಕ್ಸ್ ಮೂಲಸೌಕರ್ಯಕ್ಕೆ ವಿಶೇಷ ವಾಯು ಸಾಮರ್ಥ್ಯವನ್ನು ಸೇರ್ಪಡೆ ಮಾಡುವ ಮೂಲಕ ಅಮೆಜಾನ್ ಸಾಗಣೆ ಸಮಯವನ್ನು ಕಡಿಮೆ ಮಾಡುವ ಮತ್ತು ಐದು ಪಟ್ಟು ಡೆಲಿವರಿ ವೇಗಗಳನ್ನು ಹೆಚ್ಚಿಸುವ ಮೂಲಕ ಈ ಪ್ರದೇಶದ ಗ್ರಾಹಕರಿಗೆ ಪ್ರತಿನಿತ್ಯ ದ ಅಗತ್ಯಗಳಿಂದ ಸ್ಮಾರ್ಟ್ ಫೋನ್ ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಬ್ಯೂಟಿ ಮತ್ತಿತರೆ ಉತ್ಪನ್ನಗಳು ವೇಗವಾಗಿ ಲಭ್ಯ ವಾಗುವಂತೆ ಮಾಡುತ್ತಿದೆ.
-
ನವದೆಹಲಿ/ಗುವಾಹಟಿ: ಅಮೆಜಾನ್ ಇಂದು ಕೊಲ್ಕತಾ ಮತ್ತು ಗುವಾಹಟಿಯನ್ನು ಸಂಪರ್ಕಿಸುವ ಹೊಸ ಏರ್ ಕಾರ್ಗೊ ಮಾರ್ಗಗಳ ಮೂಲಕ ಈಶಾನ್ಯ ಭಾರತಕ್ಕೆ ಅಮೆಜಾನ್ ಏರ್ ವಿಸ್ತರಣೆಯನ್ನು ಪ್ರಕಟಿಸಿದ್ದು ಇದು ಈ ಪ್ರದೇಶದಾದ್ಯಂತ ತನ್ನ ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಮತ್ತಷ್ಟು ಸದೃಢಗೊಳಿಸಿದೆ.
ಈ ವಿಶೇಷ ವಾಯು ಸಾಮರ್ಥ್ಯದ ಸೇರ್ಪಡೆಯು ಪೂರೈಕೆಯ ವೇಗ ಮತ್ತು ವಿಶ್ವಾಸಾರ್ಹತೆ ಯನ್ನು ಗಮನಾರ್ಹ ವಾಗಿ ಹೆಚ್ಚಿಸಲಿದ್ದು ಈಶಾನ್ಯ ಭಾರತದಾದ್ಯಂತ ಅಮೆಜಾನ್ ನ ವಿಸ್ತಾರ ಉತ್ಪನ್ನಗಳ ಆಯ್ಕೆಯನ್ನು ವೇಗ ಮತ್ತು ಹೆಚ್ಚು ಸ್ಥಿರವಾದ ಪೂರೈಕೆಯೊಂದಿಗೆ ನೀಡುತ್ತದೆ.
ಈ ಸೇವೆಯು ಎಲ್ಲ ಸಪ್ತ ಸೋದರಿಯರ ರಾಜ್ಯಗಳಲ್ಲಿ ಅಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೊರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ಅಮೆಜಾನ್ ನ ಏಕೀಕೃತ ವಾಯು ಮತ್ತು ಭೂಮಿಯ ಸಾರಿಗೆ ಜಾಲದ ಮೂಲಕ ಬೆಂಬಲಿಸಲಿದೆ.
ತನ್ನ ಬಹುಮಾದರಿ ಲಾಜಿಸ್ಟಿಕ್ಸ್ ಮೂಲಸೌಕರ್ಯಕ್ಕೆ ವಿಶೇಷ ವಾಯು ಸಾಮರ್ಥ್ಯವನ್ನು ಸೇರ್ಪಡೆ ಮಾಡುವ ಮೂಲಕ ಅಮೆಜಾನ್ ಸಾಗಣೆ ಸಮಯವನ್ನು ಕಡಿಮೆ ಮಾಡುವ ಮತ್ತು ಐದು ಪಟ್ಟು ಡೆಲಿವರಿ ವೇಗಗಳನ್ನು ಹೆಚ್ಚಿಸುವ ಮೂಲಕ ಈ ಪ್ರದೇಶದ ಗ್ರಾಹಕರಿಗೆ ಪ್ರತಿನಿತ್ಯದ ಅಗತ್ಯಗಳಿಂದ ಸ್ಮಾರ್ಟ್ ಫೋನ್ ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಬ್ಯೂಟಿ ಮತ್ತಿತರೆ ಉತ್ಪನ್ನಗಳು ವೇಗವಾಗಿ ಲಭ್ಯ ವಾಗುವಂತೆ ಮಾಡುತ್ತಿದೆ.
