ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮಧ್ಯೆಯೂ ಗ್ರಾಹಕರ ರಕ್ಷಣೆಗೆ ಒತ್ತು: ಭಾರತದಲ್ಲಿ ಇಂಧನ ದರ ಏರಿಕೆ ಅತಿ ಕಡಿಮೆ ಎಂದ ಕೇಂದ್ರ ಸರ್ಕಾರ

Fuel price hike in India: ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಇಂದಿನಿಂದ ಇಂಧನ ದುಬಾರಿಯಾಗುತ್ತಿದೆ. ಹೊರ್ಮುಜ್ ಬಿಕ್ಕಟ್ಟು ಆರಂಭವಾದ ಮೊದಲ 76 ದಿನಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಾಯ್ದುಕೊಂಡ ವಿಶ್ವದ ಏಕೈಕ ರಾಷ್ಟ್ರ ಅದು ಭಾರತ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಮೇ 23: ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದಾಗಿ (middle east crisis) ಭಾರತದಲ್ಲಿ ಇಂದಿನಿಂದ ಇಂಧನ ದುಬಾರಿಯಾಗುತ್ತಿದೆ (Fuel price hike) ಒಂಬತ್ತು ದಿನಗಳಲ್ಲಿ ಮೂರನೇ ಏರಿಕೆಯೊಂದಿಗೆ, ಮೇ 15 ರಿಂದ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 4.75 ರೂ. (ಶೇ. 5) ಹೆಚ್ಚಾಗಿದ್ದರೆ, ಡೀಸೆಲ್ ಬೆಲೆ 4.82 ರೂ. (ಶೇ. 5.49) ಗಳಷ್ಟು ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಅಂತ್ಯವಿಲ್ಲದ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಸರಬರಾಜಿನ ಐದನೇ ಒಂದು ಭಾಗವನ್ನು ನಿರ್ವಹಿಸುವ ಹೊರ್ಮುಜ್ ಜಲಸಂಧಿ (Strait of Hormuz) ಅಸ್ತವ್ಯಸ್ತಗೊಂಡಿದೆ. ಇದರಿಂದ ಕಚ್ಚಾ ತೈಲದ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಹೀಗಾಗಿ ಕಚ್ಚಾ ತೈಲ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿವೆ.

ಈ ಅವಧಿಯಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಇಂಧನ ಬೆಲೆಯನ್ನು ಹೆಚ್ಚಿಸಿದವು. ಆದರೆ, ಭಾರತ ಮಾತ್ರ ಬೆಲೆ ಏರಿಕೆ ಮಾಡಿರಲಿಲ್ಲ. ಮೇ 15ರಂದು ಮೊದಲ ಬಾರಿಗೆ ಏರಿಕೆ ಮಾಡಿತು. ಹೊರ್ಮುಜ್ ಬಿಕ್ಕಟ್ಟು ಆರಂಭವಾದ ಮೊದಲ 76 ದಿನಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಾಯ್ದುಕೊಂಡ ವಿಶ್ವದ ಏಕೈಕ ರಾಷ್ಟ್ರ ಅದು ಭಾರತ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮೇ 15, 19 ಮತ್ತು 23ರಂದು ನಡೆದ ಮೂರು ಹಂತದ ಬೆಲೆ ಏರಿಕೆಯಲ್ಲಿ ಒಟ್ಟಾರೆ ಪರಿಷ್ಕರಣೆ ಲೀಟರ್‌ಗೆ ಕೇವಲ 5 ರೂಪಾಯಿಗಿಂತ ಕಡಿಮೆಯಷ್ಟೇ ಆಗಿದೆ. ನೇರವಾಗಿ ಇಂಧನ ಸಬ್ಸಿಡಿ ನೀಡುವ ಗಲ್ಫ್ ರಾಷ್ಟ್ರಗಳನ್ನು ಹೊರತುಪಡಿಸಿದರೆ, ತೈಲವನ್ನು ಹೆಚ್ಚು ಆಮದು ಮಾಡುವ ರಾಷ್ಟ್ರದಿಂದ ಇದು ಅತಿ ಕಡಿಮೆ ಪ್ರಮಾಣದ ಬೆಲೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.

9 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ ತೈಲ ಕಂಪನಿಗಳು; ಕಾರಣ ಇಲ್ಲಿದೆ

ಇದಕ್ಕೆ ವಿರುದ್ದವಾಗಿ ಫೆಬ್ರವರಿ 23 ಮತ್ತು ಮೇ 23 ರ ನಡುವೆ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಶೇ. 44.5, ಯುಎಇಯಲ್ಲಿ ಶೇ. 52.4, ಪಾಕಿಸ್ತಾನದಲ್ಲಿ ಶೇ. 54.9, ಯುಕೆಯಲ್ಲಿ ಶೇ. 19.2, ಬಾಂಗ್ಲಾದೇಶದಲ್ಲಿ ಶೇ. 16.7 ಮತ್ತು ಜಪಾನ್‌ನಲ್ಲಿ ಶೇ. 9.7 ರಷ್ಟು ಏರಿಕೆಯಾಗಿದೆ.

ಗ್ರಾಹಕರ ರಕ್ಷಣೆ, ಪ್ರಸ್ತುತ ನಷ್ಟಗಳನ್ನು ತಾವು ಭರಿಸುವ ದಿಕ್ಕಿನಲ್ಲಿ ಸರ್ಕಾರ ಕೆಲಸ ಮಾಡಿದೆ ಎಂದು ಮತ್ತಷ್ಟು ಒತ್ತಿ ಹೇಳಲಾಗಿದೆ. ಇಂಧನದ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಸರ್ಕಾರ ನಡೆಸುತ್ತಿವೆ ಎಂದು ಕೇಂದ್ರ ಇದೇ ವೇಳೆ ಆರೋಪಿಸಿದೆ.

ರಷ್ಯಾ-ಉಕ್ರೇನ್ ಯುದ್ಧ ಮತ್ತು ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ ಕಳೆದ ನಾಲ್ಕು ವರ್ಷಗಳಲ್ಲಿ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ನಾಲ್ಕು ಬಾರಿ ಕಡಿತಗೊಳಿಸಿದೆ. ಈ ರೀತಿ ಮಾಡಿದ ವಿಶ್ವದ ಏಕೈಕ ದೇಶ ಎಂದರೆ ಅದು ಭಾರತ ಎಂದು ಕೇಂದ್ರ ಸರ್ಕಾರ ತಿಳಿಸಿದೆ.