ಇದನ್ನೂ ಓದಿ: Bangalore News: ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಶ್ರೇಷ್ಠತಾ ಕೇಂದ್ರದ (ಸೈಸೆಕ್) ವಾರ್ಷಿಕ ವರದಿಯಲ್ಲಿ ನೀಡಿರುವ ಎಚ್ಚರಿಕೆ
ಗುವಾಹಟಿಗೆ ಅಮೆಜಾನ್ ಏರ್ ಉದ್ಘಾಟನಾ ವಿಮಾನಕ್ಕೆ ನವದೆಹಲಿಯಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು (Civil Aviation Minister Ram Mohan Naidu Kinjarapu)ಉದ್ಘಾಟಿಸಿದರು, ಅವರೊಂದಿಗೆ ಅಮೆಜಾನ್ ಭಾರತ ಮತ್ತು ಆಸ್ಟ್ರೇಲಿಯಾದ ಆಪರೇಷನ್ಸ್ ಉಪಾಧ್ಯಕ್ಷ ಅಭಿನವ್ ಸಿಂಗ್ ಹಾಗೂ ಅಮೆಜಾನ್ ಇಂಡಿಯಾದ ಪಬ್ಲಿಕ್ ಪಾಲಿಸಿಯ ವಿ.ಪಿ.ಚೇತನ್ ಕೃಷ್ಣಸ್ವಾಮಿ ಉಪಸ್ಥಿತರಿದ್ದರು.
“ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಅವರ ಆದ್ಯತೆಯು ಈಶಾನ್ಯ ಪ್ರದೇಶವಾಗಿದ್ದು ಅದಕ್ಕೆ `ಆಕ್ಟ್ ಈಸ್ಟ್, ಆಕ್ಟ್ ಫಾಸ್ಟ್, ಆಕ್ಟ್ ಫರ್ಸ್ಟ್’ ಎಂಬ ಧ್ಯೇಯ ಹೊಂದಿದ್ದಾರೆ, ಈಶಾನ್ಯ ಪ್ರದೇಶಕ್ಕೆ ಮೂಲಸೌಕರ್ಯ ಸಂಪರ್ಕವು ಹಲವು ಪಟ್ಟು ವೃದ್ಧಿಸಿದೆ. ಇಂದು ಈಶಾನ್ಯದ ಪ್ರತಿ ರಾಜ್ಯವೂ ವಿಮಾನ ನಿಲ್ದಾಣ ಹೊಂದಿದೆ ಮತ್ತು 2014ರಲ್ಲಿ 9 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದು ಇಂದು 16ಕ್ಕೆ ಏರಿದೆ. ತೋಟಗಾರಿಕೆ ಮತ್ತು ಕಾರ್ಗೊ ರಫ್ತು ಗಳಿಗೆ ಈಶಾನ್ಯದ ಅಪಾರ ಸಾಮರ್ಥ್ಯದಿಂದ ದೆಹಲಿಯಿಂದ ಗುವಾಹಟಿಗೆ ಅಮೆಜಾನ್ ಏರ್ ಕಾರ್ಗೊ ಮಾರ್ಗದ ವಿಸ್ತರಣೆಯು ಈಶಾನ್ಯದ ರೈತರು, ಕರಕುಶಲ ಕರ್ಮಿಗಳು ಮತ್ತು ಉದ್ಯಮಿಗಳಿಗೆ ಮತ್ತಷ್ಟು ಬೆಂಬಲಿಸಲಿದೆ.
ಬಜೆಟ್ 2026ರಲ್ಲಿ ಏರ್ ಕಾರ್ಗೊ ಮೂಲಸೌಕರ್ಯಕ್ಕೆ ಹಾಗೂ ದಾಸ್ತಾನು ಮಳಿಗೆ ಸಾಮರ್ಥ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು ಇದು ಕಳಿಯಬಲ್ಲ ಮತ್ತು ಹೆಚ್ಚಿನ ಮೌಲ್ಯದ ಉತ್ಪನ್ನಗಳಲಾಜಿಸ್ಟಿಕ್ಸ್ ಅನ್ನು ಸದೃಢಗೊಳಿಸಲಿದೆ. ಹೆಚ್ಚುವರಿಯಾಗಿ ಕೊರಿಯರ್ ರಫ್ತುಗಳ ಮೌಲ್ಯದ ಮಿತಿಯನ್ನು ನಿವಾರಿಸಿದ್ದು ಅದು ಗಡಿಯಾಚೆಗಿನ ಇ-ಕಾಮರ್ಸ್ ಉತ್ತೇಜಿಸಲು ನೆರವಾಗುತ್ತದೆ. ಮತ್ತು ಇಂದಿನ ಮೈಲಿಗಲ್ಲಿನ ಪ್ರಾರಂಭದ ಮೂಲಕ ದೇಶದಲ್ಲಿ ವೈಮಾನಿಕ ಜಾಲ ಸೇರ್ಪಡೆ ಮಾಡುತ್ತಿರುವುದಕ್ಕೆ ಅಮೆಜಾನ್ ಗೆ ನಾನು ಅಭಿನಂದಿಸುತ್ತೇನೆ” ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ಹೇಳಿದರು.
“ಉನ್ನತೀಕರಿಸಿದ ಲಾಜಿಸ್ಟಿಕ್ಸ್ ಸಂಪರ್ಕವು ಸ್ಥಳೀಯ ಉದ್ಯಮಿಗಳ ಸಬಲೀಕರಣ ಮತ್ತು ಉದ್ಯಮಗಳಿಗೆ ಮಾರುಕಟ್ಟೆ ಲಭ್ಯತೆ ಹೆಚ್ಚಿಸುವಲ್ಲಿ ಹಾಗೂ ಈಶಾನ್ಯದಲ್ಲಿ ಉದ್ಯೋಗಾ ವಕಾಶ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಪ್ರದೇಶದ ಮಾರಾಟಗಾರರಿಗೆ ಗುವಾಹಟಿಗೆ ಅಮೆಜಾನ್ ಏರ್ ಸೇವೆಗಳ ಪ್ರಾರಂಭವು ಉದ್ಯಮಗಳಿಗೆ ದೇಶಾದ್ಯಂತ ಗ್ರಾಹಕರೊಂದಿಗೆ ಸಂಪರ್ಕ ಒದಗಿಸಿದೆ. ಸುಧಾರಿತ ಫುಲ್ ಫಿಲ್ಮೆಂಟ್ ವೇಗದಿಂದ ಉದ್ಯಮಗಳು ವಿಸ್ತಾರ ಗ್ರಾಹಕರನ್ನು ತಲುಪಬಹುದ ಮತ್ತು ಭಾರತದ ತೀವ್ರವಾಗಿ ಬೆಳೆಯುತ್ತಿರುವ ಡಿಜಿಟಲ್ ಅರ್ಥವ್ಯವಸ್ಥೆಗೆ ಹೆಚ್ಚು ಅರ್ಥಪೂರ್ಣವಾಗಿ ಕೊಡುಗೆ ನೀಡಬಲ್ಲದು ಅಲ್ಲದೆ ಅಸ್ಸಾಂನಾದ್ಯಂತ ಗ್ರಾಹಕರಿಗೆ ಹಾಗೂ ಸಮುದಾಯಗಳಿಗೆ ಮತ್ತು ಈಶಾನ್ಯ ಪ್ರದೇಶಕ್ಕೆ ವೇಗ ಮತ್ತು ವಿಶ್ವಾಸಾರ್ಹ ಪೂರೈಕೆಗಳನ್ನು ಸಾಧಿಸಬಹುದು.
ಲಾಜಿಸ್ಟಿಕ್ಸ್ ಮೂಲಸೌಕರ್ಯದಲ್ಲಿ ಈ ರೀತಿಯ ಸುಧಾರಣೆಗಳು ಸ್ಥಳೀಯ ಯುವಜನರಿಗೆ ಗಮನಾರ್ಹ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುವ ನಿರೀಕ್ಷೆ ಇದೆ. ಅಮೆಜಾನ್ ಏರ್ ಸೇವೆಗಳ ಕಾರ್ಯಾರಂಭವು ಉದ್ಯೋಗ ಸೃಷ್ಟಿಗೆ ಹಾಗೂ ಈ ಪ್ರದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ ಬೆಂಬಲಿಸುತ್ತದೆ” ಎಂದು ಅಸ್ಸಾಂ ಮುಖ್ಯ ಕಾರ್ಯದರ್ಶಿ ಡಾ. ರವಿ ಕೋಟ ಹೇಳಿದರು.
“2013ರಲ್ಲಿ ಅಮೆಜಾನ್.ಇನ್ ಪ್ರಾರಂಭವಾದ ದಿನದಿಂದಲೂ ನಾವು ಸತತವಾಗಿ ಭಾರತದ ಅತ್ಯಂತ ದೊಡ್ಡ ಲಾಜಿಸ್ಟಿಕ್ಸ್ ಜಾಲಗಳನ್ನು ನಿರ್ಮಿಸಲು ಸತತವಾಗಿ ಹೂಡಿಕ ಮಾಡು ತ್ತಿದ್ದು ಗ್ರಾಹಕರಿಗೆ ಅವರ ವಾಸಿಸುವ ಸ್ಥಳದಲ್ಲಿ ಸೇವೆ ನೀಡುತ್ತಿದ್ದೇವೆ. ಈಶಾನ್ಯಕ್ಕೆ ಅಮೆಜಾನ್ ಏರ್ ವಿಸ್ತರಣೆಯು ಈ ಹೂಡಿಕೆಗಳ ಸಹಜ ಪ್ರಗತಿಯಾಗಿದೆ ಮತ್ತು ದೇಶಾ ದ್ಯಂತ ಕನೆಕ್ಟಿವಿಟಿ ಸದೃಢಗೊಳಿಸಲು ನಮ್ಮ ದೀರ್ಘಾವಧಿ ಬದ್ಧತೆಯನ್ನು ತೋರಿಸಿದೆ.
ಇದು ಲಾಜಿಸ್ಟಿಕ್ಸ್ ಮೂಲಸೌಕರ್ಯಕ್ಕೆ ಸರ್ಕಾರದ ಆದ್ಯತೆಗ ಪೂರಕವಾಗಿದೆ ಮತ್ತು ಈ ಪ್ರದೇಶಕ್ಕೆ ಆರ್ಥಿಕ ಅವಕಾಶ ತೆರೆಯುತ್ತಿದೆ. ಗ್ರಾಹಕರಿಗೆ ಇದೆಂದರೆ ಹಿಂದಿಗಿಂತ ಅಮೆಜಾನ್ ವಿಸ್ತಾರ ಆಯ್ಕೆಯನ್ನು 5 ಪಟ್ಟು ವೇಗ ನೀಡಿದ್ದು, ಈಶಾನ್ಯ ಪ್ರದೇಶದ ಮಾರಾಟಗಾರರು ಮತ್ತು ಉದ್ಯಮಿಗಳು ಈಗ ಭಾರತದಾದ್ಯಂತ ವೇಗ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿ ಗ್ರಾಹಕರನ್ನು ತಲುಪಬಹುದು” ಎಂದು ಅಮೆಜಾನ್ ಭಾರತ ಮತ್ತು ಆಸ್ಟ್ರೇಲಿಯಾದ ಆಪರೇಷನ್ಸ್ ವಿ.ಪಿ. ಅಭಿನವ್ ಸಿಂಗ್ ಹೇಳಿದರು.
*
- ಮಾನ್ಯ ನಾಗರಿಕ ವಿಮಾನಯಾನ ಸಚಿವ ಶ್ರೀ ರಾಮ್ ಮೋಹನ್ ನಾಯ್ಡು ಕಿಂಜರಪು ಅವರಿಂದ ಗುವಾಹಟಿಗೆ ಮೊದಲ ಅಮೆಜಾನ್ ಏರ್ ವಿಮಾನಕ್ಕೆ ಚಾಲನೆ
- ಭಾರತದಲ್ಲಿ ವಿಶೇಷ ಏರ್ ಕಾರ್ಗೊ ಜಾಲದ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಏಕೈಕ ಇ-ಕಾಮರ್ಸ್ ಕಂಪನಿ ಅಮೆಜಾನ್
- ಈ ವಿಸ್ತರಣೆಯು ಈ ಪ್ರದೇಶದ ಸಣ್ಣ ವ್ಯಾಪಾರಗಳು ಮತ್ತು ಉದ್ಯಮಗಳಿಗೆ ಭಾರತದಾದ್ಯಂತ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ನೆರವಾಗುತ್ತದೆ